ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಳಪೆ ಆಹಾರ ನೀಡಿದ 23 ಪಿಜಿಗಳಿಗೆ ನೋಟಿಸ್ ಜಾರಿ

ಆಹಾರದ 12 ಮಾದರಿ ಸಂಗ್ರಹ: ಪಿಜಿಗಳಲ್ಲಿ ತಯಾರಿಸುವ ಹಾಗೂ ನೀಡುವ ಆಹಾರದ ಗುಣ ಮಟ್ಟ ಪರಿಶೀಲಿಸಲು ಅಧಿಕಾರಿಗಳು 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆಹಾರ ಸಂಗ್ರಹಣೆ, ತಯಾರಿಕೆ, ಸ್ವಚ್ಛತೆ ಹಾಗೂ ಸುರಕ್ಷತಾ ನಿಯಮಗಳನ್ನು ಅಧಿಕಾರಿ ಗಳು ಪರಿಶೀಲಿಸಿದ್ದಾರೆ.

ಕಳಪೆ ಆಹಾರ ನೀಡಿದ 23 ಪಿಜಿಗಳಿಗೆ ನೋಟಿಸ್ ಜಾರಿ

-

Profile
Ashok Nayak Sep 6, 2026 4:27 PM

ಬೆಂಗಳೂರು: ನಗರ, ಗ್ರಾಮಾಂತರ ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯ 64 ಪೇಯಿಂಗ್ ಗೆ (ಪಿ.ಜಿ) ವಸತಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿzರೆ. ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಹಾಗೂ ಸ್ವಚ್ಛತೆ ಕಾಪಾಡುತ್ತಿಲ್ಲ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. 23 ಪಿಜಿ ಗಳಿಗೆ ನೋಟಿಸ್: ತಪಾಸಣೆ ವೇಳೆ 23 ಪಿಜಿಗಳಲ್ಲಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ನಿಯಮ ಗಳ ಉಲ್ಲಂಘನೆ ಪತ್ತೆಯಾಗಿದ್ದು, ಸಂಬಂಧಪಟ್ಟವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಅವಧಿ ಮೀರಿದ ಮೊಸರು, ಅಕ್ಕಿ ಹಿಟ್ಟು, ಬಿಸಿಬೇಳೆ ಬಾತ್ ಪುಡಿ, ಕೃತಕ ಆಹಾರ ಬಣ್ಣ, ಕಾಳುಮೆ ಣಸು ಸೇರಿದಂತೆ ವಿವಿಧ ಆಹಾರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲವು ಕಡೆ ಬ್ರ್ಯಾಂಡ್ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಯೂ ಕಂಡುಬಂದಿದೆ.

ಇದನ್ನೂ ಓದಿ: Bangalore News: ಕಾನೂನು ಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ. ಅನುದಾನ ವಾಪಸ್ ಪಡೆಯುವಂತೆ ಎರಡನೇ ಬಾರಿಗೆ ಹೈ ಕೋರ್ಟ್ ಆದೇಶ

ಆಹಾರದ 12 ಮಾದರಿ ಸಂಗ್ರಹ: ಪಿಜಿಗಳಲ್ಲಿ ತಯಾರಿಸುವ ಹಾಗೂ ನೀಡುವ ಆಹಾರದ ಗುಣ ಮಟ್ಟ ಪರಿಶೀಲಿಸಲು ಅಧಿಕಾರಿಗಳು 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆಹಾರ ಸಂಗ್ರಹಣೆ, ತಯಾರಿಕೆ, ಸ್ವಚ್ಛತೆ ಹಾಗೂ ಸುರಕ್ಷತಾ ನಿಯಮ ಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬೊಮ್ಮನಸಂದ್ರದ ನಂದನಾ ಎಲೈಟ್ ಪಿಜಿಯಲ್ಲಿ ಗಂಭೀರ ನೈರ್ಮಲ್ಯ ಉಲ್ಲಂಘನೆ ಪತ್ತೆಯಾಗಿದೆ. ಆಹಾರ ಪದಾರ್ಥಗಳಿದ್ದ ಊಟದ ಮೇಜಿನ ಬಳಿಯೇ ತಿಗಣೆ ನಿವಾರಕ ಪುಡಿ ಪತ್ತೆಯಾಗಿದ್ದು, ಕುಡಿಯುವ ನೀರಿನ ಸ್ಥಳದಲ್ಲೂ ಅನಗತ್ಯ ವಸ್ತುಗಳನ್ನು ಸಂಗ್ರಹಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಿಜಿಯ ಊಟದ ಪ್ರದೇಶವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.

ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಿಜಿ ಮಾಲೀಕರು ಹಾಗೂ ಆಹಾರ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಇಲಾಖೆ ಸೂಚಿಸಿದೆ.