ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದ್ಯ ಪ್ರಿಯರಿಗೆ ಮತ್ತೆ ಶಾಕ್‌; ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಶೇ.20 ರಷ್ಟು ಬೆಲೆ ಹೆಚ್ಚಳ

ಮದ್ಯ ಪ್ರಿಯರಿಗೆ ಶಾಕ್‌ ಕೊಡಲು ಸರ್ಕಾರ ಸಜ್ಜಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಸರ್ಕಾರ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದ ವಿಸ್ಕಿ, ರಮ್ ಸೇರಿದಂತೆ ಸಾಮಾನ್ಯ ಮದ್ಯಗಳ ಬೆಲೆ ಕನಿಷ್ಠ ಶೇ.20ರಷ್ಟು ಹೆಚ್ಚಾಗಲಿದೆ.

ಮದ್ಯ ಪ್ರಿಯರಿಗೆ ಮತ್ತೆ ಶಾಕ್‌; ಮತ್ತೆ ಹೆಚ್ಚಾಗುತ್ತಾ ಬೆಲೆ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 19, 2026 2:04 PM

ಬೆಂಗಳೂರು: ಮದ್ಯ ಪ್ರಿಯರಿಗೆ ಶಾಕ್‌ ಕೊಡಲು ಸರ್ಕಾರ ಸಜ್ಜಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಸರ್ಕಾರ ಮದ್ಯದಲ್ಲಿನ (Liquor prices to increase) ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದ ವಿಸ್ಕಿ, ರಮ್ ಸೇರಿದಂತೆ ಸಾಮಾನ್ಯ ಮದ್ಯಗಳ ಬೆಲೆ ಕನಿಷ್ಠ ಶೇ.20ರಷ್ಟು ಹೆಚ್ಚಾಗಲಿದೆ. ಹೊಸ ವ್ಯವಸ್ಥೆಯ ನಿಯಮದಂತೆ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ (AIB) ಹೆಚ್ಚು ಇದ್ದರೆ ತೆರಿಗೆಯೂ ಹೆಚ್ಚಾಗಲಿದೆ.

ಈಗಾಗಲೇ MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದಲ್ಲಿಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿ ಆಗಲಿದೆ. ಈ ವಿಭಾಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ. 42.8ರಷ್ಟಿದೆ. ಇವೇ ನಾಲ್ಕು ಸ್ಲ್ಯಾಬ್‌ಗಳು ಒಟ್ಟು ಎಕ್ಸೈಸ್ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿದ್ದು, ಕಳೆದ ವರ್ಷ 180 ಮಿಲಿ ಮದ್ಯದ ಬೆಲೆ 80ರಿಂದ 95 ರೂಪಾಯಿಗೆ ಏರಿಕೆಯಾಗಿತ್ತು.

ಆದರೆ ಹೊಸ ತೆರಿಗೆ ವ್ಯವಸ್ಥೆಯ ನಂತರ 105-110ರೂಪಾಯಿವರೆಗೆ ದರ ಏರಿಕೆಯಾಗಬಹುದು ಎನ್ನಲಾಗಿದೆ. ಈಗಾಗಲೇ MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದಲ್ಲಿಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿ ಆಗಲಿದೆ. ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರು ಬಳಸುವ ಮದ್ಯವೇ ಹೆಚ್ಚು ದುಬಾರಿ ಆಗಲಿದ್ದು, ಮಾರುಕಟ್ಟೆಯ ಮೇಲೆ ಪರಿಣಾಮ ಬೀಳಬಹುದು ಎಂದು ತಿಳಿಸಿದ್ದಾರೆ.

Karnataka Budget 2026: ಇನ್ನು ಮದ್ಯದಲ್ಲಿ ಆಲ್ಕೋಹಾಲ್‌ ಕಂಟೆಂಟ್‌ ಜಾಸ್ತಿಯಾದಷ್ಟೂ ಅಧಿಕ ತೆರಿಗೆ!

ಬಿಯರ್‌ ಮಾರಾಟ ಹೆಚ್ಚಳ

ತಾಪಮಾನ ಏರಿಕೆಯಾದಂತೆ ಬಿಯರ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಬಿಯರ್‌ ಮಾರಾಟವು ಶೇ. 15 ರಷ್ಟು ಏರಿಕೆ ಕಂಡಿದೆ. ಹಿಂದಿನ ವರ್ಷ ಏ.1ರಿಂದ ಏ.16ರವರೆಗೆ 128.23 ಲಕ್ಷ ಲೀಟರ್‌ (16.44 ಲಕ್ಷ ಪೆಟ್ಟಿಗೆಗಳು) ಬಿಯರ್‌ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ146.48 ಲಕ್ಷ ಲೀಟರ್‌ (18.78 ಲಕ್ಷ ಪೆಟ್ಟಿಗೆಗಳು) ಬಿಯರ್‌ ಬಿಕರಿಯಾಗಿದೆ. ಇದರೊಂದಿಗೆ 18.25 ಲಕ್ಷ ಲೀ. (2.34 ಲಕ್ಷ ಪೆಟ್ಟಿಗೆಗಳು) ಮಾರಾಟ ಹೆಚ್ಚಳವಾಗಿದೆ.