Physical Abuse: ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ; ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರಿಂದಲೇ ಅತ್ಯಾಚಾರ!
Physical Abuse: ಮಹಿಳಾ ಆಯೋಗದ ಸೂಚನೆಯ ಮೇರೆಗೆ ಆರೋಪಿಗಳ ವಿರುದ್ಧ ಬೆಂಗಳೂರಿನ ಮಾರತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ಅತ್ಯಾಚಾರ ಆರೋಪದಲ್ಲಿ ಇಬ್ಬರು ಉಪನ್ಯಾಸಕರು, ಅವರ ಸ್ನೇಹಿತನ ವಿರುದ್ಧ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.


ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದೆ. ಕಾಲೇಜು ವಿದ್ಯಾರ್ಥಿನಿಯ ಮೇಲೆ ಉಪನ್ಯಾಸಕರಿಂದಲೇ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರಿನ ಮಾರತಹಳ್ಳಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಅತ್ಯಾಚಾರ ಆರೋಪದಲ್ಲಿ ಇಬ್ಬರು ಉಪನ್ಯಾಸಕರು, ಅವರ ಸ್ನೇಹಿತನ ವಿರುದ್ಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಮೂಡುಬಿದಿರೆ ಖಾಸಗಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಮತ್ತು ಅವರ ಗೆಳೆಯ ಅನೂಪ್ ಎನ್ನುವ ಮೂವರಿಂದ ಅತ್ಯಾಚಾರ ಎಸಗಲಾಗಿದೆ. ಈ ಕುರಿತು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಮಹಿಳಾ ಆಯೋಗದ ಸೂಚನೆಯ ಮೇರೆಗೆ ಠಾಣೆಗೆ ದೂರು ನೀಡಲಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿ ಪಿಯುಸಿ ವ್ಯಾಸಂಗ ಮಾಡುತಿದ್ದ ಸಂದರ್ಭದಲ್ಲಿ ಉಪನ್ಯಾಸಕರಾದ ನರೇಂದ್ರ ಮತ್ತು ಸಂದೀಪ್ ಆಕೆಯ ಸಂಪರ್ಕದಲ್ಲಿದ್ದರು. ಅದಾದ ಮೇಲೆ ಸಂಪರ್ಕ ಮುಂದುವರಿದಿದ್ದು, ನೋಟ್ಸ್ ಕೊಡುವ ಮೂಲಕ ಹಾಗೂ ಸಹಾಯ ಮಾಡುವ ಮೂಲಕ ಉಪನ್ಯಾಸಕ ನರೇಂದ್ರ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಿರಂತರವಾಗಿ ನರೇಂದ್ರ ಅತ್ಯಾಚಾರ ಎಸಗಿದ್ದಾನೆ. ಈತ ಈ ಕುರಿತು ಬಯಾಲಜಿ ಉಪನ್ಯಾಸಕ ಸಂದೀಪ್‌ಗೆ ತಿಳಿಸಿದ್ದಾನೆ.
ಇದನ್ನೇ ದುರುಪಯೋಗಪಡಿಸಿಕೊಂಡ ಸಂದೀಪ್ ಕೂಡ ವಿದ್ಯಾರ್ಥಿನಿಗೆ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡಿ ನನ್ನ ಬಳಿ ನಿನ್ನ ಖಾಸಗಿ ಫೋಟೋ, ವಿಡಿಯೋ ಇದೆ ಎಂದು ಹೆದರಿಸಿ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಮಾರತಹಳ್ಳಿಯ ಗೆಳೆಯನಾಗಿರುವ ಅನೂಪ್ ಎನ್ನುವ ಕಾಮುಕ ಕೂಡ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಳು. ಬಳಿಕ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಹಸುವಿನ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಕಿಡಿಗೇಡಿ; ಪೊಲೀಸರ ಕೈಗೆ ಸಿಕ್ಕಿಬೀಳ್ತಿದ್ದಂತೆ ಈತ ಮಾಡಿದ್ದೇನು ಗೊತ್ತಾ?