ತುರ್ತಾಗಿ 2500 ರು., ಮುಂದೆ ಬಾಕಿ ಹಣ ಬಿಡುಗಡೆ : ಬರ ಪರಿಹಾರ ಮೊತ್ತ ದುಪ್ಪಟ್ಟು
15 ಜಿಲ್ಲೆಗಳಿಗೆ ಪಾವತಿ ಕಡತಗಳ ತಯಾರಿಕೆ ಪ್ರಕ್ರಿಯೆಯಲ್ಲಿದೆ. ಎಲ್ಲಾ ಜಿಲ್ಲೆಗಳಲ್ಲಿರುವ ಅರ್ಹ ರೈತರಿಗೆ ಮೊದಲ ಕಂತಿನ ಆರ್ಥಿಕ ನೆರವನ್ನು ಆದಷ್ಟು ಶೀಘ್ರವಾಗಿ ವಿತರಿಸಲಾಗುವುದು. ಮುಂದಿನ 15-20 ದಿನಗಳಲ್ಲಿ 2ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ರೈತರ ಬದುಕು ಹಸನು ಮಾಡ ಬೇಕು ಎಂಬ ನಿಲುವಿಗೆ ಸರಕಾರ ಬದ್ಧವಾಗಿದೆ. ಸರಕಾರದ ಪರಿಹಾರದಿಂದ ಸಂಪೂರ್ಣ ನೆರವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸ್ವಲ್ಪ ಮಟ್ಟಿಗಿನ ನೆರವು ಒದಗಿಸಲಾಗುತ್ತಿದೆ
-
ಬೆಂಗಳೂರು: ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಡಿ.ಕೆ.ಶಿವಕುಮಾರ್ ಸರಕಾರ ಸಿಹಿಸುದ್ದಿ ನೀಡಿದೆ. ಈಗಾಗಲೇ ಬರಪರಿಹಾರವಾಗಿ ಘೋಷಿಸಿರುವ 2500 ರು.ಗಳ ಜೊತೆಗೆ ಹೆಚ್ಚುವರಿ 2500 ರು. ನೀಡುವುದಾಗಿ ತಿಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಮಾತನಾಡಿದ್ದು, ಬರಪೀಡಿತ ರೈತರಿಗೆ ತಲಾ 5000 ರು. ಪರಿಹಾರ ನೀಡಲು ಸರಕಾರ ತೀರ್ಮಾನಿಸಿದೆ. ಈಗ ಮೊದಲ ಹಂತದಲ್ಲಿ 2500 ರು. ಅನ್ನು ಡಿಬಿಟಿ ಮೂಲಕ ನೇರವಾಗಿ ರೈತರಿಗೆ ತಲುಪಿಸಲಾಗುತ್ತಿದೆ. ಉಳಿದ 2500 ರು. ಅನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Bangalore News: ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ
ಈಗಾಗಲೇ, 15 ಜಿಲ್ಲೆಗಳಿಗೆ ಪಾವತಿ ಕಡತಗಳ ತಯಾರಿಕೆ ಪ್ರಕ್ರಿಯೆಯಲ್ಲಿದೆ. ಎಲ್ಲಾ ಜಿಲ್ಲೆಗಳಲ್ಲಿರುವ ಅರ್ಹ ರೈತರಿಗೆ ಮೊದಲ ಕಂತಿನ ಆರ್ಥಿಕ ನೆರವನ್ನು ಆದಷ್ಟು ಶೀಘ್ರವಾಗಿ ವಿತರಿಸಲಾಗುವುದು. ಮುಂದಿನ 15-20 ದಿನಗಳಲ್ಲಿ 2ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ರೈತರ ಬದುಕು ಹಸನು ಮಾಡಬೇಕು ಎಂಬ ನಿಲುವಿಗೆ ಸರಕಾರ ಬದ್ಧವಾಗಿದೆ. ಸರಕಾರದ ಪರಿಹಾರದಿಂದ ಸಂಪೂರ್ಣ ನೆರವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸ್ವಲ್ಪ ಮಟ್ಟಿಗಿನ ನೆರವು ಒದಗಿಸ ಲಾಗುತ್ತಿದೆ ಎಂದರು.
ಪರಿಷ್ಕೃತ ಮಾನದಂಡಗಳ ಪ್ರಕಾರ, ಬಾಕಿ ಉಳಿದಿರುವ ಅನುಮೋದಿತ ಆರ್ಥಿಕ ನೆರವನ್ನು, ಅನ್ವಯ ವಾಗುವ ಅರ್ಹತಾ ಮಾನದಂಡಗಳಿಗೆ ಒಳಪಟ್ಟು, ಎನ್ಡಿಆರ್ಎಫ್ʼನಿಂದ ಅಗತ್ಯ ಅನುದಾನವು ದೊರೆತ ತಕ್ಷಣವೇ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಮ್ಮ ಬದುಕಿನ ಅನುಭವದಲ್ಲಿ ಇಷ್ಟು ದೊಡ್ಡ ಭೀಕರ ಬರಗಾಲವನ್ನು ನಾವು ಯಾರೂ ಕೇಳಿಲ್ಲ. ಕೇಂದ್ರ ಸರಕಾರ ಮುನ್ಸೂಚನೆ ಕೊಟ್ಟರೂ ಕೂಡ ಕೃಷ್ಣಾ ಬಿಟ್ಟು ಬೇರೆ ಯಾವ ಅಣೆಕಟ್ಟು ತುಂಬಿಲ್ಲ ಎಂದು ತಿಳಿಸಿದರು.
22000 ಕೋಟಿ ರು. ಪರಿಹಾರ ಕೊಡಿ: ಪರಂ
22 ಸಾವಿರ ಕೋಟಿ ರುಪಾಯಿ ಬರ ಪರಿಹಾರ ನೀಡಿ ಎಂದು ಕೇಂದ್ರ ಸರಕಾರಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮನವಿ ಮಾಡಿದ್ದಾರೆ