ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಹೊಸ ಕಚೇರಿ ತೆರೆಯಲು ಮುಂದಾದ ಗೂಗಲ್‌ನ ಪೋಷಕ ಕಂಪೆನಿ ಆಲ್ಫಾಬೆಟ್

ಗೂಗಲ್‌ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆಸೆ ಇರುವವರಿಗೆ ಒಂದು ಶುಭ ಸುದ್ದಿ. ಗೂಗಲ್‌ನ ಪೋಷಕ ಕಂಪೆನಿ ಆಲ್ಫಾಬೆಟ್ ಇದೀಗ ಬೆಂಗಳೂರಿನಲ್ಲಿ ಹೊಸ ಕಚೇರಿ ತೆರೆಯಲು ಮುಂದಾಗಿದೆ. ಇದಕ್ಕಾಗಿ ವೈಟ್‌ಫೀಲ್ಡ್ ಟೆಕ್ ಕಾರಿಡಾರ್‌ನಲ್ಲಿ ಮೂರು ಕಟ್ಟಡಗಳನ್ನು ಗುತ್ತಿಗೆ ಪಡೆಯಲು ನಿರ್ಧರಿಸಿದೆ. ಒಂದು ಕಟ್ಟಡವು ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಆಲ್ಫಾಬೆಟ್ ನಿರ್ಧಾರ

ಸಂಗ್ರಹ ಚಿತ್ರ -

ಬೆಂಗಳೂರು: ಗೂಗಲ್‌ನ (google) ಪೋಷಕ ಕಂಪೆನಿ ಆಲ್ಫಾಬೆಟ್ ಇಂಕ್ (Alphabet Inc) ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹೊಸ ಕಚೇರಿ ತೆರೆಯಲು ಮುಂದಾಗಿದೆ. ಇದಕ್ಕಾಗಿ ವೈಟ್‌ಫೀಲ್ಡ್ (Whitefield) ಟೆಕ್ ಕಾರಿಡಾರ್‌ನಲ್ಲಿ ಮೂರು ಕಟ್ಟಡಗಳನ್ನು ಗುತ್ತಿಗೆ ಪಡೆಯಲು ನಿರ್ಧರಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತದಲ್ಲಿ ಉದ್ಯೋಗಿಗಳ ನೇರ ನೇಮಕಾತಿ ಮಾಡಿಕೊಳ್ಳಲಿದೆ. ಒಪ್ಪಂದದ ಪ್ರಕಾರ ಕಂಪೆನಿಯು ವೈಟ್‌ಫೀಲ್ಡ್ ಟೆಕ್ ಕಾರಿಡಾರ್‌ನಲ್ಲಿ ಒಟ್ಟು 2.4 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಅಲೆಂಬಿಕ್ ಸಿಟಿಯಲ್ಲಿ ಒಂದು ಕಟ್ಟಡವನ್ನು ಗುತ್ತಿಗೆಗೆ ಪಡೆದಿದೆ. ಇನ್ನೆರಡು ಕಟ್ಟಡಗಳನ್ನು ಖರೀದಿಸಿದೆ. ಮೊದಲ ಕಟ್ಟಡವು ಶೀಘ್ರದಲ್ಲೇ ಉದ್ಯೋಗಿಗಳಿಗಾಗಿ ತೆರೆಯಲಿದೆ.

ಹೆಚ್ಚುವರಿ ಕಟ್ಟಡಗಳನ್ನು ಆಲ್ಫಾಬೆಟ್ ಬಳಸಲು ಬಹುದು ಅಥವಾ ಬಳಸದೇ ಇರಲು ಬಹುದು. ಯಾಕೆಂದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಂಭಾವ್ಯ ಬಾಡಿಗೆದಾರರಿಗೆ ನಿರ್ದಿಷ್ಟ ಸಮಯದೊಳಗೆ ಪೂರ್ವನಿರ್ಧರಿತ ಬೆಲೆಗೆ ಆಸ್ತಿಯನ್ನು ಬಾಡಿಗೆಗೆ ಪಡೆಯುವ ಅಥವಾ ಖರೀದಿಸುವ ವಿಶೇಷ ಹಕ್ಕನ್ನು ನೀಡಲಾಗುತ್ತದೆ. ಹೀಗಾಗಿ ಈ ನಿರ್ಧಾರ ಆಲ್ಫಾಬೆಟ್ ಕಂಪೆನಿಗೆ ಇದೆ. ಅದು ಬೇಡವಾದರೆ ತಿರಸ್ಕರಿಸಬಹುದು.

ಫೋಲ್ಡೇಬಲ್‌ ಸರಣಿಯಲ್ಲಿ ಮಾರ್ಕೆಟ್‌ಗೆ ಲಗ್ಗೆ ಇಡಲಿವೆ ಆ್ಯಪಲ್‌ ಐಫೋನಗಳು? ಬೆಲೆಯೆಷ್ಟು ಗೊತ್ತಾ?

ಹೆಚ್ಚುವರಿ ಸ್ಥಳಾವಕಾಶದಲ್ಲಿ 20,000 ಹೆಚ್ಚುವರಿ ಸಿಬ್ಬಂದಿಗೆ ಅವಕಾಶವಿದೆ. ಇದರಿಂದ ಉದ್ಯೋಗ ಪ್ರಮಾಣ ದೇಶದಲ್ಲಿ ಹೆಚ್ಚಾಗಬಹುದು. ಈ ಯೋಜನೆಯ ಬಗ್ಗೆ ಕಂಪೆನಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಜಾಗತಿಕವಾಗಿ ಸುಮಾರು 1,90,000 ಉದ್ಯೋಗಿಗಳಲ್ಲಿ ಆಲ್ಫಾಬೆಟ್

ಈಗಾಗಲೇ ದೇಶದಲ್ಲಿ ಸುಮಾರು 14,000 ಜನರನ್ನು ನೇಮಕ ಮಾಡಿದೆ ಎನ್ನಲಾಗಿದೆ.

ಆಲ್ಫಾಬೆಟ್ ವಕ್ತಾರರೊಬ್ಬರು ನಾವು ಕೇವಲ ಒಂದು ಕಟ್ಟಡವನ್ನು ಮಾತ್ರ ಗುತ್ತಿಗೆ ಪಡೆದಿದ್ದೇವೆ. ಇದು ಒಟ್ಟು 6,50,000 ಚದರ ಅಡಿ ಕಚೇರಿ ಸ್ಥಳವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆದರೆ ಇನ್ನೂ ಎರಡು ಕಟ್ಟಡಗಳನ್ನು ಆಯ್ಕೆ ಮಾಡುವ ಬಗ್ಗೆ, ಭಾರತದ ಮುಖ್ಯಸ್ಥರ ಮಾಹಿತಿಯನ್ನು ಇದರಲ್ಲಿ ಹಂಚಿಕೊಳ್ಳಲಾಗಿಲ್ಲ.

ಅಮೆರಿಕದ ವೀಸಾ ನಿರ್ಬಂಧಗಳಿಂದಾಗಿ ಈಗ ಅಮೆರಿಕಕ್ಕೆ ವಿದೇಶಿ ಪ್ರತಿಭೆಗಳನ್ನು ಕರೆತರುವುದನ್ನು ಕಷ್ಟವಾಗಿದೆ. ಹೀಗಾಗಿ ಹಲವು ಕಂಪೆನಿಗಳು ವಿದೇಶಗಳಲ್ಲೇ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿವೆ. ಕೃತಕ ಬುದ್ಧಿಮತ್ತೆಯಲ್ಲಿ ಪ್ರಾಬಲ್ಯ ಸಾಧಿಸಲು ಅಮೆರಿಕದ ಕಂಪೆನಿಗಳಿಗೆ ಭಾರತವು ಹೆಚ್ಚು ಪ್ರಶಸ್ತ ಸ್ಥಳವಾಗಿ ಗುರುತಿಸಲ್ಪಟ್ಟಿದೆ.

NSE IPO ನಡೆಸಲು ಸೆಬಿ ಒಪ್ಪಿಗೆ 22,900 ಕೋಟಿ ಗಾತ್ರ ನಿರೀಕ್ಷೆ ಕಂಪ್ಲೀಟ್‌ ಡಿಟೇಲ್ಸ್‌

ಈಗಾಗಲೇ ಗೂಗಲ್‌ನ ಪ್ರತಿಸ್ಪರ್ಧಿಗಳಾದ ಓಪನ್‌ಎಐ ಮತ್ತು ಆಂಥ್ರೊಪಿಕ್ ಪಿಬಿಸಿ ಇತ್ತೀಚೆಗೆ ದೇಶದಲ್ಲಿ ತಮ್ಮ ಕಚೇರಿಯನ್ನು ತೆರೆದಿವೆ. ಆಂಥ್ರೊಪಿಕ್ ಭಾರತದ ಕಾರ್ಯಾಚರಣೆಗಳನ್ನು ಮುನ್ನಡೆಸಲು ಮಾಜಿ ಮೈಕ್ರೋಸಾಫ್ಟ್ ಕಾರ್ಪ್ ಕಾರ್ಯನಿರ್ವಾಹಕಿ ಐರಿನಾ ಘೋಸ್ ಅವರನ್ನು ನೇಮಕ ಮಾಡಿದೆ.