IPL 2026: ಕೊನೆಗೂ ಕೆಕೆಆರ್ ತಂಡ ಸೇರಿದ ಲಂಕಾ ವೇಗಿ ಪತಿರಾಣ
Matheesha Pathirana joins KKR: ಭಾರತಕ್ಕೆ ಪ್ರಯಾಣಿಸುವ ಮೊದಲು ಪತಿರಾಣ ಶ್ರೀಲಂಕಾ ಕ್ರಿಕೆಟ್‌ನ ಫಿಟ್‌ನೆಸ್ ಪ್ರೋಟೋಕಾಲ್‌ಗಳನ್ನು ತೆರವುಗೊಳಿಸಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕಾಗಿರುವುದರಿಂದ ಕಾಯುವಿಕೆ ಮತ್ತಷ್ಟು ವಿಸ್ತರಿಸಿತ್ತು. ಐಪಿಎಲ್ ಹರಾಜಿನಲ್ಲಿ 18 ಕೋಟಿ ರೂ.ಗೆ ಅವರನ್ನು ಫ್ರಾಂಚೈಸಿ ಖರೀದಿಸಿತ್ತು.
Matheesha Pathirana -
ಕೋಲ್ಕತಾ, ಎ.19: ಶ್ರೀಲಂಕಾದ ವೇಗಿ ಮಥೀಷ ಪತಿರಾಣ ಕೊನೆಗೂ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡವನ್ನು ಸೇರಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ನಿರ್ಣಾಯಕ ಹಂತದಲ್ಲಿ ಸತತ ಸೋಲಿನಿಂದ ಸಂಕಷ್ಟದಲ್ಲಿದ್ದ ತಂಡಕ್ಕೆ ಅಗತ್ಯವಾದ ಬಲ ತುಂಬಿದ್ದಾರೆ. ಫ್ರಾಂಚೈಸಿ ವೇಗಿ ಆಗಮನದ ದೃಶ್ಯಗಳನ್ನು ಹಂಚಿಕೊಂಡಿದ್ದು, ಅವರ ಲಭ್ಯತೆಯ ಬಗ್ಗೆ ದಿನಗಟ್ಟಲೆ ಇದ್ದ ಅನಿಶ್ಚಿತತೆಯನ್ನು ಕೊನೆಗೊಳಿಸಿದೆ.
ಗಾಯದಿಂದಾಗಿ ಪತಿರಣ ತಡವಾಗಿ ತಂಡಕ್ಕೆ ಆಗಮಿಸಿದ್ದರು. ಈ ವರ್ಷದ ಆರಂಭದಲ್ಲಿ ಶ್ರೀಲಂಕಾದ ಟಿ20 ವಿಶ್ವಕಪ್ ಅಭಿಯಾನದ ಸಮಯದಲ್ಲಿ ಅವರು ಎಡಗಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ತಂಡದಿಂದ ಹೊರಗುಳಿದಿದ್ದರು ಮತ್ತು ಐಪಿಎಲ್ ಪ್ರವೇಶವನ್ನು ವಿಳಂಬಗೊಳಿಸಿದರು. ಸದ್ಯ ಅವರ ಆಗಮನ ತಂಡದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ನೀಡಿದಂತಾಗಿದೆ.
ಭಾರತಕ್ಕೆ ಪ್ರಯಾಣಿಸುವ ಮೊದಲು ಪತಿರಾಣ ಶ್ರೀಲಂಕಾ ಕ್ರಿಕೆಟ್‌ನ ಫಿಟ್‌ನೆಸ್ ಪ್ರೋಟೋಕಾಲ್‌ಗಳನ್ನು ತೆರವುಗೊಳಿಸಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕಾಗಿರುವುದರಿಂದ ಕಾಯುವಿಕೆ ಮತ್ತಷ್ಟು ವಿಸ್ತರಿಸಿತ್ತು. ಐಪಿಎಲ್ ಹರಾಜಿನಲ್ಲಿ 18 ಕೋಟಿ ರೂ.ಗೆ ಅವರನ್ನು ಫ್ರಾಂಚೈಸಿ ಖರೀದಿಸಿತ್ತು.
Just a reminder, Pathi ghar aa chuke hain 🥹💜 pic.twitter.com/g0A4Xsk8ty
— KolkataKnightRiders (@KKRiders) April 19, 2026
ಟಾಸ್ ಗೆದ್ದ ರಾಜಸ್ಥಾನ್
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಭಾನುವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ದುಕೊಂಡು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಪತಿರಾಣ ತಂಡ ಸೇರಿಸಿದರೂ ರಾಜಸ್ಥಾನ್ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಕಳೆದ ಪಂದ್ಯದಲ್ಲಿನ ತಂಡವನ್ನೇ ಮುಂದುವರಿಸಿತು.
ಉಭಯ ಆಡುವ ಬಳಗ
ಕೋಲ್ಕತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ(ನಾಯಕ), ಟಿಮ್ ಸೀಫರ್ಟ್(ವಿ.ಕೀ.), ಕ್ಯಾಮರೂನ್ ಗ್ರೀನ್, ರೋವ್ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ವರುಣ್ ಚಕ್ರವರ್ತಿ.
ರಾಜಸ್ಥಾನ್ ರಾಯಲ್ಸ್: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿ.ಕೀ.), ರಿಯಾನ್ ಪರಾಗ್(ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯ್.