ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

ಧ್ಯಾನವು ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವ ಒಂದು ಶಕ್ತಿಯುತವಾದ ಸಾಧನ ವಾಗಿದೆ. ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಧ್ಯಾನದ ಮಹತ್ವ ವನ್ನು ಸಾರಿದ್ದಾರೆ. ಈ ಕಾರಣದಿಂದ ಮಠದಲ್ಲಿ ಆತ್ಮಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಧ್ಯಾನಾಸಕ್ತರು ಬಂದು ಧ್ಯಾನವನ್ನು ಮಾಡುತ್ತಾರೆ

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

ಧರ್ಮಾಧಿಕಾರಿ ಜಯರಾಮ್ -

Ashok Nayak
Ashok Nayak Dec 20, 2025 10:43 PM

ಚಿಂತಾಮಣಿ: ಕೈವಾರ ಕ್ಷೇತ್ರದ ಸದ್ಗುರು ಶ್ರೀಯೋಗಿನಾರೇಯಣ ಮಠದಲ್ಲಿ ಡಿ.21ರಂದು ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: Dr S P Yoganna Column: ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಚಿಕಿತ್ಸೆ ನೀಡಿ, ಪುಸ್ತಕೋದ್ಯಮ ಉಳಿಸಿ

ಧ್ಯಾನವು ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವ ಒಂದು ಶಕ್ತಿಯುತವಾದ ಸಾಧನ ವಾಗಿದೆ. ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಧ್ಯಾನದ ಮಹತ್ವವನ್ನು ಸಾರಿದ್ದಾರೆ. ಈ ಕಾರಣದಿಂದ ಮಠದಲ್ಲಿ ಆತ್ಮಧ್ಯಾನ ಮಂದಿರವನ್ನು ನಿರ್ಮಿಸ ಲಾಗಿದೆ. ಪ್ರತಿನಿತ್ಯ ಧ್ಯಾನಾಸಕ್ತರು ಬಂದು ಧ್ಯಾನವನ್ನು ಮಾಡುತ್ತಾರೆ ಎಂದರು.

ಡಿ.21 ರಂದು ಬೆಳಿಗ್ಗೆ 6.30 ಕ್ಕೆ ಉಚಿತ ವಿಶೇಷ ಧ್ಯಾನ ಮತ್ತು ಪ್ರಾಣಾಯಾಮದ ಮಾರ್ಗದರ್ಶನ ವನ್ನು ಯೋಗಗುರುಗಳಾದ ನಾಗೇಂದ್ರ ಬೆಳವಾಡಿ ಅವರು ನಡೆಸಿಕೊಡುತ್ತಾರೆ. ಹಿಂದಿನ ದಿನ ರಾತ್ರಿ ಬರುವವರಿಗೆ ಊಟ-ವಸತಿಯನ್ನು ಕಲ್ಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಬರುವವರು ಮೊಬೈಲ್ ನಂಬರ್ 8710855196, 8123597790 ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದೆ.