ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WIFI ID name: ವೈಫೈ ಐಡಿ ಹೆಸರಿನಲ್ಲಿ ಕಾಣಿಸಿಕೊಂಡ ದೇಶದ್ರೋಹಿ ಹೆಸರು, ಜನ ಶಾಕ್‌

Pakistan Zindabad: ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ಕೆಲವರು ಮೊಬೈಲ್ ವೈಫೈ ಕನೆಕ್ಷನ್​ ಸರ್ಚಿಂಗ್​ ವೇಳೆ ಪಾಕಿಸ್ತಾನ ಜಿಂದಾಬಾದ್ ಯೂಸರ್ ಐಡಿ ನೇಮ್ ತೋರಿಸಿದೆ. ಇದನ್ನು ಕಂಡವರು ಶಾಕ್‌ ಆಗಿದ್ದು, ಆತಂಕ ಹೊರಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ವೈಫೈ ಐಡಿ ಹೆಸರಿನಲ್ಲಿ ಕಾಣಿಸಿಕೊಂಡ ದೇಶದ್ರೋಹಿ ಹೆಸರು, ಜನ ಶಾಕ್‌

-

ಹರೀಶ್‌ ಕೇರ ಹರೀಶ್‌ ಕೇರ Oct 29, 2025 12:40 PM

ಬೆಂಗಳೂರು, ಅ.29: ವೈಫೈ ಐಡಿ ನೇಮ್​ನಲ್ಲಿ (WiFi ID name) ಪಾಕಿಸ್ತಾನ ಜಿಂದಾಬಾದ್ (Pakistan Zindabad) ಎನ್ನುವ ಹೆಸರು ಕಾಣಿಸಿಕೊಂಡಿದ್ದು, ನೆಟ್​ವರ್ಕ್ (Network)​ ಐಡಿ ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ. ಬೆಂಗಳೂರು (Bengaluru) ಹೊರವಲಯ ಜಿಗಣಿ (jigani) ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ಈ ಐಡಿ ಕಾಣಿಸಿಕೊಂಡಿದ್ದು, ಜನರು ಆತಂಕ ಹೊರಹಾಕಿದ್ದಾರೆ. ದೇಶದ್ರೋಹಿ ಯೂಸರ್ ಐಡಿ ನೇಮ್ ಬಳಸುತ್ತಿರುವವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ಕೆಲವರು ಮೊಬೈಲ್ ವೈಫೈ ಕನೆಕ್ಷನ್​ ಸರ್ಚಿಂಗ್​ ವೇಳೆ ಪಾಕಿಸ್ತಾನ ಜಿಂದಾಬಾದ್ ಯೂಸರ್ ಐಡಿ ನೇಮ್ ತೋರಿಸಿದೆ. ಇದನ್ನು ಕಂಡವರು ಶಾಕ್‌ ಆಗಿದ್ದು, ಆತಂಕ ಹೊರಹಾಕಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಭಜರಂಗದಳ ಕಾರ್ಯಕರ್ತರು ಈ ಬಗ್ಗೆ ದೂರು ಕೊಟ್ಟಿದ್ದು, ಎನ್‌ಸಿಆರ್ ದಾಖಲು ಮಾಡಿ ತನಿಖೆಗೆ ಮುಂದಾಗಿದ್ದಾರೆ.

ಇನ್‌ಸ್ಟಾದಲ್ಲಿ ಬಾಲಕಿಯ ಪರಿಚಯಿಸಿಕೊಂಡು ಕಿರುಕುಳ, ಮೂವರ ಸೆರೆ

ಹಾನಗಲ್:‌ ಇನ್‌ಸ್ಟಾಗ್ರಾಂನಲ್ಲಿ ಪರಿಚಿತವಾದ 10ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹಾನಗಲ್‌ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರು ಹಾಗೂ ಅವರಿಗೆ ಸಹಾಯ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ. 10ನೇ ತರಗತಿಯ ಓದುತ್ತಿದ್ದ ಬಾಲಕಿಗೆ ಆರೋಪಿ ಉದಯ್‌ ಎಂಬಾತ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ. ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಪ್ರೀತಿ ಮಾಡುವುದಾಗಿ ನಂಬಿಸಿ, ಮೂಡೂರ ಗ್ರಾಮದ ಮರಿಯಮ್ಮ ಜಾತ್ರೆಗೆ ಹೋದಾಗ, ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಲ್ಲದೆ ತನ್ನ ದೊಡ್ಡಪ್ಪನ ಜಮೀನಲ್ಲಿಯೂ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅನಂತರ ದಿನಗಳಲ್ಲಿ ಅವರಿಬ್ಬರೂ ದೂರವಾಗಿದ್ದರು.

ಇದನ್ನೂ ಓದಿ: Assault Case: ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ, ಶಿಕ್ಷಕಿಯ ನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ

2025ರ ಏಪ್ರಿಲ್‌ನಲ್ಲಿ ಇದೇ ಬಾಲಕಿಯನ್ನು ಇನ್ನೊಬ್ಬ ಆರೋಪಿ ಕಿಶನ್ ಎಂಬಾತ ಬಾಲಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು, ಎರಡು ಬಾರಿ ದೈಹಿಕ ಸಂಪರ್ಕ ಮಾಡಿದ್ದ. ಅನಂತರ ಈತನ ಸ್ನೇಹಿತರಾದ ಆಕಾಶ ಪರಶುರಾಮ ಮಂತಗಿ ಮತ್ತು ಚಂದ್ರು ಬಾಲಕಿಯನ್ನು ಕಿಶನ್‌ನೊಂದಿಗೆ ಹೋಗಲು ಸಹಾಯ ಮಾಡಿದ್ದಲ್ಲದೆ, ಬಾಲಕಿಗೆ ಅವಾಚ್ಯವಾಗಿ ನಿಂದಿಸಿದ್ದರು. ಇದಾದ ಬಳಿಕ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದಾಗ ಆಕೆ 8 ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ವೈದ್ಯರಿಂದ ತಿಳಿದುಬಂದಿದೆ. ಈ ಕುರಿತು ಅ. 22ರಂದು ಬಾಲಕಿಯ ತಾಯಿ ನೀಡಿದ ದೂರಿನ ನೀಡಿದ ಮೇರೆಗೆ ಹಾನಗಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.