ನೈಸ್ ರಸ್ತೆಯಲ್ಲಿನ ಟೋಲ್ ಮುಚ್ಚಿಸಿ: ಸಿಎಂ ಡಿಕೆಶಿಗೆ ಪತ್ರ ಬರೆದ ಕುಮಾರಸ್ವಾಮಿ
ಸರಕಾರ ನ್ಯಾಯಾಲಯದ ಆದೇಶದ ಕಡೆ ಗಮನ ಹರಿಸುತ್ತಿಲ್ಲ. ನ್ಯಾಯಾಲಯದ ಆದೇಶ ಹಾಗೂ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟು ಕೊಂಡು ನೈಸ್ ಯೋಜನೆ ಯನ್ನು ಸರಕಾರ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
-
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನ ನೈಸ್ ಗಲಾಟೆ ಮುಂದುವರಿದಿದ್ದು, ನೈಸ್ ಯೋಜನೆಯನ್ನು ಕೂಡಲೇ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ನಿಷೇಧಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸುದೀರ್ಘ ಪತ್ರ ಬರೆದಿರುವ ಅವರು, ನೈಸ್ ಯೋಜನೆ ದೊಡ್ಡ ಹಗರಣ ಎಂದೆ ನ್ಯಾಯಾಲಯ ಆದೇಶ ನೀಡಿದೆ.
ಸರಕಾರ ನ್ಯಾಯಾಲಯದ ಆದೇಶದ ಕಡೆ ಗಮನ ಹರಿಸುತ್ತಿಲ್ಲ. ನ್ಯಾಯಾಲಯದ ಆದೇಶ ಹಾಗೂ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟು ಕೊಂಡು ನೈಸ್ ಯೋಜನೆ ಯನ್ನು ಸರಕಾರ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ತಕ್ಷಣ ದಿಂದಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: NICE Road: ನೈಸ್ ಕಂಪನಿಯಿಂದ ಅಕ್ರಮವಾಗಿ 2,000 ಕೋಟಿಗೂ ಹೆಚ್ಚು ಟೋಲ್ ಸಂಗ್ರಹ: ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ನೆಲದ ಕಾನೂನು ಉಲ್ಲಂಘನೆ: ನೈಸ್ ಸಂಸ್ಥೆ ಯಾವ ರೀತಿ ನೆಲದ ಕಾನೂನು ಹಾಗೂ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘಿಸಿದೆ ಎಂಬ ಬಗ್ಗೆ ಸವಿವರವಾಗಿ ಪತ್ರದಲ್ಲಿ ಪ್ರಸ್ತಾಪಿಸಿರುವ ಕುಮಾರ ಸ್ವಾಮಿ ಅವರು, ಈ ಯೋಜನೆಗೆ ಭೂಸ್ವಾಧೀನಪಡಿಸಿಕೊಂಡು 23 ವರ್ಷಗಳು ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಅವರೆ ಬೀದಿ ಪಾಲಾಗಿದೆ.
ಕರ್ನಾಟಕ ಹೈಕೋರ್ಟ್, ಸುಪ್ರೀಂಕೋರ್ಟ್ ನಿರ್ದೇಶನ ಗಳು ವಿಧಾನಸಭೆಯ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸುಗಳು ಎಲ್ಲವನ್ನೂ ಪತ್ರದಲ್ಲಿ ಪ್ರಸ್ತಾಪಿಸಿರುವ ಕುಮಾರಸ್ವಾಮಿ ಅವರು, ನೈಸ್ ಸಂಸ್ಥೆ ನಿಬಂಧನೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದೆ. ಹಾಗಾಗಿ ರಾಜ್ಯ ಸರಕಾರ ಒಂದು ಶಾಸನ ಸಮಿತಿ ರಚಿಸಿ ನೈಸ್ ರಸ್ತೆ ಯೋಜನೆಯನ್ನು ವಶಕ್ಕೆ ತೆಗೆದುಕೊಳ್ಳ ಬೇಕು. ಟೋಲ್ ಸಂಗ್ರಹವನ್ನು ನಿಲ್ಲಿಸ ಬೇಕು ಎಂದು ಒತ್ತಾಯಿಸಿದ್ದಾರೆ.
23 ವರ್ಷಗಳಿಂದ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ: ಎಚ್‌ಡಿಕೆ
ನೈಸ್ ವಿಷಯದಲ್ಲಿ ಕಾನೂನು ಹೇಳಿದಂತೆ ನಡೆದುಕೊಳ್ಳುತ್ತೇವೆ: ಮುಖ್ಯಮಂತ್ರಿ ಡಿಕೆಶಿ
ಕುಮಾರಸ್ವಾಮಿ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ: ಆರ್.ಅಶೋಕ್
![]()
ನೈಸ್ ರೋಡ್ ವಶಕ್ಕೆ ಪಡೆಯುವಂತೆ ಕುಮಾರಸ್ವಾಮಿ ಅವರು ಪತ್ರ ಬರೆದಿರುವುದು ನಿಜ. ಆದರೆ ಪತ್ರವನ್ನು ಓದಿಲ್ಲ. ಓದಿದ ಬಳಿಕ ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಪರಿಶೀಲಿಸಿದ ಬಳಿಕ ಕಾನೂನಾತ್ಮಕ ಕ್ರಮವಹಿಸುತ್ತೇನೆ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
![]()
ನೈಸ್ ಸಂಬಂಧ ಕುಮಾರಸ್ವಾಮಿ ಹೇಳಿಕೆಗೆ ಬೆಂಬಲ ಇದೆ. ಈ ಹಿಂದೆ ಮೊದಲ ಬಾರಿಗೆ ನೈಸ್ ವಿರುದ್ಧ ಪ್ರತಿಭಟನೆ ಮಾಡಿದ್ದೆ. ರೈತರ ವಿರುದ್ಧದ ಯೋಜನೆ ಎಂದು ವಿರೋಧಿಸಿದ್ದೆ. ನೈಸ್ ಎಂಬುದು ನೈಸ್ ಆಗಿ ಕರ್ನಾಟಕದ ಜನತೆಯನ್ನು ಲೂಟಿ ಹೊಡೆದ ಸಂಸ್ಥೆ.
- ಆರ್.ಅಶೋಕ, ವಿಧಾನಸಭೆ ಪ್ರತಿಪಕ್ಷ ನಾಯಕ