ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026 Final: ಎರಡನೇ ಐಪಿಎಲ್‌ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು, ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ವಿವರ!

RCB vs GT IPL 2026 Final: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ಗೆ ಸಜ್ಜಾಗುತ್ತಿವೆ. ಈ ಹೈವೋಲ್ಟೇಜ್‌ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

RCB vs GT: ಐಪಿಎಲ್‌ ಫೈನಲ್‌ಗೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ಆರ್‌ಸಿಬಿ vs ಜಿಟಿ ನಡುವಣ 2026ರ ಐಪಿಎಲ್‌ ಫೈನಲ್‌ ಪಂದ್ಯ. -

Profile
Ramesh Kote May 30, 2026 3:30 PM

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು (RCB vs GT) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಫೈನಲ್‌ ಪಂದ್ಯ ಮೇ 31 ರಂದು ಭಾನುವಾರ ಇಲ್ಲಿನ ನರೇಂದ್ರ ಮೋದಿ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ತಂಡಗಳಿಗೂ ಇದು ಎರಡನೇ ಐಪಿಎಲ್‌ ಟ್ರೋಫಿಯಾಗಿದ್ದು, ಈ ಪಂದ್ಯ ಹೆಚ್ಚಿನ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ, 2025ರಲ್ಲಿ ಚೊಚ್ಚಲ ಐಪಿಎಲ್‌ ಚಾಂಪಿಯನ್‌ ಆಗಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಿ ಸತತ ಎರಡನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿಯಲು ಎದುರು ನೋಡುತ್ತಿದೆ.

ಟೂರ್ನಿಯ ಲೀಗ್‌ ಹಂತದಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಮೂಲಕ ಮೊದಲನೇ ಕ್ವಾಲಿಫೈಯರ್‌ ಆಡಿದ್ದ ಆರ್‌ಸಿಬಿ, ಗುಜರಾತ್‌ ಎದುರು 92 ರನ್‌ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಈ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಬ್ಯಾಟಿಂಗ್‌ ಪ್ರದರ್ಶವನ್ನು ತೋರಿದ್ದ ರಜತ್‌ ಪಾಟಿದಾರ್‌, ಆಡಿದ 33 ಎಸೆತಗಳಲ್ಲಿ ಅಜೇಯ 93 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಶುಭಮನ್‌ ಗಿಲ್‌ ನಾಯಕತ್ವದ ಜಿಟಿ, ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 53 ಎಸೆತಗಳಲ್ಲಿ 104 ರನ್‌ ಗಳಿಸುವ ಮೂಲಕ ಶುಭಮನ್‌ ಗಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಅವರು ಅದೇ ಲಯವನ್ನು ಮುಂದುವರಿಸಿ ತವರು ಅಂಗಣದಲ್ಲಿ ಆರ್‌ಸಿಬಿ ಎದುರು ಜಿಟಿಯನ್ನು ಗೆಲ್ಲಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅಂದ ಹಾಗೆ ಇದೇ ಅಂಗಣದಲ್ಲಿ ಆರ್‌ಸಿಬಿಯನ್ನು ಲೀಗ್‌ ಹಂತದಲ್ಲಿ ಜಿಟಿ ಮಣಿಸಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು.

ಪಿಚ್‌ ರಿಪೋರ್ಟ್‌

ಐಪಿಎಲ್‌ ಫೈನಲ್‌ ನಡೆಯುವ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಕೆಂಪು ಮಣ್ಣಿನಿಂದ ಕೂಡಿದ ಪಿಚ್‌ ಇದಾಗಿದ್ದು, ಚೆಂಡು ಬ್ಯಾಟ್‌ಗೆ ಸುಲಭವಾಗಿ ಬರಲಿದೆ. ಹೊಸ ಚೆಂಡಿನಲ್ಲಿ ವೇಗದ ಬೌಲರ್‌ಗಳು ಸ್ವಿಂಗ್‌ ಹಾಗೂ ಬೌನ್ಸ್‌ ಜೊತೆಗೆ ಬ್ಯಾಟ್ಸ್‌ಮನ್‌ಗಳ ಎದುರು ಪ್ರಾಬಲ್ಯ ಸಾಧಿಸಬಹುದು. ಆದರೆ, ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳು ಕೂಡ ಹಿಡಿತ ಸಾಧಿಸಬಹುದಾಗಿದೆ. ಆದರೆ, ಪಂದ್ಯದುದ್ದಕ್ಕೂ ಬ್ಯಾಟ್ಸ್‌ಮನ್‌ಗಳು ಮೇಲುಗೈ ಸಾಧಿಸಬಹುದು. ಈ ಅಂಗಣದ ಸರಾಸರಿ ಮೊತ್ತ 180 ರಿಂದ 200 ರನ್‌ಗಳಾಗಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ನಾಯಕ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ವೆಂಕಟೇಶ್‌ ಅಯ್ಯರ್‌, ದೇವದತ್‌ ಪಡಿಕ್ಕಲ್‌, ರಜತ್‌ ಪಾಟಿದಾರ್‌ (ನಾಯಕ), ಕೃಣಾಲ್‌ ಪಾಂಡ್ಯ, ಟಿಮ್‌ ಡೇವಿಡ್‌, ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌), ರಸಿಖ್‌ ದಾರ್‌ ಸಲಾಮ್‌, ಭುವನೇಶ್ವರ್‌ ಕುಮಾರ್‌, ಜಾಶ್‌ ಹೇಝಲ್‌ವುಡ್‌, ಜೇಕಬ್‌ ಡಫಿ

ಗುಜರಾತ್‌ ಟೈಟನ್ಸ್‌: ಶುಭಮನ್‌ ಗಿಲ್‌ (ನಾಯಕ), ಸಾಯಿ ಸುದರ್ಶನ್‌, ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌, ರಾಹುಲ್‌ ತೇವಾಟಿಯಾ, ಹೇಸನ್‌ ಹೋಲ್ಡರ್‌, ರಶೀದ್‌ ಖಾನ್‌, ಕಗಿಸೊ ರಬಾಡ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಸಾಯಿ ಕಿಶೋರ್‌

GT vs RR: ಶುಭಮನ್‌ ಗಿಲ್‌ ಶತಕ, ರಾಜಸ್ಥಾನ್‌ಗೆ ನಿರಾಶೆ, ಆರ್‌ಸಿಬಿಗೆ ಫೈನಲ್‌ನಲ್ಲಿ ಗುಜರಾತ್‌ ಎದುರಾಳಿ!

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 09

ಆರ್‌ಸಿಬಿ ತಂಡದ ಗೆಲುವು: 05

ಜಿಟಿ ತಂಡದ ಗೆಲುವು: 04

ಪಂದ್ಯದ ವಿವರ

2026ರ ಐಪಿಎಲ್‌ ಫೈನಲ್‌ ಪಂದ್ಯ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್‌ ಟೈಟನ್ಸ್‌

ದಿನಾಂಕ: ಮೇ 31, 2026

ಸಮಯ: ಸಂಜೆ 07: 30 ಕ್ಕೆ ಆರಂಭ

ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಸಿನಿಮಾ ಹಾಟ್‌ಸ್ಟಾರ್‌