ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರರಾಜ್ಯ ಪೊಲೀಸರ ಎಂಟ್ರಿಗೆ ಅನುಮತಿ ಬೇಕು: ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ

ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧ ಹಾಗೂ ತನಿಖಾಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹೊರರಾಜ್ಯಗಳ ಪೊಲೀಸರು ತನಿಖೆಗೆ ಬಂದಾಗ ಸ್ಥಳೀಯ ಪೊಲೀಸ ರೊಂದಿಗೆ ಕಡ್ಡಾಯವಾಗಿ ಸಮನ್ವಯ ಸಾಧಿಸಬೇಕು ಎಂದು ಹೈಕೋರ್ಟ್(High Court) ಆದೇಶಿಸಿದೆ.

ಹೊರರಾಜ್ಯ ಪೊಲೀಸರ ಎಂಟ್ರಿಗೆ ಅನುಮತಿ ಬೇಕು

-

Profile
Ashok Nayak Nov 4, 2026 9:58 AM

ಬೆಂಗಳೂರು: ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧ ಹಾಗೂ ತನಿಖಾಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹೊರರಾಜ್ಯಗಳ ಪೊಲೀಸರು ತನಿಖೆಗೆ ಬಂದಾಗ ಸ್ಥಳೀಯ ಪೊಲೀಸರೊಂದಿಗೆ ಕಡ್ಡಾಯವಾಗಿ ಸಮನ್ವಯ ಸಾಧಿಸಬೇಕು ಎಂದು ಹೈಕೋರ್ಟ್(High Court) ಆದೇಶಿಸಿದೆ.

ಶಿವ ಎಂಟರ್‌ಪ್ರೈಸಸ್ ಮತ್ತು ಸಿದ್ಧಿ ಏಜೆನ್ಸೀಸ್ ಎಂಬ ತುಮಕೂರಿನ ಎರಡು ಸಂಸ್ಥೆಗಳು ಮಹಾ ರಾಷ್ಟ್ರ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ತುಮಕೂರಿನ ತಂಬಾಕು ಸಂಸ್ಥೆಗಳ ಮೇಲೆ ಮಹಾರಾಷ್ಟ್ರದ ಕೊಲ್ಲಾಪುರ ವ್ಯಾಪ್ತಿಯ ವಡಗಾಂವ್ ಪೊಲೀಸರು ಕೈಗೊಂಡಿದ್ದ ಗಡಿಪಾರು ತನಿಖಾ ಕಾರ್ಯಾಚರಣೆಯನ್ನು ಅಕ್ರಮ ಎಂದು ಘೋಷಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಈ ಖಡಕ್ ನಿರ್ದೇಶನ ನೀಡಿದೆ.

ಇದನ್ನೂ ಓದಿ: High Court: ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ: ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಅಲ್ಲದೇ, ಬೇರೆ ರಾಜ್ಯಕ್ಕೆ ತೆರಳಿ ತನಿಖೆ ನಡೆಸುವ ಪೊಲೀಸ್ ಸಿಬ್ಬಂದಿ, ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅವರ ನೆರವು ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ವಡಗಾಂವ್ ಪೊಲೀಸರು ಸಂವಿಧಾನ ಮತ್ತು ಶಾಸನಬದ್ಧ ಗಡಿಗಳನ್ನು ಮೀರಿ ವರ್ತಿಸಿದ್ದಾರೆ ಎಂದು ತಿಳಿಸಿದೆ.

ಪ್ರಸ್ತುತ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಮತ್ತು ನಕಲಿ ಅಧಿಕಾರಿಗಳನ್ನು ಭೇಟಿ ಹೆಚ್ಚುತ್ತಿರು ವಾಗ, ಮನೆ ಅಥವಾ ಕಚೇರಿಗೆ ಬರುವ ಅಧಿಕಾರಿಗಳು ನಿಜವಾದ ಪೊಲೀಸರೇ ಎಂಬುದನ್ನು ಪರಿಶೀಲಿಸಲು ಸಾರ್ವಜನಿಕರಿಗೆ ತಕ್ಷಣದ ವ್ಯವಸ್ಥೆಯಿರುವುದಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ನಡೆಸುವ ಇಂತಹ ಕಾರ್ಯಾಚರಣೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತವೆ. ಇದನ್ನು ಅಪರಾಧಿಗಳು ದುರುಪಯೋಗಪಡಿಸಿಕೊಂಡು ಬೆದರಿಕೆ ಒಡ್ಡುವ ಸಾಧ್ಯತೆ ಯಿರುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.