ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kasturi Rangan Report: ಕಸ್ತೂರಿ ರಂಗನ್ ವರದಿ: ಸರ್ವಪಕ್ಷ ನಿಯೋಗ ?

ಮಲೆನಾಡು ಹಾಗೂ ಕರಾವಳಿ ಭಾಗದವರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿ ಯನ್ನು ವಿರೋಧಿಸಿ ಕೇಂದ್ರ ಸರಕಾರದ ಬಳಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸುವ ಸುಳಿವನ್ನು ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಉಡುಪಿ, ತೀರ್ಥಹಳ್ಳಿ ಹಾಗೂ ಸಕಲೇಶಪುರದಲ್ಲಿ ರೈತರು, ಸ್ಥಳೀಯರು ಹಾಗೂ ವಿವಿಧ ಸಂಘಟನೆ ಗಳೊಂದಿಗೆ ಸಂವಾದ ನಡೆಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯ ಸಂಗ್ರಹಿಸಿದ್ದಾರೆ

ಕಸ್ತೂರಿ ರಂಗನ್ ವರದಿ: ಸರ್ವಪಕ್ಷ ನಿಯೋಗ ?

-

Profile
Ashok Nayak Sep 21, 2026 9:04 AM

ರೈತರ ಅಭಿಪ್ರಾಯ ಕೇಂದ್ರಕ್ಕೆ ಮುಟ್ಟಿಸುವೆ: ಡಿಕೆ

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದವರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಕೇಂದ್ರ ಸರಕಾರದ ಬಳಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸುವ ಸುಳಿವನ್ನು ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಉಡುಪಿ, ತೀರ್ಥಹಳ್ಳಿ ಹಾಗೂ ಸಕಲೇಶಪುರದಲ್ಲಿ ರೈತರು, ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಂವಾದ ನಡೆಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಈ ವೇಳೆ ಕಸ್ತೂರಿ ರಂಗನ್ ವರದಿ(Kasturi Rangan Report)ಯ ಜಾರಿಯಿಂದ ರಾಜ್ಯದ ನೂರಾರು ಹಳ್ಳಿಗಳಿಗೆ ಸಮಸ್ಯೆ ಯಾಗುತ್ತದೆ ಎನ್ನುವ ಆತಂಕ ವ್ಯಕ್ತವಾಗಿದ್ದರಿಂದ ಸಕಲೇಶಪುರದಲ್ಲಿ ನಡೆದ ಸಭೆಯಲ್ಲಿ, ‘ಸರ್ವ ಪಕ್ಷ ನಿಯೋಗ’ದ ಪ್ರಸ್ತಾಪವನ್ನು ಮಂಡಿಸಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಿದ ಬಳಿಕ ಶಾಸಕರು, ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೊಯ್ದು ನಿಮ್ಮ ಅಭಿಪ್ರಾಯವನ್ನು ಮುಟ್ಟಿಸುತ್ತೇವೆ. ಸೆ.27ರೊಳಗೆ ಉತ್ತರ ನೀಡುವಂತೆ ಕೇಂದ್ರ ನಮಗೆ ಸೂಚಿಸಿದೆ.

ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ವರದಿ ತಿರಸ್ಕರಿಸಿzವು. ಈ ಮಧ್ಯೆ ಅಕ್ಕಪಕ್ಕದ ರಾಜ್ಯ ಗಳು ಕೆಲವು ಕ್ರಮಗಳ ಮೂಲಕ ತಿದ್ದುಪಡಿ ಮಾಡಿ ಬದಲಾವಣೆ ತಂದಿವೆ. ನಿಮ್ಮ ಪರವಾಗಿ, ನಿಮ್ಮ ಧ್ವನಿಯಾಗಿ ನಿಲ್ಲಲು ನಮ್ಮ ಸರಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: Kasturi Rangan Report: ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡಲ್ಲ: ಪರಮೇಶ್ವರ

ಜನರ ಅಭಿಪ್ರಾಯ ಮುಖ್ಯ: ಬಿಜೆಪಿಯವರು ಅಧಿವೇಶನದಲ್ಲಿ ಬರ, ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡದೇ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಾಲಹರಣ ಮಾಡಿದರು. ನಾನು ಅಧಿವೇಶನ ಮೊಟಕುಗೊಳಿಸಿ ರಾಜ್ಯದ ನಮ್ಮ ಶಾಸಕರು ಹಾಗೂ ಸಂಸದರ ಸಭೆ ಮಾಡಿದೆ. ಆಗ ಜನಪ್ರತಿನಿಧಿ ಗಳು ಇದರ ಮಹತ್ವದ ವಿವರಿಸಿದರು. ನಾನು ರಾಜೀನಾಮೆ ಪಡೆದ ಬಳಿಕ ಪಾದಯಾತ್ರೆ ಮಾಡಿದರು. ಆ ಮೂಲಕ ರಾಜಕೀಯವೇ ಹೆಚ್ಚು ಎಂದು ತೋರಿಸಿದ್ದಾರೆ.

ನಾನು ಇದಕ್ಕಾಗಿ ವಿಶೇಷ ಅಧಿವೇಶನ ಕರೆದಿದ್ದೇನೆ. ಅವರು ಭಾವನೆ ಮೇಲೆ ರಾಜಕಾರಣ ಮಾಡಿ ದರೆ, ನಾನು ಬದುಕಿನ ಮೇಲೆ ರಾಜಕಾರಣ ಮಾಡಲು ಜನರ ಬಳಿ ಬಂದಿದ್ದೇನೆ. ನಿಮ್ಮ ನೋವು, ಸಮಸ್ಯೆ ಆಲಿಸಲು ಬಂದಿದ್ದೇನೆ. ವಿಧಾನಸೌಧದಲ್ಲಿ ಚರ್ಚೆ ಮಾಡುವ ಮುನ್ನ ನಮ್ಮ ಶಾಸಕರು ಇಲ್ಲದ ಕ್ಷೇತ್ರಗಳ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ ಎಂದು ತಿಳಿಸಿದರು.

ವರದಿಯನ್ನು ತಿರಸ್ಕರಿಸಿ ಸಂವಾದ ಕಾರ್ಯಕ್ರಮದಲ್ಲಿ ಉಚ್ಚಂಗಿ ಗ್ರಾಮ ಪಂಚಾಯಿತಿಯ ಕೃಷಿಕ ಎಚ್.ಉದಯ, ದೇವಾಲದಕೆರೆಯ ಕೃಷಿಕರಾದ ಡಿ.ಎಸ್.ಲೋಕೇಶ್, ಬ್ಯಾಕರವಳ್ಳಿಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಮೇಘರಾಜು, ಮಾಜಿ ಶಾಸಕರಾದ ಎಚ್.ಎಂ.ವಿಶ್ವನಾಥ್ ಸೇರಿದಂತೆ ಅನೇಕರು, ಇದೊಂದು ಅವೈಜ್ಞಾನಿಕ ವರದಿ. ಈ ಭಾಗದಲ್ಲಿ ಪ್ರವಾಸೋದ್ಯಮ ಪ್ರಗತಿಗೆ ಈ ವರದಿಗೆ ಪೆಟ್ಟು ಬೀಳಲಿದೆ. ಹಾಸನ ಜಿಯಲ್ಲಿ ಅತಿ ಹೆಚ್ಚು ತೊಂದರೆಗೆ ಒಳಗಾದ ತಾಲೂಕು ಸಕಲೇಶಪುರ. ಈ ತಾಲೂಕಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಳ್ಳಿಗಳಿಗೆ ಈ ವರದಿಗೆ ಒಳಪಡುತ್ತಿವೆ ಎಂದರು.

image

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ನೋವು ಅರಿತು ಪರಿಹಾರ ನೀಡಲು ಪ್ರಜಾಸೇವೆ ಇಲಾಖೆ ಆರಂಭಿಸಿರುವೆ. ಶಾಸಕರು ಸಭೆಯಲ್ಲಿ ಭಾಗವಹಿಸದಿದ್ದರೂ ಜಿಲ್ಲೆಯ ಮಂತ್ರಿ ಗಳು ತಿಂಗಳಿಗೆ 2 ದಿನ 2 ತಾಲೂಕಿಗೆ ಹೋಗಬೇಕು. ಶಾಸಕರು ಜನರ ಬಳಿ ಹೋಗದೆ ಇದ್ದರೆ ಅಧಿಕಾರಿಗಳು ಹೋಗಬೇಕು.

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ