ಸೈಕ್ಲೋಥಾನ್ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ ಜಾಗೃತಿ; ಬೆಂಗಳೂರನ್ನು ಒಗ್ಗೂಡಿಸಿದ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ಕೆ.ಆರ್.ಘಟಕ
ಫ್ಲ್ಯಾಗ್-ಆಫ್‌ನಿಂದ ಹಿಡಿದು ಅಂತಿಮ ಗೆರೆಯವರೆಗೆ, ಇಡೀ ಕಾರ್ಯಕ್ರಮ, ಅಪಾರ ಉತ್ಸಾಹ ಮತ್ತು ಸಾಮರ್ಥ್ಯದ ಪ್ರದರ್ಶನವಾಗಿತ್ತು. ಈ ಧ್ಯೇಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಜನರು ಸೈಕಲ್ ಚಲಾಯಿಸಲು ಜಮಾಯಿಸಿದ್ದರು. ಪ್ರಾಸ್ಟೇಟ್ ಕ್ಯಾನ್ಸರ್ ಕುರಿತ ಚರ್ಚೆಗಳನ್ನು ಮುಕ್ತ ಗೊಳಿಸುವುದು ಮತ್ತು ಜನರು ತಮ್ಮ ಆರೋಗ್ಯದ ವಿಚಾರ ಬಂದಾಗ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.
-
ಬೆಂಗಳೂರು: ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪುರುಷರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಕೆ.ಆರ್. ರಸ್ತೆ ಯಲ್ಲಿರುವ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ಆಯೋಜಿಸಿದ್ದ ‘ಸ್ಪಿನಿಂಗ್ ಟುವರ್ಡ್ಸ್ ಎ ಹೆಲ್ತಿಯರ್ ಫ್ಯೂಚರ್’ ಸೈಕ್ಲೋಥಾನ್‌ನಲ್ಲಿ 210 ಮಂದಿ ಭಾಗವಹಿಸಿದ್ದರು.
ಎಚ್‌ಸಿಜಿಯ ಕ್ಯಾನ್ಸರ್ ವಿರುದ್ಧ ಗೆದ್ದವರು, ಉದ್ಯೋಗಿಗಳು, ಸೈಕ್ಲಿಂಗ್ ಉತ್ಸಾಹಿಗಳು ಮತ್ತು ಸಮುದಾಯದ ಸದಸ್ಯರು ಇದರಲ್ಲಿ ಭಾಗವಹಿಸುವುದರೊಂದಿಗೆ, ಈ ಸೈಕ್ಲೋಥಾನ್ ಪ್ರಾಸ್ಟೇಟ್ ಕ್ಯಾನ್ಸರ್ ಜಾಗೃತಿಯನ್ನು ಆಕರ್ಷಕ ಸಾಮುದಾಯಿಕಕಾರ್ಯಕ್ರಮವಾಗಿ ಪರಿವರ್ತಿಸಿತು. ಪ್ರಾಸ್ಟೇಟ್ ಆರೋಗ್ಯದ ಬಗೆಗಿನ ಸಂವಾದಗಳು ಮೊದಲೇ ಆರಂಭವಾಗಬೇಕು ಹಾಗೂ ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಲು ಉತ್ತೇಜನ ನೀಡಬೇಕು ಎಂಬ ಸರಳ ಆದರೆ ಪ್ರಮುಖ ಸಂದೇಶ ಹೊತ್ತು ಭಾಗವಹಿಸಿದವರು ತಮ್ಮ ಸೈಕಲ್‌ಗಳಲ್ಲಿ ಒಟ್ಟಾಗಿ ಸಾಗಿ ಒಗ್ಗಟ್ಟು ಸಾರಿದರು.
ಫ್ಲ್ಯಾಗ್-ಆಫ್‌ನಿಂದ ಹಿಡಿದು ಅಂತಿಮ ಗೆರೆಯವರೆಗೆ, ಇಡೀ ಕಾರ್ಯಕ್ರಮ, ಅಪಾರ ಉತ್ಸಾಹ ಮತ್ತು ಸಾಮರ್ಥ್ಯದ ಪ್ರದರ್ಶನವಾಗಿತ್ತು. ಈ ಧ್ಯೇಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಜನರು ಸೈಕಲ್ ಚಲಾಯಿಸಲು ಜಮಾಯಿಸಿದ್ದರು. ಪ್ರಾಸ್ಟೇಟ್ ಕ್ಯಾನ್ಸರ್ ಕುರಿತ ಚರ್ಚೆಗಳನ್ನು ಮುಕ್ತ ಗೊಳಿಸುವುದು ಮತ್ತು ಜನರು ತಮ್ಮ ಆರೋಗ್ಯದ ವಿಚಾರ ಬಂದಾಗ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.
ಇದನ್ನೂ ಓದಿ: Health Tips: ಬೀಟ್ರೂಟ್ ಸೇವನೆಯಿಂದ ಆರೋಗ್ಯದಲ್ಲಿ ಈ ಬದಲಾವಣೆ ಸಾಧ್ಯ!
ಈ ಯೋಜನೆ ಕುರಿತು ಮಾತನಾಡಿದ ಎಚ್‌ಸಿಜಿ ಕರ್ನಾಟಕ ಮತ್ತು ತಮಿಳುನಾಡಿನ ವಿಪಿ ಮತ್ತು ಪ್ರಾದೇಶಿಕ ಸಿಒಒ ಮನೀಶಾ ಕುಮಾರ್, “ಎಚ್‌ಸಿಜಿಯಲ್ಲಿ ನಾವು ಕ್ಯಾನ್ಸರ್ ಚಿಕಿತ್ಸೆಯಷ್ಟೇ ಕ್ಯಾನ್ಸರ್ ಜಾಗೃತಿಯೂ ಮುಖ್ಯ ಎಂದು ನಂಬುತ್ತೇವೆ. ಸೈಕ್ಲೋಥಾನ್‌ನಲ್ಲಿ ನಾವು ಕಂಡ ಉತ್ಸಾಹ ಮತ್ತು ಭಾಗವಹಿಸುವಿಕೆ ಪ್ರೋತ್ಸಾಹದಾಯಕವಾಗಿತ್ತು, ಏಕೆಂದರೆ ಆರೋಗ್ಯದ ಕಾಳಜಿಗಾಗಿ ಸಮುದಾಯ ಹೇಗೆ ಒಗ್ಗೂಡಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಬಗೆಗಿನ ಚರ್ಚೆಯನ್ನು ಆಸ್ಪತ್ರೆಯಿಂದ ಹೊರತಂದು, ಅದನ್ನು ಹೆಚ್ಚು ಮುಕ್ತ ಮತ್ತು ಒಳಗೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ. ಈ ಯೋಜನೆ ಹೆಚ್ಚಿನ ಪುರುಷರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಲು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯಲು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ,” ಎಂದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಕೆ.ಆರ್. ರಸ್ತೆಯ ಯುರೋ-ಆಂಕೊಲಾಜಿ ಮತ್ತು ರೊಬೊಟಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ರಘುನಾಥ್ ಕೆ., “ಪ್ರಾಸ್ಟೇಟ್ ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಬೆಳೆಯಬಹುದು, ಆದ್ದರಿಂದ ಜಾಗೃತಿ ಮತ್ತು ಸಕಾಲಿಕ ವೈದ್ಯಕೀಯ ತಪಾಸಣೆ ಅತ್ಯಂತ ಮುಖ್ಯ. ಪುರುಷರು ತಮ್ಮ ಅಪಾಯ ಕಾರಿ ಅಂಶಗಳ ಬಗ್ಗೆ ತಿಳಿದಿರಬೇಕು ಮತ್ತು ಅಗತ್ಯವಿದ್ದಾಗ ಆರೋಗ್ಯ ತಜ್ಞರೊಂದಿಗೆ ತಮ್ಮ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಬೇಕು. ಇಂತಹ ಸೈಕ್ಲೋಥಾನ್‌ನಂತಹಕಾರ್ಯಕ್ರಮಗಳು ಪ್ರಾಸ್ಟೇಟ್ ಆರೋಗ್ಯವನ್ನು ದೈನಂದಿನ ಚರ್ಚೆಗಳಲ್ಲಿ ತರಲು ಮತ್ತು ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪ್ರೇರೇಪಿಸುತ್ತವೆ,” ಎಂದು ಅಭಿಪ್ರಾಯ ಪಟ್ಟರು. ಇದು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಸಂಬಂಧಿಸಿದ ಅಂಕಿಅಂಶಗಳಿಂದಲೂ ಸ್ಪಷ್ಟವಾಗುತ್ತದೆ.
ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಎಸ್‌ಇಇಆರ್ (SEER) ಕಾರ್ಯಕ್ರಮದ ಅಂಕಿಅಂಶಗಳ ಪ್ರಕಾರ, ಕ್ಯಾನ್ಸರ್ ಬೇರೆಡೆ ಹರಡದೆ ಪ್ರಾಸ್ಟೇಟ್‌ಗೆ ಮಾತ್ರ ಸೀಮಿತ ವಾಗಿದ್ದರೆ, ಪುರುಷರು ಐದು ವರ್ಷಗಳ ಕಾಲ ಬದುಕುಳಿಯುವ ಪ್ರಮಾಣ ಶೇಕಡಾ 100 ರಷ್ಟಿರು ತ್ತದೆ. ಇದು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮಹತ್ವವನ್ನು ಸೂಚಿಸುತ್ತದೆ.
ಸೈಕ್ಲೋಥಾನ್ ಮೂಲಕ, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಜನಸಾಮಾನ್ಯರಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸುವ ಮತ್ತು ಜನರು ತಮ್ಮ ಆರೋಗ್ಯದ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದು ಕೊಳ್ಳಲು ಸಹಾಯ ಮಾಡುವ ಪ್ರಯತ್ನಗಳನ್ನು ಮುಂದುವರಿಸಿದೆ. ಸಕ್ರಿಯ ಸಮುದಾಯದ ಭಾಗವಹಿಸುವಿಕೆಯೊಂದಿಗೆ ಆರೋಗ್ಯ ಜಾಗೃತಿ ಮೂಡಿಸುವ ವಿವಿಧ ಅಭಿಯಾನಗಳನ್ನು ನಡೆಸುವ ಮೂಲಕ, ಎಚ್‌ಸಿಜಿ ಕ್ಯಾನ್ಸರ್ ಸಂಬಂಧಿತ ಸಮಸ್ಯೆಗಳನ್ನು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದೆ.
'ಸ್ಪಿನಿಂಗ್ ಟುವರ್ಡ್ಸ್ ಎ ಹೆಲ್ತಿಯರ್ ಫ್ಯೂಚರ್'ಯೋಜನೆಯಮೂಲಕ, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ಕೆ.ಆರ್.ಘಟಕ, ಜಾಗರೂಕರಾಗಿರುವುದು, ತಮ್ಮ ಬಗ್ಗೆ ಗಮನ ಹರಿಸುವುದು ಮತ್ತು ಸಕಾಲಿಕ ವೈದ್ಯಕೀಯ ಸಲಹೆ ಪಡೆಯುವುದು ಆರೋಗ್ಯಕರ ಭವಿಷ್ಯಕ್ಕೆ ದಾರಿಯಾಗುತ್ತದೆ ಎಂಬ ಸಂದೇಶದೊಂದಿದೆ ಜಾಗೃತಿ ಮೂಡಿಸಿತು.