ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂದುವರಿದ ಮಧ್ಯಪ್ರಾಚ್ಯ ಸಂಘರ್ಷ: ಇರಾನ್‌ನ 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ

US Strikes Iranian Oil Tankers: ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ಮತ್ತೆ ದಾಳಿ ಮಾಡಿದೆ. ದಾಳಿಯ ಸಮಯದಲ್ಲಿ ಯಾವುದೇ ಅಮೆರಿಕನ್ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ. ಅಗತ್ಯಬಿದ್ದರೆ ಇರಾನ್‌ನ ಸಂಪೂರ್ಣ ತೈಲ ನೌಕಾಪಡೆಯನ್ನೇ ಧ್ವಂಸಗೊಳಿಸಲು ಸಿದ್ಧ ಎಂದು ಅಮೆರಿಕ ಎಚ್ಚರಿಸಿದೆ.

ಇರಾನ್‌ನ 3 ತೈಲ ಟ್ಯಾಂಕರ್‌ಗಳ ಮೇಲೆ ಮತ್ತೆ ಅಮೆರಿಕ ದಾಳಿ

ಸಾಂದರ್ಭಿಕ ಚಿತ್ರ -

Priyanka P
Priyanka P Sep 6, 2026 5:24 PM

ಟೆಹರಾನ್, ಸೆ. 6: ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ಮತ್ತೆ ದಾಳಿ (US Military Strike) ಮಾಡಿದೆ. ಪ್ರಾದೇಶಿಕ ಜಲಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕ ನೌಕಾಪಡೆಯ ಎರಡು ಯುದ್ಧನೌಕೆಗಳ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ನಂತರ, ಅಮೆರಿಕದ ಪಡೆಗಳು ಇರಾನಿನ ಮೂರು ಕಚ್ಚಾ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ (US Strikes Iranian Oil Tankers) ನಡೆಸಿವೆ.

ಖಾರ್ಗ್ ದ್ವೀಪದ ಕರಾವಳಿ ಮತ್ತು ಜಾಸ್ಕ್ ಬಳಿ ಇದ್ದ ಇರಾನಿನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಒಡೆತನದ ಎಂ/ಟಿ ಡೌನಿ ಮತ್ತು ಎಂ/ಟಿ ಸ್ಟಾರ್ಕ್ 1 ಎಂಬ ಎರಡು ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿವೆ. ಇದರೊಂದಿಗೆ ಒಮಾನ್ ಕೊಲ್ಲಿಯಲ್ಲಿ ತೈಲ ತುಂಬಿರದ ಮತ್ತೊಂದು ಟ್ಯಾಂಕರ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ:



ದಾಳಿಯ ಸಮಯದಲ್ಲಿ ಯಾವುದೇ ಅಮೆರಿಕನ್ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ. ಅಮೆರಿಕದ ಮಿಲಿಟರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಅಗತ್ಯಬಿದ್ದರೆ ಇರಾನ್‌ನ ಸಂಪೂರ್ಣ ತೈಲ ನೌಕಾಪಡೆಯನ್ನೇ ಧ್ವಂಸಗೊಳಿಸಲು ಸಿದ್ಧವಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಕಮಾಂಡರ್ ಆದ ಅಡ್ಮಿರಲ್ ಬ್ರಾಡ್ ಕೂಪರ್ ಎಚ್ಚರಿಸಿದ್ದಾರೆ.

ಮದುವೆ ಸಮಾರಂಭದ ಮೇಲೆ ದಾಳಿ; ಇದನ್ನು ಅಮೆರಿಕ ಮರೆಯಲಾಗದಂತೆ ಮಾಡುತ್ತೇವೆ: ಇರಾನ್ ಎಚ್ಚರಿಕೆ

ಇನ್ನು ಅಮೆರಿಕ ನಡೆಸಿದ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ತೈಲ ಟ್ಯಾಂಕರ್ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.

ಮಗನನ್ನು ಕೊಲೆ ಮಾಡಲು ಇರಾನ್ ಪ್ರಯತ್ನಿಸಿತ್ತು ಎಂದಿದ್ದ ನೆತನ್ಯಾಹು

ʼʼಇರಾನ್ ನನ್ನ ಒಬ್ಬ ಮಗನನ್ನು ಹತ್ಯೆ ಮಾಡಲು ಪ್ರಯತ್ನ ನಡೆಸಿತ್ತುʼʼ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇತ್ತೀಚೆಗೆ ಸ್ಫೋಟಕ ಹೇಳಿಕೆ ನೀಡಿದ್ದರು. ಮಗನ ಹತ್ಯೆಗೆ ಎಲ್ಲಿ, ಹೇಗೆ, ಯಾವಾಗ ಪ್ರಯತ್ನ ನಡೆಸಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿರಲಿಲ್ಲ. ನೆತನ್ಯಾಹು ಅವರ ಯಾವ ಪುತ್ರನನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂಬುದನ್ನು ಕೂಡ ಹೇಳಿರಲಿಲ್ಲ.

ನೆತನ್ಯಾಹು ಅವರಿಗೆ ಅವ್ನರ್ ಮತ್ತು ಯೈರ್ ಎಂಬ ಇಬ್ಬರು ಪುತ್ರರಿದ್ದು, ಅವರಲ್ಲಿ ಯಾರ ಮೇಲೆ ಇರಾನ್ ದಾಳಿ ನಡೆಸಲು ಪ್ರಯತ್ನಿಸಿತ್ತು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಇರಾನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.