Kannada Rajyotsava 2025:ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ಹುಟ್ಟಿಕೊಳ್ಳಲು ಕಾರಣವೇನು?ಇಲ್ಲಿದೆ ಸಂಪೂರ್ಣ ಮಾಹಿತಿ
Kannada Rajyotsava 2025: ಪ್ರತಿ ವರ್ಷದಂತೆ ಈ ವರ್ಷವು ಕೂಡ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು ಜನರು ಕನ್ನಡಾಂಬೆಯ ವಿವಿಧ ಘೋಷ ವಾಕ್ಯ ಕೂಗಿ, ಕನ್ನಡದ ಭಾವುಟದ ಧ್ವಜ ಹಾರಿಸಿ, ವಾಹನಗಳ ಮೇಲೂ ಧ್ಚಜವನ್ನಿಟ್ಟು ದಿನವಿಡಿ ಕನ್ನಡದ ಆರಾಧನೆ ಮಾಡಿ ಕೊಳ್ಳುತ್ತಿರುತ್ತಾರೆ. ಆದರೆ ಬಹುತೇಕರಿಗೆ ರಾಜ್ಯೋತ್ಸವ ಆಚರಿಸುವ ಮೊದಲು ನಮ್ಮ ರಾಜ್ಯದ ಹೆಸರು ಏನಾಗಿತ್ತು? ನಮ್ಮ ನಾಡಿನ ಧ್ವಜ ಏನನ್ನು ಸಂಕೇತಿಸುತ್ತದೆ ಇತರೆ ವಿಚಾರಗಳೆ ತಿಳಿದಿರಲಾರದು. ಈ ನಾಡಿನಲ್ಲಿ ಹುಟ್ಟಿ ಬದುಕು ಕಟ್ಟಿಕೊಳ್ಳುವವರಿಗೆ ನಮ್ಮ ರಾಜ್ಯ ಭಾವುಟದ ಹಿನ್ನೆಲೆ ತಿಳಿದುಕೊಳ್ಳುವುದು ಕೂಡ ಅನಿವಾರ್ಯ.
ಕನ್ನಡ ರಾಜ್ಯೋತ್ಸವ -
ಬೆಂಗಳೂರು: ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಘೋಷ ವಾಕ್ಯವು ಕುವೆಂಪು ಅವರಿಂದ ಜಗತ್ಪ್ರಸಿದ್ಧವಾಗಿದೆ. ತಾಯ್ನಾಡಿನ ಭಾಷೆ, ಅಭಿಮಾನ ಎಲ್ಲರಲ್ಲಿಯೂ ಹಾಸುಹೊಕ್ಕಿದಾಗ ಮಾತ್ರವೇ ಭಾಷೆಯೊಂದು ಉಳಿಯಲಿದೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು (Kannada Rajyotsava 2025) : ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು ಜನರು ಕನ್ನಡಾಂಬೆಯ ವಿವಿಧ ಘೋಷ ವಾಕ್ಯ ಕೂಗಿ, ಕನ್ನಡದ ಭಾವುಟದ ಧ್ವಜ ಹಾರಿಸಿ, ವಾಹನಗಳ ಮೇಲೆ ಧ್ಚಜವನ್ನಿಟ್ಟು ಕನ್ನಡದ ಆರಾಧನೆ ಮಾಡಲಾಗುತ್ತದೆ. ಆದರೆ ಬಹುತೇಕರಿಗೆ ರಾಜ್ಯೋತ್ಸವ ಆಚರಿಸುವ ಮೊದಲು ನಮ್ಮ ರಾಜ್ಯದ ಹೆಸರು ಏನಾಗಿತ್ತು? ನಮ್ಮ ನಾಡಿನ ಧ್ವಜ ಏನನ್ನು ಸಂಕೇತಿಸುತ್ತದೆ ಇತರೆ ವಿಚಾರಗಳೆ ತಿಳಿದಿರಲಾರದು. ಈ ನಾಡಿನಲ್ಲಿ ಹುಟ್ಟಿ ಬದುಕು ಕಟ್ಟಿಕೊಳ್ಳುವವರಿಗೆ ನಮ್ಮ ರಾಜ್ಯ ಭಾವುಟದ ಹಿನ್ನೆಲೆ ತಿಳಿದುಕೊಳ್ಳುವುದು ಕೂಡ ಒಂದು ಕರ್ತವ್ಯ ಇದ್ದಂತೆ.
ನಮ್ಮ ರಾಜ್ಯವು ಈ ಹಿಂದೆ ಮೈಸೂರು ಸಂಸ್ಥಾನ , ಮೈಸೂರು ರಾಜ್ಯ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಆಗ ಬಹುತೇಕ ರಾಜ ಮನೆತನಗಳು ಹಳದಿ ಕೆಂಪು ಬಾವುಟವನ್ನೇ ರಾಜ್ಯದೆಲ್ಲೆಡೆ ವಿಜಯಪತಾಕೆಯಂತೆ ಹಾರಿಸುತ್ತಿದ್ದವು. 1963ರಲ್ಲಿ ಬಿಡುಗಡೆಯಾದ ಕಂಚಿ ತಲೈವನ್ ಸಿನಿಮಾ ದಲ್ಲಿ ಕನ್ನಡದ ಮೊದಲ ರಾಜ ಮಯೂರ ವರ್ಮನ ಸಾಮ್ರಾಜ್ಯದ ಬಾವುಟವನ್ನು ತುಳಿಯುವಂಥ ದೃಶ್ಯಗಳು ಆ ಸಿನಿಮಾದಲ್ಲಿತ್ತು. ಅದನ್ನು ಕಂಡ ಕನ್ನಡಿಗರು ಸಿನಿಮಾದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಕನ್ನಡ ಪರ ಹೋರಾಟಗಾರರಾದ ಎಂ ರಾಮಮೂರ್ತಿಯವರು ತಮ್ಮ ನೇತೃತ್ವದಲ್ಲಿ ಪಾದಯಾತ್ರೆ ಮತ್ತು ಇತರ ತರನಾಗಿ ಪ್ರತಿಭಟನೆ ನಡೆಸಿದ್ದರು. ಬಳಿಕ ಎಲ್ಲೆಡೆ ವಿರೋಧವಾಗಿ ಹೋರಾಟ, ಪ್ರತಿಭಟನೆ ಇತ್ಯಾದಿಗಳ ಕಾರಣದಿಂದಾಗಿ ಆ ದೃಶ್ಯಕ್ಕೆ ಕತ್ತರಿ ಹಾಕಲಾಯಿತು. ದೃಶ್ಯದಲ್ಲಿ ನಮ್ಮ ರಾಜ್ಯದ ಬಾವುಟದ ಗೌರವಕ್ಕೆ ಧಕ್ಕೆ ಬಂದಿದೆ ಹೀಗಾಗಿ ನಮ್ಮ ಕನ್ನಡ ಧ್ವಜವೊಂದು ರೂಪು ಗೊಳ್ಳಬೇಕು, ಆ ಧ್ವಜವನ್ನು ಇಡೀ ಕನ್ನಡನಾಡಿನಾದ್ಯಂತ ಹಾರಿಸಬೇಕು ಎಂಬ ಪರಿಕಲ್ಪನೆ ಅಲ್ಲಿಂದ ಹುಟ್ಟಿಕೊಂಡಿತು.
ಬಳಿಕ ಕನ್ನಡದ ಕಣ್ವ, ಹಿರಿಯ ಸಾಹಿತಿಯಾದ ಬಿ.ಎಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕವಿತೆ ಒಂದನ್ನು ಬರೆದಿದ್ದರು. ಕನ್ನಡದ ಬಾವುಟವ ಹಿಡಿಯದವರಾರು, ಕನ್ನಡದ ಬಾವುಟಕೆ ಮಡಿಯವದರಾರು, ನಮ್ಮ ಈ ಬಾವುಟಕೆ ಮಿಡಿಯದ ವರಾರು ಎಂಬ ಸಾಲುಗಳು ಬಾವುಟದ ಬಗೆಗಿನ ಪರಿಕಲ್ಪನೆಯನ್ನು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.
ಇದನ್ನು ಓದಿ:Kannada Pustaka Habba: ನ.1ರಿಂದ ರಾಷ್ಟ್ರೋತ್ಥಾನ ಸಾಹಿತ್ಯದಿಂದ ʼಕನ್ನಡ ಪುಸ್ತಕ ಹಬ್ಬʼ
1965ರಲ್ಲಿ ರಾಮಮೂರ್ತಿಯವರು ರಾಜಕೀಯ ಪಕ್ಷವೆಂದು ಕನ್ನಡ ಪಕ್ಷ ಸ್ಥಾಪಿಸಿದ್ದರು. ಕನ್ನಡ ಪಕ್ಷದ ಅಧ್ಯಕ್ಷರಾದ ರಾಮ ಮೂರ್ತಿ ಅಧ್ಯಕ್ಷತೆಯಲ್ಲಿ ಕನ್ನಡಿಗರ ಮಹಾ ಸಮ್ಮೇಳನದಲ್ಲಿ ಪ್ರತ್ಯೇಕ ಕನ್ನಡ ಧ್ವಜದ ವಿಚಾರ ಚರ್ಚೆಯಾಗಿದೆ. ಅದೇ ಪಕ್ಷದೊಂದಿಗೆ ಒಂದು ಬಾವುಟವನ್ನು ಕೂಡ ಹುಟ್ಟು ಹಾಕಲಾಯಿತು. ಇದೆ ಮುಂದೆ ಕನ್ನಡದ ಬಾವುಟವಾಗಿ ಮಾರ್ಪಟ್ಟಿತು.
ಏನನ್ನು ಸೂಚಿಸುತ್ತದೆ?
ನಮ್ಮ ಧ್ವಜದ ಬಣ್ಣದ ಆಯ್ಕೆಗೂ ಕೂಡ ಒಂದು ಹಿನ್ನೆಲೆ ಇದೆ. ಬಾವುಟದ ಮೇಲಿನ ಹಳದಿ ಬಣ್ಣವು ಅರಿಶಿನದ ಪ್ರಕಾಶದಂತೆ ನಮ್ಮ ನಾಡು ನಿತ್ಯ ಶೋಭಿಸುತ್ತದೆ. ಅರಶಿನವು ಶಾಂತಿ, ಶುಭ, ಸಮೃದ್ಧಿ ಮತ್ತು ಸೌಹಾರ್ದದ ಸಂಕೇತವಾಗಿಯೂ. ಕೆಳಗಿನ ಕೆಂಪು ಬಣ್ಣವು ಧೈರ್ಯವನ್ನು , ಶೌರ್ಯ, ಬಲ, ಕ್ರಾಂತಿ ಮತ್ತು ತ್ಯಾಗದ ಪ್ರತೀಕವಾಗಿ ಸೂಚಿಸುತ್ತಿದ್ದು ಬಾವುಟದಲ್ಲಿ ಬಳಸಲಾಗಿದೆ. ಧ್ವಜ ಮಧ್ಯದಲ್ಲಿ ಕನ್ನಡದ ಏಳು ತೆನೆಗಳಿರುವ ಚಿತ್ರವಿರಬೇಕು ಎಂದು ಈ ಹಿಂದೆ ಕನ್ನಡ ಪರ ಹೋರಾಟಗಾರರು ನಿರ್ಧರಿಸಿದ್ದರು. ಆ ಏಳು ತೆನೆಗಳು, ಕನ್ನಡನಾಡನ್ನು ಆಳಿದ ಏಳು ರಾಜ ವಂಶಗಳ ಪ್ರತೀಕವಾಗಿರಬೇಕು ಎಂಬ ಪರಿಕಲ್ಪನೆಯನ್ನು ಹೊಂದಿತ್ತು. ಹೀಗೆ ಅನೇಕ ಕನ್ನಡ ಹೋರಾಟಗಾರರು ಸಾಹಿತಿಗಳ ಪರಿಶ್ರಮದಿಂದ ಧ್ವಜದ ಪರಿಕಲ್ಪನೆ ಬೆಳೆದುನಿಂತಿದೆ.
1973ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಕರ್ನಾಟಕವನ್ನು ಕರುನಾಡು ಎಂದು ಸಹ ಕರೆಯುತ್ತಾರೆ. ಕರುನಾಡು ಎಂದರೆ ಕಪ್ಪು ಮಣ್ಣಿನ ನಾಡು ಎಂದರ್ಥ ಕರು ಹಾಗೂ ನಾಡು ಎಂಬ ಎರಡು ಪದಗಳು ಸೇರಿ ಕರ್ನಾಟಕವಾಗಿದೆ. ಹೀಗೆ ನಮ್ಮ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ, ಧ್ವಜ ಎಲ್ಲವೂ ಅನೇಕ ವರ್ಷಗಳಿಂದ ಹೋರಾಟದಿಂದ ರಚಿತವಾಗಿದ್ದು ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಕೂಡವಾಗಿದೆ.