Bengaluru Power Cut: ಫೆ.10ರಂದು ಬೆಂಗಳೂರಿನ ವಿಜಯನಗರ, ಇಂದಿರಾನಗರ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯ
ಫೆ.10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಹಂಪಿನಗರ, ವಿಜಯನಗರ, ಅಗ್ರಹಾರ, ದಾಸರಹಳ್ಳಿ ಸೇರಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ತುರ್ತುನಿರ್ವಹಣಾ ಕೆಲಸಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಫೆ.10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ವಿಜಯನಗರ, ಇಂದಿರಾನಗರ ಸೇರಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
“66/11ಕೆ.ವಿ ಟೆಲಿಕಾಂ” ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ಫೆ.10ರಂದು 10ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
“ಹೊಸಹಳ್ಳಿ ಮೇನ್ ರಸ್ತೆ, ಅರ್ಫಾತ್ ನಗರ (ಪಡರಾಯನಪುರ ಪೂರ್ವ ಮತ್ತು ಪಶ್ಚಿಮ), ದೇವರಾಜ್ ಉರ್ಸ್ ನಗರ, ಸುಜಾತ ಟೆಂಟ್ ಪ್ರದೇಶ, ಜೆಜೆಆರ್ ನಗರ, ಹೆಗ್ಡೆ ಆಸ್ಪತ್ರೆ ಪ್ರದೇಶ, ಸಂಗಂ ಸರ್ಕಲ್, ಒಬ್ಲೀಶ್ ಕಾಲೋನಿ, ವಿ.ಎಸ್. ಗಾರ್ಡನ್, ರಾಯಪುರಂ, ಬಿನ್ನಿ ಪೇಟೆ, ಪಡರಾಯನಪುರ, ಗೋಪಾಲನ್ ಮಾಲ್ ಪ್ರದೇಶ, ಮೈಸೂರು ರಸ್ತೆ 1ನೇ, 2ನೇ ಮತ್ತು 3ನೇ ಕ್ರಾಸ್, ಮೊಮಿನ್ಪುರ, ಜನತಾ ಕಾಲೋನಿ, ಶಮನಾ ಗಾರ್ಡನ್, ಅರ್ಫಾತ್ ನಗರ, ರಂಗನಾಥ ಕಾಲೋನಿ, ಹೊಸಹಳ್ಳಿ ಮೇನ್ ರಸ್ತೆ, ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ಸ್ (ಬಿನ್ನಿ ಪೇಟೆ), ಅಂಜನಪ್ಪ ಗಾರ್ಡನ್, ದೊರಸ್ವಾಮಿ ನಗರ, ಫ್ಲವರ್ ಗಾರ್ಡನ್, ನ್ಯೂ ಪೊಲೀಸ್ ಕ್ವಾರ್ಟರ್ಸ್, ಎಸ್.ಡಿ. ಮಠ ಪ್ರದೇಶ, ಕಾಟನ್ಪೇಟೆ, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್ ಪ್ರದೇಶ, ಮಾನವರ್ಥಿ ಪೇಟೆ, ಸುಲ್ತಾನ್ಪೇಟೆ, ನಾಲಬಂಡವಾಡಿ (ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಎದುರು), ಪೊಲೀಸ್ ರಸ್ತೆ, ಟೆಲಿಕಾಂ ಲೇಔಟ್, ಅಂಬೇಡ್ಕರ್ ಲೇಔಟ್, ಕುಷ್ಠರೋಗ ಆಸ್ಪತ್ರೆ ಪ್ರದೇಶ, ನಾಗಮ್ಮ ನಗರ, ಚೆಲುವಪ್ಪ ಗಾರ್ಡನ್, ಎಸ್ಬಿಐ ಕ್ವಾರ್ಟರ್ಸ್, ಗೋಪಾಲನ್ ಅಪಾರ್ಟ್ಮೆಂಟ್ಸ್, ಮರಿಯಪ್ಪನ ಪಾಳ್ಯ, ಕೆ.ಪಿ. ಅಗ್ರಹಾರ, ಕೆ.ಪಿ.ಎಸ್. ಮಠ ಪ್ರದೇಶ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಇಟಿಎ ಅಪಾರ್ಟ್ಮೆಂಟ್ಸ್, ಆರೋಗ್ಯ ಭವನ ಪ್ರದೇಶ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ಮೆಂಟ್ಸ್, ಹಂಪಿನಗರ, ವಿಜಯನಗರ, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳು.”
ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶಾಕ್; ನಾಳೆಯಿಂದಲೇ ಮೆಟ್ರೋ ದರ ಏರಿಕೆ ಫಿಕ್ಸ್!
ನಿಮ್ಹಾನ್ಸ್, ಜಯದೇವ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ನಿಮ್ಹಾನ್ಸ್ ಮತ್ತು ಜಯದೇವ ಉಪಕೇಂದ್ರ ನಿರ್ವಹಣಾ ಕಾಮಗಾರಿ ನಿಮಿತ್ತ ಫೆಬ್ರವರಿ 10 ರ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಸ್-1 ನಿಮ್ಯಾನ್ಸ್, ಕಿದ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂಧಿರಾ ಗಾಂಧಿ ಆಸ್ಪತ್ರೆ, ಜಯನಗರ 1, 2, 3, 4, 9ನೇ ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್ ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳು, ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ ಇಂಡಸ್ಟಿರಿಯಲ್ ಏರಿಯಾ, ಜಾಹ್ನವಿ ಎನ್ಕ್ಲೇವ್, ಅನಂತ ಲೇಔಟ್, ಬಿಳೆಕಳ್ಳಿ ಮೇನ್ ರೋಡ್, ಜಯನಗರ 4, 9ನೇ ಟಿ ಬ್ಲಾಕ್, ಜಯನಗರ ಈಸ್ಟ್ ಎಂಡ್, ಎಬಿಸಿಡಿ ರಸ್ತೆ, ಬಿಎಚ್ಇಎಲ್ ಲೇಔಟ್, ಎಸ್ ಆರ್ ಕೆ ಗಾರ್ಡನ್, ಎನ್ಎಲ್ ಲೇಔಟ್ ತಿಲಕ್ ನಗರ, ಶಾಂತಿ ಪಾಕ, ಜಯದೇವ ಆಸ್ಪತ್ರೆ, ರಂಕ ಕಾಲೋನಿ, ಸುತ್ತಮುತ್ತಲ ಪ್ರದೇಶಗಳು, ಎನ್ ಎಸ್, ಪಾಳ್ಯ ಮೇನ್ ರೋಡ್, ಜಿ ಆರ್ ಬಿ ಮೇನ್ ರೋಡ್, ಬಿಸ್ಮಿಲ್ಲಾ ನಗರ, ಶೋಭ ಅಪಾಟ್ಮೆಮೆಂಟ್, ದಿವ್ಯಶ್ರೀ ಟನರಸ್, ವೆಗಾಸಿಟಿ ಮಾಲ್, ಎರ್ಟೆಲ್ ಅಫೀಸ್, ಬನ್ನೇರುಗಟ್ಟ ಮೇನ್ ರಸ್ತೆ, ಕೆ.ಇ.ಬಿ ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಮ್ ಮೊದಲನೇ ಹಂತ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.