ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಾದ್ಯಂತ ನೂತನ ಆವಿಷ್ಕಾರಗಳ ರೂಪಿಸಿರುವ 40 ಸೆಮಿ- ಫೈನಲಿಸ್ಟ್ ತಂಡಗಳ ಹೆಸರು ಘೋಷಿಸಿದ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ

ಕಾಚಾರ್ (ಅಸ್ಸಾಂ), ಬಾಘ್‌ಪತ್ (ಉತ್ತರ ಪ್ರದೇಶ), ಮೆಹಬೂಬ್‌ನಗರ (ತೆಲಂಗಾಣ), ದುರ್ಗ್ (ಛತ್ತೀಸ್‌ ಗಢ) ಮತ್ತು ಸುಂದರ್‌ಗಢ (ಒರಿಸ್ಸಾ) ದಂತಹ ಗ್ರಾಮೀಣ ಪ್ರದೇಶಗಳು ಸೇರಿದಂತೆ ಭಾರತದ 15 ರಾಜ್ಯ ಗಳ ತಂಡಗಳು ಈ ವರ್ಷದ ಸೆಮಿ ಫೈನಲ್ ಹಂತಕ್ಕೆ ತಲುಪಿವೆ. ಈ ಮೂಲಕ ವಿವಿಧ ಭೌಗೋಳಿಕ ವೈವಿಧ್ಯದ ಪ್ರದೇಶಗಳ ತಂಡಗಳು ಸೆಮಿ ಫೈನಲ್ ಹಂತ ತಲುಪಿದಂತಾಗಿದೆ.

ಭಾರತದಾದ್ಯಂತ ನೂತನ ಆವಿಷ್ಕಾರ: ಫೈನಲಿಸ್ಟ್ ತಂಡಗಳ ಹೆಸರು ಘೋಷಣೆ

Ashok Nayak Ashok Nayak Aug 16, 2025 11:27 PM

ಸೆಮಿ-ಫೈನಲ್ ತಲುಪಿದ ತಂಡಗಳಿಗೆ ಅವರ ಐಡಿಯಾಗಳನ್ನು ಅಭಿವೃದ್ಧಿ ಮಾಡಲು ಸೂಕ್ತ ಮಾರ್ಗದರ್ಶನ, ಪ್ರೋಟೊಟೈಪಿಂಗ್ ನೆರವು ಮತ್ತು ಆವಿಷ್ಕಾರ ಅಭಿವೃದ್ಧಿ ವೇದಿಕೆಗಳಿಗೆ ಪ್ರವೇಶಾವಕಾಶ ಒದಗಿಸಲಾಗುವುದು. ಟಾಪ್ 40 ತಂಡಗಳಿಗೆ 8 ಲಕ್ಷ ರೂ. ಪ್ರಶಸ್ತಿ ನೀಡಲಾಗುವುದು, ಜೊತೆಗೆ ಪ್ರತೀ ತಂಡದ ಸದಸ್ಯರಿಗೆ ಸ್ಯಾಮ್‌ಸಂಗ್ ಲ್ಯಾಪ್‌ಟಾಪ್ ಒದಗಿಸಲಾಗುವುದು.

ಬೆಂಗಳೂರು: ದೇಶದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಇಂಡಿಯಾ ಸಂಸ್ಥೆಯು ನೂತನ ಆವಿಷ್ಕಾರ ಕಂಡುಹಿಡಿಯುವ ಯುವ ಪೀಳಿಗೆಯನ್ನು ಬೆಳೆಸುವ ಉದೇಶದಿಂದ ಆಯೋಜಿಸಿರುವ ತನ್ನ ನಾಲ್ಕನೇ ಆವೃತ್ತಿಯ ರಾಷ್ಟ್ರವ್ಯಾಪಿ ಸಂಶೋಧನಾ ಸ್ಪರ್ಧೆ ಯಾದ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋದ 40 ಸೆಮಿ ಫೈನಲಿಸ್ಟ್ ತಂಡಗಳ ಪಟ್ಟಿಯನ್ನು ಇಂದು ಘೋಷಿಸಿದೆ.

ಈ ತಂಡಗಳು ಈಗ ಸ್ಪರ್ಧೆಯ ಮುಂದಿನ ಹಂತಕ್ಕೆ ಮುನ್ನಡೆಯಲಿದ್ದು, ಈ ಹಂತದಲ್ಲಿ ಅವರಿಗೆ ಸಮಾಜಕ್ಕೆ ನೆರವಾಗುವ ತಮ್ಮ ಐಡಿಯಾಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬೇಕಾಗುವ ಸೂಕ್ತ ಮಾರ್ಗದರ್ಶನ, ಪ್ರೊಟೊಟೈಪಿಂಗ್ ನೆರವು ಮತ್ತು ಆವಿಷ್ಕಾರ ಅಭಿವೃದ್ಧಿ ವೇದಿಕೆಗಳಿಗೆ ಪ್ರವೇಶಾವಕಾಶವನ್ನು ನೀಡಲಾಗುವುದು.

ಇದನ್ನೂ ಓದಿ:Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಕಾಚಾರ್ (ಅಸ್ಸಾಂ), ಬಾಘ್‌ಪತ್ (ಉತ್ತರ ಪ್ರದೇಶ), ಮೆಹಬೂಬ್‌ನಗರ (ತೆಲಂಗಾಣ), ದುರ್ಗ್ (ಛತ್ತೀಸ್‌ಗಢ) ಮತ್ತು ಸುಂದರ್‌ಗಢ (ಒರಿಸ್ಸಾ) ದಂತಹ ಗ್ರಾಮೀಣ ಪ್ರದೇಶಗಳು ಸೇರಿದಂತೆ ಭಾರತದ 15 ರಾಜ್ಯಗಳ ತಂಡಗಳು ಈ ವರ್ಷದ ಸೆಮಿ ಫೈನಲ್ ಹಂತಕ್ಕೆ ತಲುಪಿವೆ. ಈ ಮೂಲಕ ವಿವಿಧ ಭೌಗೋಳಿಕ ವೈವಿಧ್ಯದ ಪ್ರದೇಶಗಳ ತಂಡಗಳು ಸೆಮಿ ಫೈನಲ್ ಹಂತ ತಲುಪಿದಂತಾಗಿದೆ. ದೇಶಾದ್ಯಂತ ಇರುವ ಯುವ ಸಂಶೋಧಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವಿನೂತನ ಸ್ಪರ್ಧೆ ನಡೆಸಲಾಗುತ್ತಿದ್ದು, ಅವರು ಉನ್ನತ ಐಡಿಯಾಗಳನ್ನು ಅಭಿವೃದ್ಧಿ ಪಡಿಸಲು ಸೂಕ್ತ ನೆರವು ಒದಗಿಸಲಾಗುತ್ತದೆ.

2025ರ ಆವೃತ್ತಿಯ ಸಾಲ್ವ್ ಫಾರ್ ಟುಮಾರೋ ಸ್ಪರ್ಧೆಗೆ ಈ ಕೆಳಗಿನ ನಾಲ್ಕು ಥೀಮ್ ಅಡಿಯಲ್ಲಿ ಐಡಿಯಾಗಳನ್ನು ಆಹ್ವಾನಿಸಲಾಗಿತ್ತು:

  • ಸುರಕ್ಷಿತ, ಸ್ಮಾರ್ಟ್ ಮತ್ತು ಒಳಗೊಳ್ಳುವಿಕೆಯ ಭಾರತ ರೂಪಿಸಲು ಎಐ
  • ಭಾರತದಲ್ಲಿ ವೈದ್ಯಕೀಯ, ನೈರ್ಮಲ್ಯ ಮತ್ತು ಯೋಗ ಕ್ಷೇಮ ಕ್ಷೇತ್ರ ಭವಿಷ್ಯ
  • ಶಿಕ್ಷಣ ಮತ್ತು ಉತ್ತಮ ಭವಿಷ್ಯಕ್ಕಾಗಿ ಕ್ರೀಡೆ ಮತ್ತು ತಂತ್ರಜ್ಞಾನದ ಮೂಲಕ ಸಾಮಾಜಿಕ ಬದಲಾವಣೆ
  • ತಂತ್ರಜ್ಞಾನದ ಮೂಲಕ ಪರಿಸರ ಸುಸ್ಥಿರತೆ

ಹವಾಮಾನ ಗುಣಮಟ್ಟದ ಮೇಲ್ವಿಚಾರಣೆ, ಜೈವಿಕ ವೈವಿಧ್ಯ ಸಂರಕ್ಷಣೆ ಮತ್ತು ಸ್ವಚ್ಛ ನೀರಿನ ಲಭ್ಯತೆಗಾಗಿ ಎಐ ಆಧರಿತ ಉಪಕರಣ ಮುಂತಾದ ಇಡಾಯಿಗಳಿಂದ ಹಿಡಿದು ಆಹಾರ ತ್ಯಾಜ್ಯ ಮತ್ತು ಇ-ತ್ಯಾಜ್ಯ ನಿರ್ವಹಣೆಗೆ ಸ್ಮಾರ್ಟ್ ಪರಿಹಾರೋಪಾಯಗಳವರೆಗೆ ಹಲವಾರು ಐಡಿಯಾಗಳು ಭಾರತದ ಈ ಕಾಲದ ಅಗತ್ಯಗಳಿಗೆ ತಕ್ಕಂತೆ ಸಿದ್ಧಪಡಿಸಲಾಗಿತ್ತು.

ಜೊತೆಗೆ ಕಡಿಮೆ ಅವಕಾಶ ಹೊಂದಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಗೇಮಿಫೈಡ್ ಲರ್ನಿಂಗ್, ವೈಯಕ್ತಿಕ ಕೋಚಿಂಗ್ ಆಪ್‌ ಗಳು ಮತ್ತು ಆಟಿಸಂ ಇರುವ ಮಕ್ಕಳಿಗೆ ಕ್ರೀಡಾಧರಿತ ಪರಿಹಾರೋಪಾಯಗಳು ಮುಂತಾದ ಐಡಿಯಾಗಳೂ ಇವುಗಳಲ್ಲಿ ಸೇರಿವೆ. ವೈದ್ಯಕೀಯ ಮತ್ತು ಸಂಶೋಧನಾ ವಿಭಾಗಗಳಲ್ಲಿ ಆರಂಭಿಕ ಹಂತದಲ್ಲಿ ಶ್ವಾಸಕೋಶ ಕ್ಯಾನ್ಸರ್ ಪತ್ತೆಹಚ್ಚುವಿಕೆ, ಮಾನಸಿಕ ಆರೋಗ್ಯಕ್ಕೆ ಸೂಕ್ತ ಮಾರ್ಗಗಳು ಮತ್ತು ಅತ್ಯಾಧುನಿಕ ಡೇಟಾ ಸ್ಕ್ರಾಪಿಂಗ್ ಮೂಲಕ ತಾಂತ್ರಿಕ ಸಂಶೋಧನೆಯನ್ನು ಸರಳಗೊಳಿಸುವ ಯೋಜನೆಗಳು ಹೀಗೆ ಅನೇಕ ಆಕರ್ಷಕ ಐಡಿಯಾ ಗಳು ಈ ಆವೃತ್ತಿಯಲ್ಲಿ ಬಂದಿವೆ.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷಿಯಾದ ಕಾರ್ಪೊರೇಟ್ ವೈಸ್ ಪ್ರೆಸಿಡೆಂಟ್ ಎಸ್‌ಪಿ ಚುನ್, “ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ 2025ರ ಸೆಮಿ ಫೈನಲ್ ಹಂತ ಪ್ರವೇಶಿಸಿದ ಟಾಪ್ 40 ತಂಡಗಳನ್ನು ಘೋಷಿಸಲು ನಾವು ಸಂತೋಷ ಪಡುತ್ತೇವೆ. ವಿಶೇಷವಾಗಿ ಈ ಸಲ 2ನೇ ಹಂತದ ಮತ್ತು 3ನೇ ಹಂತದ ನಗರಗಳು ಮತ್ತು ಗ್ರಾಮೀಣ ಪ್ರದೇಶದ ತಂಡಗಳ ಈ ಯುವ ಸಂಶೋಧಕರು ವಾಸ್ತವ ಪ್ರಪಂಚದ ಸಾಮಾಜಿಕ ಸವಾಲುಗಳನ್ನು ಪರಿಹರಿಸ ಬಲ್ಲ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಅವರ ಆಲೋಚನೆಗಳು ಭಾರತದ ಯುವ ಶಕ್ತಿಯ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಮುಂದಿನ ಹಂತಕ್ಕೆ ತೆರಳುವ ವೇಳೆ ಅವರ ಪರಿಕಲ್ಪನೆ ಗಳನ್ನು ವಾಸ್ತವ ಪ್ರಪಂಚದ ಸಮಸ್ಯೆ ಪರಿಹರಿಸಬಲ್ಲ ಪರಿಹಾರವನ್ನಾಗಿ ರೂಪಿಸಲು ಬೇಕಾದ ಮಾರ್ಗದರ್ಶನ, ಸಂಪನ್ಮೂಲಗಳು ಮತ್ತು ವೇದಿಕೆಯನ್ನು ಒದಗಿಸುವ ಮೂಲಕ ನಾವು ನಾವು ಅವರನ್ನು ಬೆಂಬಲಿಸುತ್ತೇವೆ” ಎಂದು ಹೇಳಿದರು.

ಈ ಕುರಿತು ಎಫ್ಐಟಿಟಿ ಐಐಟಿ ದೆಹಲಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಿಖಿಲ್ ಅಗರವಾಲ್ ಅವರು, “ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಮುಂದುವರೆಸಲು ನಾವು ಹೆಮ್ಮೆಪಡುತ್ತೇವೆ. ಈ ವರ್ಷದ ಆವೃತ್ತಿಯಲ್ಲಿ ಪ್ರಾದೇಶಿಕ ಪ್ರಾತಿನಿಧ್ಯದ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು. ಆಯ್ಕೆಯಾದ ಐಡಿಯಾಗಳ ವ್ಯಾಪ್ತಿ ಮತ್ತು ತೀವ್ರತೆಯಲ್ಲಿ ಇದನ್ನು ಸ್ಪಷ್ಟವಾಗಿ ಅರಿಯಬಹುದಾಗಿದೆ. ಈ ಯುವ ಸಂಶೋಧಕರು ಭಾರತದ ಭವಿಷ್ಯದ ಸ್ಟಾರ್ಟ್-ಅಪ್ ವ್ಯವಸ್ಥೆಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ” ಎಂದು ಹೇಳಿದರು.

ಸೆಮಿ-ಫೈನಲಿಸ್ಟ್‌ ಗಳಿಗೆ ಮುಂದೇನು?

ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ 2025ರ ಭಾಗವಾಗಿ, ಟಾಪ್ 40 ತಂಡಗಳು ತಮ್ಮ ಐಡಿಯಾಗಳನ್ನು ಕಾರ್ಯಸಾಧು ಪ್ರೋಟೊಟೈಪ್‌ಗಳಾಗಿ ರೂಪಿಸಲು ಸಹಾಯ ಮಾಡುವ ಇನೋವೇಶನ್ ಬೂಟ್‌ ಕ್ಯಾಂಪ್‌ ನಲ್ಲಿ ಭಾಗವಹಿಸಲಿವೆ. ಈ ಹಂತದಲ್ಲಿ, ಭಾಗವಹಿಸುವವರು ಸ್ಯಾಮ್‌ಸಂಗ್ ಆರ್&ಡಿ ಕೇಂದ್ರ ಮತ್ತು ಸೌತ್‌ವೆಸ್ಟ್ ಏಷಿಯಾ ವಿಭಾಗದ ನಾಯಕರು ಮತ್ತು ತಜ್ಞರನ್ನು ಭೇಟಿಯಾಗಿ ಸಂವಾದ ನಡೆಸಲಿದ್ದಾರೆ. ಐಐಟಿ ದೆಹಲಿಯಲ್ಲಿ ಉದ್ಯಮ ಮತ್ತು ಸರ್ಕಾರಿ ತಜ್ಞರಿಂದ ನಡೆಸಲ್ಪಡುವ ವಿಶೇಷ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಲಿದ್ದಾರೆ. ಆವಿಷ್ಕಾರ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಬಗ್ಗೆ ಒಳನೋಟಗಳನ್ನು ಪಡೆಯುತ್ತಾರೆ. ಬೂಟ್‌ಕ್ಯಾಂಪ್‌ನಲ್ಲಿ ಐಐಟಿ ದೆಹಲಿಯ ಮಾರ್ಗದರ್ಶಕರು ಮತ್ತು ಹಿಂದಿನ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಆವೃತ್ತಿಗಳ ಹಳೆಯ ವಿದ್ಯಾರ್ಥಿಗಳಿಂದ ರಚನಾತ್ಮಕ ಪ್ರೋಟೊಟೈಪಿಂಗ್ ನೆರವನ್ನು ಪಡೆಯುತ್ತಾರೆ. ಬೂಟ್‌ಕ್ಯಾಂಪ್‌ನ ನಂತರ, ರಾಷ್ಟ್ರೀಯ ಪಿಚ್ ಈವೆಂಟ್ ನಡೆಯಲಿದ್ದು, ಇಲ್ಲಿ ಸ್ಯಾಮ್‌ಸಂಗ್ ತೀರ್ಪುಗಾರರು ಅಂತಿಮ ಸುತ್ತಿನ ಸ್ಪರ್ಧೆಗೆ 20 ತಂಡಗಳನ್ನು ಆಯ್ಕೆ ಮಾಡುತ್ತಾರೆ.

ಪ್ರಶಸ್ತಿಗಳು ಮತ್ತು ನೆರವು

  • ಟಾಪ್ 40 ತಂಡಗಳು: 8 ಲಕ್ಷ ರೂ. ಪ್ರಶಸ್ತಿಯನ್ನು ಪಡೆಯುತ್ತವೆ, ಜೊತೆಗೆ ಪ್ರತೀ ತಂಡದ ಸದಸ್ಯರಿಗೆ ಸ್ಯಾಮ್‌ಸಂಗ್ ಲ್ಯಾಪ್‌ಟಾಪ್ ನೀಡಲಾಗುವುದು.
  • ಟಾಪ್ 20 ತಂಡಗಳು: 20 ಲಕ್ಷ ರೂ. ಅನುದಾನ ಮತ್ತು ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ ಸ್ಮಾರ್ಟ್‌ಫೋನ್‌ಗಳನ್ನು ಪಡೆಯುತ್ತವೆ.
  • ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸುವ ನಾಲ್ಕು ವಿಜೇತ ತಂಡಗಳು ತಮ್ಮ ಐಡಿಯಾಗಳನ್ನು ಅಭಿವೃದ್ಧಿ ಪಡಿಸಲು ಐಐಟಿ ದೆಹಲಿಯಲ್ಲಿ 1 ಕೋಟಿ ರೂ. ಇನ್ಕ್ಯುಬೇಶನ್ ಗ್ರಾಂಟ್ ಪಡೆಯುತ್ತವೆ.
  • ಗ್ರ್ಯಾಂಡ್ ಫಿನಾಲೆಯಲ್ಲಿ ವಿಶೇಷ ಪ್ರಶಸ್ತಿಗಳು: ಗುಡ್‌ವಿಲ್ ಅವಾರ್ಡ್, ಯಂಗ್ ಇನ್ನೋವೇಟರ್ ಅವಾರ್ಡ್ ಮತ್ತು ಸೋಷಿಯಲ್ ಮೀಡಿಯಾ ಚಾಂಪಿಯನ್, ಒಟ್ಟು 4.5 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ.

ಯುವ ಶಕ್ತಿಯನ್ನು ಬೆಳೆಸುವ ಉದ್ದೇಶ

2010ರಲ್ಲಿ ಯುನೈಟೆಡ್ ಸ್ಟೇಟ್ಸ್‌ ನಲ್ಲಿ ಪ್ರಾರಂಭವಾದ ಸಾಲ್ವ್ ಫಾರ್ ಟುಮಾರೋ ಈಗ 68 ದೇಶಗಳಲ್ಲಿ ನಡೆಯುತ್ತದೆ ಮತ್ತು ವಿಶ್ವಾದ್ಯಂತ 3 ಮಿಲಿಯನ್‌ಗಿಂತಲೂ ಹೆಚ್ಚು ಯುವಜನರು ಇಧರಲ್ಲಿ ಭಾಗವಹಿಸುತ್ತಾರೆ. ಈ ಯೋಜನೆಯು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ ನ ಜಾಗತಿಕ ಸಿಎಸ್ಆರ್ ದೃಷ್ಟಿಕೋನವಾದ **“ಟುಗೆದರ್ ಫಾರ್ ಟುಮಾರೋ! ಎನೇಬ್ಲಿಂಗ್ ಪೀಪಲ್” ಗೆ ಪೂರಕವಾಗಿ ನಡೆಯುತ್ತದೆ. ಈ ಮೂಲಕ ಯುವಜನರಿಗೆ ಶಿಕ್ಷಣ, ಕೌಶಲ್ಯಗಳನ್ನು ಒದಗಿಸುವ ಮತ್ತು ಭವಿಷ್ಯದ ಸಿದ್ಧ ನಾಯಕರಾಗಲು ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.