Shravan Saturday: ವೈಭವಯುತವಾಗಿ ಶನೈಶ್ಚರನ ಬ್ರಹ್ಮರಥೋತ್ಸವ
ಕೀಲು ಕುದುರೆ, ವೀರಗಾಸೆ, ಮಹಿಳಾ ವೀರಗಾಸೆ, ಪೂಜಾ ನೃತ್ಯ, ಛಂಢ ವಾದ್ಯ, ನಗರದ ದಿಕ್ಸೂಚಿ ನಾಟ್ಯಾಲಯದ ವಿಧ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಭಕ್ತರ ಮನ ರಂಜಿಸಿತು,ರಾತ್ರಿಗೆ ಸುಮಿತ್ರಾನಂದ ರವರಿಂದ ಶನಿಪ್ರಬಾವ ಎಂಬ ಹರಿಕಥೆ ಇರುತ್ತದೆ


ಗೌರಿಬಿದನೂರು: ಆ.೧೪ ರಿಂದ ೧೮ ವರಿಗೂ ನಡೆಯುತ್ತಿದ್ದ ನಗರದಲ್ಲಿನ ಜ್ಯೇಷ್ಠಾದೇವಿ ಸಮೇತ ಶನೈಸ್ಛರನ 44ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರಾವಣ ಶನಿವಾರ ಪ್ರಯುಕ್ರ ಇಂದು ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ತೇರನ್ನು ಎಳದರು.
ಕೀಲು ಕುದುರೆ, ವೀರಗಾಸೆ, ಮಹಿಳಾ ವೀರಗಾಸೆ, ಪೂಜಾ ನೃತ್ಯ, ಛಂಢ ವಾದ್ಯ, ನಗರದ ದಿಕ್ಸೂಚಿ ನಾಟ್ಯಾಲಯದ ವಿಧ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಭಕ್ತರ ಮನ ರಂಜಿಸಿತು,ರಾತ್ರಿಗೆ ಸುಮಿತ್ರಾನಂದ ರವರಿಂದ ಶನಿಪ್ರಬಾವ ಎಂಬ ಹರಿಕಥೆ ಇರುತ್ತದೆ ಎಂದು ಆಯೋಜಕರು ತಿಳಿಸಿದರು.
ಇದನ್ನೂ ಓದಿ: Shravana Shanivar: ಕೊನೆ ಶ್ರಾವಣ ಶನಿವಾರದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಇಂದು ಮುಂಜಾನೆ ಅರ್ಚಕರಾದ ನಾಗೇಶ ಶರ್ಮ, ಅಶ್ವತ್ಥನಾರಾಯಣ ಶರ್ಮ, ಶಿವಪ್ರಸಾದ ಶರ್ಮ ರವರಿಂದ ನಿತ್ಯಹೋಮ,ಕನಕಾಭಿಷೇಕ, ಬಲಿದಾನ, ರಥಾಧಿದೇತೆಗಳ ಹೋಮ,ಕೃಷ್ಣ ಗಂದೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮಗಳಲ್ಲಿ ದೇವಾಲಯ ಧರ್ಮಕರ್ತರಾದ ಸೂರ್ಯನಾರಾಯಣ ಗುಪ್ತ ಅವರ ಕುಟುಂಬ ಹಾಜರಾಗಿದ್ದರು