ಸೋಲಿನ ಬೆನ್ನಲ್ಲೇ ಚೆನ್ನೈಗೆ ಗಾಯದ ಬರೆ; ಐಪಿಎಲ್‌ನಿಂದ ಮ್ಹಾತ್ರೆ ಹೊರಬೀಳುವ ಸಾಧ್ಯತೆ
Ayush Mhatre Injury Update: ಈಗಾಗಲೇ ವೇಗಿ ಖಲೀಲ್ ಅಹ್ಮದ್ ಸೇರಿ ಹಲವು ಆಟಗಾರರು ಗಾಯದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಮಧ್ಯೆ ಮ್ಹಾತ್ರೆ ಕೂಡ ಹೊರಬಿದ್ದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಗಾಯದಿಂದ ಚೇತರಿಕೆ ಕಂಡಿದ್ದರೂ ಧೋನಿ ಇನ್ನೂ ಕಣಕ್ಕಿಳಿದಿಲ್ಲ.
Ayush Mhatre’s injury -
ಚೆನ್ನೈ, ಎ.19: ಶನಿವಾರ ನಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್(CSK vs SRH) ವಿರುದ್ಧದ ಪಂದ್ಯದಲ್ಲಿ ಎಡ ಮಂಡಿರಜ್ಜು ಗಾಯ ಮಾಡಿಕೊಂಡಿದ್ದ ಆಯುಷ್ ಮ್ಹಾತ್ರೆ(Ayush Mhatre) ಮೂರು ವಾರಗಳ ಐಪಿಎಲ್(IPL 2026) ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ. ಉತ್ತಮ ಫಾರ್ಮ್‌ನಲ್ಲಿರುವ 18 ವರ್ಷದ ಆಯುಷ್ ಸೋಮವಾರ ಮುಂಬೈ ತಲುಪಿ ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಗುರುವಾರ ಆಡಲಿದೆ.
ಚೇಸಿಂಗ್ ಸಮಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಮ್ಹಾತ್ರೆ, 12 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಆದರೆ ಡಬಲ್ ರನ್ ಓಡುವಾಗ ಅವರ ಮಂಡಿರಜ್ಜು ಗಾಯವಾಗಿಯಿತು. ಸದ್ಯ ಅವರ ಗಾಯದ ನಿಜವಾದ ಸ್ಥಿತಿ ಸೋಮವಾರ ಅವರು ಪರೀಕ್ಷೆಗೆ ಹೋದಾಗ ತಿಳಿಯಲಿದೆ.
ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ, ಮ್ಹಾತ್ರೆ ಅವರ ಮಂಡಿರಜ್ಜು ಹರಿದಿದೆ ಎಂದು ಬಹಿರಂಗಪಡಿಸಿದ್ದು, "ಸ್ಪಷ್ಟವಾಗಿ ಮ್ಹಾತ್ರೆ ಅವರ ಮಂಡಿರಜ್ಜು ಹರಿದಿದೆ. ಅವರನ್ನು ಸ್ಕ್ಯಾನ್ ಮಾಡುತ್ತೇವೆ. ದುರದೃಷ್ಟವಶಾತ್ ಅವರು ಗಾಯಗೊಂಡಿರುವುದು ತುಂಬಾ ಕೆಟ್ಟದಾಗಿ ಕಾಣುತ್ತದೆ. ಮತ್ತು ಅವರು ನಮಗೆ ನಿಜವಾಗಿಯೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ದೊಡ್ಡ, ನಷ್ಟವಾಗಲಿದೆ" ಎಂದು ಹಸ್ಸಿ ಹೇಳಿದರು.
ಈಗಾಗಲೇ ವೇಗಿ ಖಲೀಲ್ ಅಹ್ಮದ್ ಸೇರಿ ಹಲವು ಆಟಗಾರರು ಗಾಯದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಮಧ್ಯೆ ಮ್ಹಾತ್ರೆ ಕೂಡ ಹೊರಬಿದ್ದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಗಾಯದಿಂದ ಚೇತರಿಕೆ ಕಂಡಿದ್ದರೂ ಧೋನಿ ಇನ್ನೂ ಕಣಕ್ಕಿಳಿದಿಲ್ಲ.
ಪಂದ್ಯ ಸೋತ ಚೆನ್ನೈ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು ಅಭಿಷೇಕ್ (59) ಮತ್ತು ಕ್ಲಾಸೆನ್ (59) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 194 ರನ್ ಗಳಿಸಿತು.
ಶ್ರೇಯಸ್ ಅಯ್ಯರ್ ಮುಂದಿನ ಟೀಮ್ ಇಂಡಿಯಾದ ಟಿ20 ನಾಯಕ?
ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಇಶಾನ್ (29ಕ್ಕೆ 3) ಮತ್ತು ನಿತೀಶ್ ಕುಮಾರ್ ರೆಡ್ಡಿ (31ಕ್ಕೆ 2) ಕಡಿವಾಣ ಹಾಕಿದರು. ಅಂತಿಮವಾಗಿ ಚೆನ್ನೈ ತಂಡ 8 ವಿಕೆಟ್‌ಗೆ 184 ರನ್ ಗಳಿಸಿ ಹೋರಾಟ ಮುಗಿಸಿತು. ಚೆನ್ನೈ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (7) ನಿರಾಸೆ ಮೂಡಿಸಿದರು. ಅವರು ಎರಡನೇ ಓವರ್‌ನಲ್ಲೇ ಪೆವಿಲಿಯನ್ ಸೇರಿಕೊಂಡರು. ನಾಯಕ ಋತುರಾಜ್ ಗಾಯಕವಾಡ್ (19) ಮತ್ತು ಆಯುಷ್ ಮ್ಹಾತ್ರೆ (30) ರನ್ ಗಳಿಸಿದರು.