ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

National level relay competition: ರಾಜ್ಯಮಟ್ಟದ ಕ್ರೀಡಾಕೂಟ: ಜಿಲ್ಲೆಗೆ 4*400 ಮೀ ರಿಲೆಯಲ್ಲಿ ಚಿನ್ನದ ಪದಕ, 4*100 ಮೀ ರಿಲೆಯಲ್ಲಿ ಬೆಳ್ಳಿ ಪದಕ

ಇದೇ ತಿಂಗಳು 18 ರಿಂದ 20ರ ತನಕ ಚಂಡೀಗಢದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ರಿಲೇ ಸ್ಪರ್ಧೆಗೆ ಶಿಡ್ಲಘಟ್ಟ ತಾಲ್ಲೂಕಿನ ಕು|| ಸಿರಿನಾಗರಾಜ್, ಅಕ್ಷಯಶೇಖರ್, ಹಾತ್ಮೀನಾ, ನೂಪ್ರಾಹೊಳ್ಳಾ ಕ್ರೀಡಾಪಟುಗಳು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

ಜಿಲ್ಲೆಗೆ 4*400 ಮೀ ರಿಲೆಯಲ್ಲಿ ಚಿನ್ನ, 4*100 ಮೀ ರಿಲೆಯಲ್ಲಿ ಬೆಳ್ಳಿ ಪದಕ

-

Ashok Nayak
Ashok Nayak Mar 9, 2026 11:00 PM

ಚಿಕ್ಕಬಳ್ಳಾಪುರ/ಬೆಂಗಳೂರು: ಮಾ.7 ರಿಂದ ಮಾ.8ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 20 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ 4*400 ಮೀ ರಿಲೆ ಓಟದ ಸ್ಪರ್ಧೆಯಲ್ಲಿ ಜಿಲ್ಲೆಗೆ ಚಿನ್ನದ ಪದಕ ಪಡೆದು, ಇದೇ ತಿಂಗಳು 18 ರಿಂದ 20ರ ತನಕ ಚಂಡೀಗಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ರಿಲೇ ಸ್ಪರ್ಧೆಗೆ ಶಿಡ್ಲಘಟ್ಟ ತಾಲ್ಲೂಕಿನ ಕು|| ಸಿರಿನಾಗರಾಜ್, ಅಕ್ಷಯಶೇಖರ್, ಹಾತ್ಮೀನಾ, ನೂಪ್ರಾಹೊಳ್ಳಾ ಕ್ರೀಡಾಪಟುಗಳು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: T20 World Cup: 2014ರ ಪೆಟ್ರೋಲ್‌ ಬಂಕ್‌ನಲ್ಲಿನ ಫೋಟೋಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್‌ ಯಾದವ್‌!

4*100 ಮೀ. ರಿಲೇ ಓಟದಲ್ಲಿ ಚಿಂತಾಮಣಿಯ ಗೌರಿಶಂಕರ್, ಉತ್ತಮ್, ಸ್ಯಾಮುಯಲ್, ಸಂದೀಪ್ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಈ ಕ್ರೀಡಾಕೂಟದಲ್ಲಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಭಕ್ತರಹಳ್ಳಿ ನಾಗರಾಜ್, ಸದಸ್ಯರಾದ ಭರತ್‍ಕುಮಾರ್ ರವರು ಉಪಸ್ಥಿತರಿದ್ದು, ಚಿನ್ನದ ಪದಕ ಪಡೆದ ಕು|| ಸಿರಿನಾಗರಾಜ್ ಮತ್ತು ಬೆಳ್ಳಿ ಪದಕ ಪಡೆದ ಚಿ|| ಗೌರಿಶಂಕರ್ ರವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ (Chikkaballapur District Athletic Institute)ಯ ಅಧ್ಯಕ್ಷರಾದ ಕೆ.ವಿ.ನವೀನ್‍ಕಿರಣ್‍ರವರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕವನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವಂತೆ ಶುಭ ಹಾರೈಸಿದ್ದಾರೆ.