ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Accident news: ಮೆಟ್ರೋ ವಯಾಡಕ್ಟ್‌ ಬಿದ್ದು ಆಟೋ ಚಾಲಕ ಸಾವು ಪ್ರಕರಣ: ಮೂವರ ಮೇಲೆ ಎಫ್‌ಐಆರ್

ಮೆಟ್ರೋ ಕಾಮಗಾರಿ ಎಡವಟ್ಟಿಗೆ ಆಟೋ ಚಾಲಕ ಬಲಿಯಾದ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿತ್ತು. ಘಟನೆಯಲ್ಲಿ ಆಟೋ ಚಾಲಕ ಖಾಸಿಂ ಸಾಬ್ (35) ಸ್ಥಳದಲ್ಲೇ ಮೃತಪಟ್ಟಿದ್ದರು. ವಯಾಡೆಕ್ಟ್ ಲಾರಿಯಿಂದ ಜಾರಿ ಪಕ್ಕದಲ್ಲಿದ್ದ ಆಟೋ ಮೇಲೆ ಬಿದ್ದು ಆಟೋ ಅಪ್ಪಚ್ಚಿಯಾಗಿತ್ತು. ಅದರಲ್ಲಿದ್ದ ಚಾಲಕ ಸ್ಥಳದಲ್ಲೇ ಸಾವನಪ್ಪಿದ್ದರು.

ಮೆಟ್ರೋ ವಯಾಡಕ್ಟ್‌ ಬಿದ್ದು ಆಟೋ ಚಾಲಕ ಸಾವು ಪ್ರಕರಣ: ಮೂವರ ಮೇಲೆ ಎಫ್‌ಐಆರ್

ವಯಾಡಕ್ಟ್‌ ಅಪಘಾತ

ಹರೀಶ್‌ ಕೇರ ಹರೀಶ್‌ ಕೇರ Apr 17, 2025 4:42 PM

ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ನಮ್ಮ ಮೆಟ್ರೋ ಕಾಮಗಾರಿಯ (Namma Metro work) ವಯಾಡೆಕ್ಟ್ (Viaduct) ಬಿದ್ದು ಆಟೋ ಚಾಲಕ ಸಾವನ್ನಪ್ಪಿದ್ದ (Accident case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಲಾರಿ ಚಾಲಕ, NCC ಕಂಪನಿ ಮ್ಯಾನೇಜರ್ ಮತ್ತು ಗುತ್ತಿಗೆದಾರನ ವಿರುದ್ಧ FIR ದಾಖಲಾಗಿದೆ. BNS 281, 106 ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆಟ್ರೋ ಕಾಮಗಾರಿ ಎಡವಟ್ಟಿಗೆ ಆಟೋ ಚಾಲಕ ಬಲಿಯಾದ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿತ್ತು. ಘಟನೆಯಲ್ಲಿ ಆಟೋ ಚಾಲಕ ಖಾಸಿಂ ಸಾಬ್ (35) ಸ್ಥಳದಲ್ಲೇ ಮೃತಪಟ್ಟಿದ್ದರು. ರಾತ್ರಿ ಮೆಟ್ರೋ ಕಾಮಗಾರಿಗೆಂದು ಲಾರಿಯಲ್ಲಿ ವಯಾಡೆಕ್ಟ್ ತರಲಾಗುತ್ತಿತ್ತು. ವಯಾಡೆಕ್ಟ್ ಲಾರಿಯಿಂದ ಜಾರಿ ಪಕ್ಕದಲ್ಲಿದ್ದ ಆಟೋ ಮೇಲೆ ಬಿದ್ದು ಆಟೋ ಅಪ್ಪಚ್ಚಿಯಾಗಿತ್ತು. ಅದರಲ್ಲಿದ್ದ ಚಾಲಕ ಸ್ಥಳದಲ್ಲೇ ಸಾವನಪ್ಪಿದ್ದರು.

ತಡರಾತ್ರಿ ಏರ್‌ಪೋರ್ಟ್‌ ಮಾರ್ಗದ ಮೆಟ್ರೊ ಕಾಮಗಾರಿಗೆ ಬಳಸಲು ವಯಾಡಕ್ಟ್ ಕೊಂಡೊಯ್ಯುತ್ತಿದ್ದ ಲಾರಿ ತಿರುವು ಪಡೆಯುವಾಗ ಅವಘಡ ಸಂಭವಿಸಿದೆ. ಅವಘಡದ ಮುನ್ಸೂಚನೆ ಅರಿತ ಪ್ರಯಾಣಿಕ ತಕ್ಷಣ ಆಟೊದಿಂದ ಇಳಿದಿದ್ದಾರೆ. ಆದರೆ, ಖಾಸೀಂ ಸಾಬ್ ಇಳಿಯುವಷ್ಟರಲ್ಲಿ ವಯಾಡಕ್ಟ್ ಉರುಳಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅವಘಡವನ್ನು ಕಂಡ ಜನ ಕೂಡಲೇ ರಕ್ಷಣೆಗೆ ಧಾವಿಸಿದ್ದರು. ಆದರೆ ಬೃಹದಾಕಾರದ ವಯಾಡಕ್ಟ್ ತೆರವುಗೊಳಿಸಲು ಕ್ರೇನ್ ಇರದ ಕಾರಣ ಪ್ರಯತ್ನ ವಿಫಲವಾಗಿದೆ. ಘಟನೆ ನಡೆದ ಎರಡು ಗಂಟೆಗಳ ಬಳಿ ಕ್ರೇನ್ ತರಿಸಿ ವಯಾಡಕ್ಟ್ ತೆರವುಗೊಳಿಸಿ ಮೃತದೇಹವನ್ನು ಹೊರ ತೆಗೆಯಲಾಗಿತ್ತು. ವಯಾಡಕ್ಟ್‌ ಸಾಗಣೆಯ ಸಂದರ್ಭದಲ್ಲಿ ಸೂಕ್ತ ಎಚ್ಚರಿಕೆ ವಹಿಸದ ಕಂಪನಿ ಮ್ಯಾನೇಜರ್‌, ಲಾರಿ ಚಾಲಕ ಮತ್ತು ಗುತ್ತಿಗೆದಾರರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೂವರನ್ನೂ ವಿಚಾರಣೆಗೆ ಕರೆಸಲಾಗಿದೆ.

ಇದನ್ನೂ ಓದಿ: Rajat Kishan: ರಜತ್‌ ಕಿಶನ್‌ಗೆ 14 ದಿನ ನ್ಯಾಯಾಂಗ ಬಂಧನ; ವಿನಯ್‌ ಗೌಡಗೆ ರಿಲೀಫ್‌