Shri Krishna janmashtami: ಹಲೋ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ : ವೇಷ ಭೂಷಣ ಸ್ಪರ್ಧೆಯಲ್ಲಿ ಚಿಣ್ಣರ ಕಲರವ
ಕೃಷ್ಣ ಧರ್ಮದ ಪ್ರತೀಕ. ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರ ಗೊಳ್ಳುತ್ತವೆ ಎಂದು ಹೇಳಿದರು. ಶ್ರೀಕೃಷ್ಣ ಸತ್ಯ ಹಾಗೂ ಧರ್ಮದ ರಕ್ಷಕನಾಗಿದ್ದಾನೆ. ಹೀಗಾಗಿ ಪ್ರತಿಯೊಬ್ಬರೂ ಶ್ರೀಕೃಷ್ಣನ ತತ್ವಗಳನ್ನು ಮಕ್ಕಳು ಪಾಲಿಸಬೇಕು’


ಬಾಗೇಪಲ್ಲಿ: ಪಟ್ಟಣದ ಹಲೋ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿಣ್ಣರಿಗೆ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಶಾಲೆಯಲ್ಲಿ ಕೃಷ್ಣ ಭಗವಾನರ ವಿಗ್ರಹಕ್ಕೆ ಶಾಲೆಯ ಸಂಸ್ಥಾಪಕರಾದ ಹಾಗೂ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥೆ ಕುಶಲ ಅಶೋಕ ರವರಿಂದ ಶ್ರದ್ಧೆ, ಭಕ್ತಿಯಿಂದ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು.
ಕೃಷ್ಣ-ರಾಧೆ ವೇಷಧಾರಿಗಳಿಂದ ಮೊಸರು ಗಡಿಗೆ ಒಡೆಯಲಾಯಿತು. ಮಕ್ಕಳಿಗೆ ಸಿಹಿ ಹಂಚಲಾ ಯಿತು. ಕೃಷ್ಣ- ರಾಧೆ ವೇಷಧಾರಿ ಮಕ್ಕಳು ಪ್ರದರ್ಶಿಸಿದ ನೃತ್ಯ ಎಲ್ಲರ ಗಮನ ಸೆಳೆಯಿತು.
ತದನಂತರ ಮಾತನಾಡಿದ ಕುಶಲ ಅಶೋಕ್ ಅವರು, ಕೃಷ್ಣ ಧರ್ಮದ ಪ್ರತೀಕ. ಅಧರ್ಮ ಹೆಚ್ಚಾದ ಕಡೆ ಕೃಷ್ಣ ಅವತರಿಸಿ ಧರ್ಮ ಮರು ಸ್ಥಾಪಿಸುತ್ತಾನೆ. ಕೃಷ್ಣನ ನೆನೆದರೆ ಎಲ್ಲ ಕಷ್ಟಗಳು ಪರಿಹಾರ ಗೊಳ್ಳುತ್ತವೆ ಎಂದು ಹೇಳಿದರು. ಶ್ರೀಕೃಷ್ಣ ಸತ್ಯ ಹಾಗೂ ಧರ್ಮದ ರಕ್ಷಕನಾಗಿದ್ದಾನೆ. ಹೀಗಾಗಿ ಪ್ರತಿಯೊಬ್ಬರೂ ಶ್ರೀಕೃಷ್ಣನ ತತ್ವಗಳನ್ನು ಮಕ್ಕಳು ಪಾಲಿಸಬೇಕು’ ಎಂದು ಹೇಳಿದರು.
ಇದನ್ನೂ ಓದಿ:Chikkaballapur News: ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಶ್ರೀ ಕೃಷ್ಣ ಜಯಂತಿ ಆಚರಣೆ
ಹಲೋ ಕಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ನೂರ್ ಭಾನು ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎಲ್ಲರಿ ಶುಭಾಷ ಯಗಳನ್ನು ಕೋರಿ ನಮ್ಮ ಶಾಲೆಯಲ್ಲಿ ಗೋಕುಲಾಷ್ಟಮಿ ಎಂದೂ ಕರೆಯಲ್ಪಡುವ ಜನ್ಮಾಷ್ಟಮಿಯನ್ನು ಬಹಳ ವೈಭವ ಮತ್ತು ಭವ್ಯತೆಯಿಂದ ಆಚರಿಸಲಾಯಿತು.
ಈ ಶುಭ ದಿನವು ಅತ್ಯಂತ ಪ್ರೀತಿಯ ದೇವರು ಶ್ರೀ ಕೃಷ್ಣನ ಜನ್ಮವನ್ನು ಸೂಚಿಸುತ್ತದೆ ಮತ್ತು ನಮ್ಮ ಶಾಲೆಯು ಪ್ರತಿ ವರ್ಷ ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ, ಹರಿದಿನಗಳಿಗೆ ವಿಶೇಷ ಮಹತ್ವ ಇದೆ. ಭಗವಾನ ಕೃಷ್ಣ, ಸತ್ಯ, ನ್ಯಾಯ, ನೀತಿ, ಧರ್ಮದ ರಕ್ಷಕರಾಗಿದ್ದಾರೆ, ಎಂದು ನುಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಭಾಗ್ಯ,ಲಕ್ಷ್ಮಿ, ಕಾವ್ಯ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.