ಕಾವೇರಲಿದೆಯೇ ಸದನ ?
ಸೋಮವಾರದಿಂದ ಪುನರಾರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರು ಈಗಾಗಲೇ ಘೋಷಿಸಿರುವಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಯಿದೆ. ಇದರೊಂದಿಗೆ ಎರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿರುವ ಎನ್‌ಕೌಂಟರ್ ವಿಷಯವನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಆಲೋಚನೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ.
-
ಕಾವೇರಿ ವಿವಾದ, ಹನೂರು ಎನ್‌ಕೌಂಟರ್ ಸೇರಿದಂತೆ ಹಲವು ವಿಷಯ ಪ್ರಸ್ತಾಪ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸದನದೊಳಗೆ ಹೋರಾಟ?
ಮಳೆಗಾಲದ ಅಧಿವೇಶನ ಕಳೆದ ಗುರುವಾರವೇ ಆರಂಭವಾಗಿದ್ದರೂ ಸಂತಾಪ ನಿರ್ಣಯ, ಸಭಾ ಧ್ಯಕ್ಷ, ಸಭಾಪತಿಗಳ ಆಯ್ಕೆಯ ಕಾರಣಕ್ಕೆ ಪೂರ್ಣ ಪ್ರಮಾಣದ ಕಲಾಪ ಶುರುವಾಗಿಲ್ಲ. ಆದರೀಗ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಅಧಿವೇಶನ ನಡೆಯಲಿದ್ದು, ಮೊದಲ ದಿನವೇ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕಟ್ಟಿಗೆ ಸಿಲುಕಿಸುವ ಲೆಕ್ಕಾಚಾರ ದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಸಿದ್ಧವಾಗಿದ್ದಾರೆ.
ಸೋಮವಾರದಿಂದ ಪುನರಾರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರು ಈಗಾಗಲೇ ಘೋಷಿಸಿರುವಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆಯಿದೆ. ಇದರೊಂದಿಗೆ ಎರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿರುವ ಎನ್‌ಕೌಂಟರ್ ವಿಷಯವನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಆಲೋಚನೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ.
ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿ ಸಲು ಪ್ರತಿಪಕ್ಷಗಳ ಬಳಿ ಹತ್ತಾರು ವಿಷಯಗಳಿದ್ದು, ಯಾವ ರೀತಿಯಲ್ಲಿ? ಯಾವ ಸಮಯದಲ್ಲಿ? ಯಾವ ನಾಯಕರು ಪ್ರಸ್ತಾಪಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿದೆ. ಜೆಡಿಎಸ್ ನಾಯಕರೊಂದಿಗೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಒಟ್ಟಿಗೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಆದರೆ ಜೆಡಿಎಸ್ ನಾಯಕರು ಆರಂಭಿಸಿರುವ ಬಿಡದಿ ಹೋರಾಟದಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿರುವುದರಿಂದ, ಬಿಜೆಪಿ ಸದನದೊಳಗೆ ನಡೆಸುವ ಹೋರಾಟಗಳಿಗೆ ಜೆಡಿಎಸ್‌ನಿಂದ ಎಷ್ಟರ ಮಟ್ಟಿಗೆ ಬೆಂಬಲ ಸಿಗಲಿದೆ ಎನ್ನುವ ಕುತೂಹಲವಿದೆ.
ಕಾವೇರಿ, ನೈಸ್ ವಿಷಯ ಪ್ರಸ್ತಾಪ?: ಸೋಮವಾರದ ಅಜೆಂಡಾದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ, ವರದಿ ಸಲ್ಲಿಸುವುದು, ಗಮನ ಸೆಳೆಯುವ ಸೂಚನೆಗಳ ಪ್ರಸ್ತಾಪವಾಗಿದೆ. ವಿಧಾನಸಭೆಯಲ್ಲಿ ರಾಜೀವ್ ಗಾಂಧಿ ವಿವಿಯ ತಿದ್ದುಪಡಿ ವಿಧೇಯಕ ಹಿಂಪಡೆಯುವ ಬಿಲ್ ಮಾತ್ರ ಪ್ರಸ್ತಾಪವಾಗಿದೆ. ಆದರೆ ಬರಗಾಲ, ಕಾವೇರಿ ನೀರು ಗೊಂದಲ, ನೈಸ್ ವಿಷಯ ಪ್ರಸ್ತಾಪಿಸುವ ಬಗ್ಗೆ ಮಾಹಿತಿ ಇಲ್ಲ. ಹನೂರು ವಿಷಯವನ್ನು ಪ್ರತಿಪಕ್ಷಗಳು ಸಹಜವಾ ಗಿಯೇ ಶೂನ್ಯವೇಳೆಯಲ್ಲಿ ಎತ್ತಿಕೊಂಡು ಗದ್ದಲ ಎಬ್ಬಿಸುವ ಸಾಧ್ಯತೆಯಿದೆ. ಬರಗಾಲದ ಬಗ್ಗೆ ಚರ್ಚಿಸಲು ನಿಳುವಳಿ ಸೂಚನೆ ಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ಆದರೆ ನೈಸ್ ವಿಷಯವನ್ನು ಜೆಡಿಎಸ್ ನಾಯಕರು ಯಾವ ರೀತಿ ಪ್ರಸ್ತಾಪಿಸಲಿದ್ದಾರೆ ಎನ್ನುವ ಕುತೂಹಲವಿದೆ.
ಜಿಲ್ಲಾ ಕೇಂದ ದಲ್ಲಿ ಬಿಜೆಪಿ ಪ್ರತಿಭಟನೆ ಈ ನಡುವೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ವತಿ ಯಿಂದ ಜಿಲ್ಲಾ ಘಟಕಗಳಲ್ಲಿ ಪ್ರತಿ ಭಟನೆ ನಡೆಸಲು ತೀರ್ಮಾ ನಿಸಿದೆ. ಸದನದ ಹೊರಗೆ ಜಿಲ್ಲಾ ಕೇಂದ್ರ ಗಳಲ್ಲಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುವ ಜತೆಗೆ ಸದನದೊಳಗೆ ಪ್ರತಿಭಟನೆ ನಡೆಸುವ ಮೂಲಕ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಸಂಪುಟ ರಚನೆಯ ಆರಂಭದಲ್ಲಿ ಸರಕಾರದ ವಿರುದ್ಧ ಜನಾ ಭಿಪ್ರಾಯ ಮೂಡಿಸುವ ಆಲೋಚನೆ ಯಲ್ಲಿ ಬಿಜೆಪಿ ನಾಯಕರಿದ್ದಾರೆ.
ನಾಳೆ ಉಪಸಭಾಪತಿ ಸ್ಥಾನಕೆ ಚುನಾವಣೆ ವಿಧಾನ ಪರಿಷತ್‌ನ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಯನ್ನು ಆ.18ರಂದು ನಡೆಸಲು ತೀರ್ಮಾನಿಸಲಾಗಿದೆ. ಸೋಮವಾರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಕಾಂಗ್ರೆಸ್‌ನಿಂದ ಈಗಾಗಲೇ ಉಮಾಶ್ರೀ ಅವರನ್ನು ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದ್ದು, ಮೈತ್ರಿಪಕ್ಷಗಳು ಸಭಾಪತಿ ಚುನಾವಣೆಗೆ ನಿಲ್ಲಿಸಿದಂತೆ ಅಭ್ಯರ್ಥಿಯನ್ನು ನಿಲ್ಲಿಸುವರೋ ಅಥವಾ ಅವಿರೋಧ ಆಯ್ಕೆ ಯಾಗುವುದೋ ಎನ್ನುವ ಕುತೂಹಲವಿದೆ.
![]()
ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತ ಸಚಿವ ನಾಗೇಂದ್ರರ ರಾಜೀನಾಮೆಗೆ ಆಗ್ರ ಹಿಸಿ ರಾಜ್ಯದ ಎಲ್ಲ ಜಿಗಳಲ್ಲಿ ಧರಣಿ ನಡೆ ಸಲಾಗುವುದು. ಸದನದೊಳಗೂ ಹೋರಾಟ ನಡೆಯಲಿದೆ. ಭ್ರಷ್ಟಾ ಚಾರದ ಆರೋಪ ಹೊತ್ತಿರುವ ನಾಗೇಂದ್ರ ಬದಲಿಗೆ ಅದೇ ಸಮುದಾಯದ ಇಬ್ಬರನ್ನು ಬೇಕಿ ದ್ದರೂ ಸಂಪುಟಕ್ಕೆ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಆರೋಪಿಯನ್ನು ತೆಗೆದುಕೊಳ್ಳುವ ಅನಿವಾರ್ಯತೆ ಏನಿತ್ತು ಎಂಬುದನ್ನು ಬಹಿರಂಗಪಡಿಸಲಿ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ