Bigg boss kannada: ಈ ವಾರ ಇವರಿಗೆ ಕಿಚ್ಚನ ಚಪ್ಪಾಳೆ ಸಿಗೋದು ಫಿಕ್ಸ್ ಅಂತೆ!
Bigg boss kannada season 12: ಈ ವಾರದ ಪ್ರೋಮೋ ಔಟ್ ಆಗಿದೆ. ನೆಟ್ಟಿಗರು ಇದೀಗ ಕಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಮನೆಯ ಸ್ಪರ್ಧಿಗಳನ್ನು ಬಿಗ್ಬಾಸ್ ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಅಂತಿಮವಾಗಿ ನೀಲಿ ತಂಡದ ಧನುಷ್ ಕ್ಯಾಪ್ಟನ್ ಆದರು.
-
Yashaswi Devadiga
Nov 1, 2025 10:05 AM
ಸೂರಜ್ ಬಂದ ಬಳಿಕ ಹೆಚ್ಚಾಗಿ ರಾಶಿಕಾ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ಅದೇಗೇ ಪ್ರೀತಿ ಮೂಡಲು ಸಾಧ್ಯ? ಅಂತ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸೂರಜ್ ಅವರಿಗೂ ಕಿಚ್ಚ ಕ್ಲಾಸ್ ತೆಗೆದುಕೊಳ್ಳಬೇಕು. ಆಟದಲ್ಲಿ ಡಬಲ್ ಗೇಮ್ ಆಡಿದ ಸೂರಜ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕು ಅಂತ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ರಕ್ಷಿತಾ ಅವರನ್ನು ಕೂಡ ಟಾರ್ಗೆಟ್ ಮಾಡಲಾಗುತ್ತಿದೆ. ಅಶ್ವಿನಿ, ಜಾನ್ವಿ ಅವರಿಗೆ ಹೇಗೆ ಕ್ಲಾಸ್ ಆಗಿತ್ತೋ ಅದೇ ರೀತಿ ರಾಶಿಕಾ ಅವರಿಗೂ ತೆಗೆದುಕೊಳ್ಳಿ ಅಂತ ಕಮೆಂಟ್ ಮಾಡಿದ್ದಾರೆ.
ಲವ್ ಸ್ಟೋರಿಗೆ ಬ್ರೇಕ್ ಹಾಕಿ ಬಿಗ್ಬಾಸ್ ಮನೆಗೆ ಬಂದಿರುವುದು ಯಾಕೆ ಎನ್ನುವುದನ್ನು ಸ್ಪರ್ಧಿಗಳಿಗೆ ಸುದೀಪ್ ತಿಳಿಸಬೇಕು ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ. ಬೇಕಂತಲೇ ರಕ್ಷಿತಾ ಶೆಟ್ಟಿ ಜೊತೆ ಜಗಳ, ಕೈ ನೋವಾಗಿದೆ ಎಂದು ನೆಪ ಹೇಳಿ ಅಡುಗೆ ಕೆಲಸದಿಂದ ತಪ್ಪಿಸಿಕೊಳ್ಳುವುದು, ಹೀಗೆ ಅನೇಕ ಕಾರಣಗಳನ್ನು ಕಮೆಂಟ್ ಮಾಡಿದ್ದಾರೆ.
ಈ ವಾರ ಇದೆಲ್ಲದರ ಹೊರತಾಗಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ರಾಶಿಕಾ. ಸೂರಜ್ ಅವರು ಅದ್ಯಾವಾಗ ಮನೆಗೆ ಎಂಟ್ರಿ ಕೊಟ್ರೋ ಅಲ್ಲಿಂದಲೇ ರಾಶಿಕಾ ಫುಲ್ ಚೇಂಜ್ ಆಗಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬೇಕೆಂಬ ಬಗ್ಗೆಯೂ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಕಿಚ್ಚನ ಚಪ್ಪಾಳೆ ರಘು ಅವರಿಗೆ ಸಿಗಬೇಕು ಅಂತ ಕಮೆಂಟ್ ಮಾಡಿದ್ದಾರೆ ವೀಕ್ಷಕರು. ಅದರಲ್ಲೂ ಈ ವಾರ ಈ ವಾರ ಬಿಗ್ಬಾಸ್ ಮನೆ ಸಂಪೂರ್ಣ ಕಾಲೇಜು ಆಗಿ ಬದಲಾಗಿತ್ತು. ಕ್ಯಾಪ್ಟನ್ ರಘು ಅವರೇ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ರೆ, ಇನ್ನುಳಿದ ಎಲ್ಲಾ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿದ್ದರು.
ಮಲ್ಲಮ್ಮ ಅಥವಾ ರಾಶಿಕಾ ಈ ವಾರ ಔಟ್ ಅಂತ ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು. ಮನೆಯಲ್ಲಿ ಸೈಲೆಂಟ್ ಆಗಿರೋ ಮಾಳು ಹೋಗಬೇಕು. ಮನೆಯಿಂದ ಆಚೆ ಬರುವ ಕಂಟೆಸ್ಟೆಂಟ್ ಧ್ರುವಂತ್ ಆಗಿರುತ್ತಾರೆ ಎಂದು ಬಿಗ್ಬಾಸ್ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಈ ವಾರದ ಪ್ರೋಮೋ ಔಟ್ ಆಗಿದೆ. ನೆಟ್ಟಿಗರು ಇದೀಗ ಕಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಈ ಬಾರಿ ಯಾರಿಗೆ ಸಿಗುತ್ತೆ ಕಿಚ್ಚನ ಚಪ್ಪಾಳೆ ಅನ್ನೋದೆ ಎಲ್ಲರಿಗಿರುವ ಕುತೂಹಲ.
ಇವತ್ತಿನ ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿದ್ದಾರೆ. ಈ ವಾರ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಾದ ಟಾಪಿಕ್ಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹಾಗೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ಇದೀಗ ವಾರದ ಕೊನೆಯಲ್ಲಿ ಕಳಪೆ ಪಟ್ಟ ತೊಟ್ಟು ಜೈಲು ಸೇರಿಕೊಂಡಿದ್ದಾರೆ.
ಈಗಾಗಲೇ ಶೋ 30 ದಿನ ಪೂರೈಸಿದೆ. ಇತ್ತೀಚೆಗೆ ನಡೆದ ಬಿಬಿ ಕಾಲೇಜ್ ಫೆಸ್ಟ್ನಲ್ಲಿ ಡ್ಯಾನ್ಸ್, ಸ್ಕಿಟ್ ಮಾಡಿ ಸ್ಪರ್ಧಿಗಳು ರಂಜಿಸಿದ್ದಾರೆ. ಕಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ರಾಶಿಕಾ, ದೃವಂತ್, ಮಲ್ಲಮ್ಮ, ಮಾಳು, ಅಶ್ವಿನಿ ಗೌಡ, ಗಿಲ್ಲಿ, ರಿಷಾ, ಧನುಷ್ ನಾಮಿನೇಟ್ ಆಗಿದ್ದಾರೆ.