ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅನಾರೋಗ್ಯ ರಜೆ ಇಲ್ಲ, ಊಟಕ್ಕೆ 15 ನಿಮಿಷ: 17 ಲಕ್ಷ ರುಪಾಯಿ ಪ್ಯಾಕೇಜ್‌ನ ಕೆಲಸದಿಂದ ಹೊರನಡೆದ ಐಐಟಿ ಪದವೀಧರ

Viral Video: ಇಲ್ಲೊಬ್ಬ ಯುವಕ ಉತ್ತಮ ವೇತನವಿದ್ದರೂ ತನ್ನ ಮಾನಸಿಕ ನೆಮ್ಮದಿಗಾಗಿ ಕೆಲಸವನ್ನೇ ಬಿಟ್ಟು ಬಂದಿದ್ದಾರೆ. ಐಐಟಿ ದೆಹಲಿಯ ಪದವೀಧರ ತಮ್ಮ ವಾರ್ಷಿಕ 17 ಲಕ್ಷ ರುಪಾಯಿ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. 24 ವರ್ಷದ ಚಿರಾಗ್ ಮದನ್ ಸಂಬಳದ ಹಿಂದಿನ ವಾಸ್ತವದ ಬಗ್ಗೆ ಹೇಳಿಕೊಂಡಿದ್ದಾರೆ.

ಒತ್ತಡದಿಂದ 17 ಲಕ್ಷ ರುಪಾಯಿ ಸಂಬಳದ ಕೆಲಸ ತೊರೆದ ಐಐಟಿ ಪದವೀಧರ

ಚಿರಾಗ್ ಮದನ್ -

Profile
Pushpa Kumari Apr 16, 2026 10:55 PM

ನವದೆಹಲಿ, ಏ. 16: ಇತ್ತೀಚೆಗೆ ಕೆಲಸದ ಒತ್ತಡದಿಂದ ಸಮಸ್ಯೆ ಎದುರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವೈಯಕ್ತಿಕ ಕೆಲಸ ಹಾಗೂ ಕುಟುಂಬಕ್ಕೆ ಸರಿಯಾದ ಸಮಯ ನೀಡಲಾಗದೇ ಉತ್ತಮ ಪ್ಯಾಕೆಜ್ ಹೊಂದಿದ್ದ ಕೆಲಸ ತೊರೆಯುವವರು ಅನೇಕರು ಇದ್ದಾರೆ‌. ಈ ನಡುವೆ ಇಲ್ಲೊಬ್ಬ ಯುವಕ ಉತ್ತಮ ವೇತನವಿದ್ದರೂ ಮಾನಸಿಕ ನೆಮ್ಮದಿಗಾಗಿ ಕೆಲಸವನ್ನೇ ಬಿಟ್ಟು ಬಂದಿದ್ದಾರೆ. ಐಐಟಿ ದೆಹಲಿಯ (Delhi) ಪದವೀಧರ ತಮ್ಮ ವಾರ್ಷಿಕ 17 ಲಕ್ಷ ರುಪಾಯಿ ಸಂಬಳ ಬಿಟ್ಟು ರಾಜೀನಾಮೆ ನೀಡಿದ್ದಾರೆ.

ಕಾರ್ಪೊರೇಟ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಅನೇಕರು ಕನಸು ಕಾಣುತ್ತಾರೆ‌. ಆದರೆ 24 ವರ್ಷದ ಚಿರಾಗ್ ಮದನ್ ಸಂಬಳದ ಹಿಂದಿನ ವಾಸ್ತವದ ಬಗ್ಗೆ ಹೇಳಿಕೊಂಡಿದ್ದಾರೆ. ಇಲ್ಲಿನ ಒತ್ತಡ ಸಹಿಸಿಕೊಳ್ಳಲಾಗದೆ ಮಾನಸಿಕ ನೆಮ್ಮದಿಗಾಗಿ ಕೆಲಸ ತೊರೆದಿದ್ದಾರೆ. ಅನಾರೋಗ್ಯ ರಜೆ ಇಲ್ಲ, 15 ನಿಮಿಷಗಳ ಊಟ ಮಾಡಿ ವಾಪಸ್ಸು ಹೋಗಬೇಕು‌, ದಿನಕ್ಕೆ 9 ಗಂಟೆ ಕೆಲಸ ಎಂದು ಹೇಳಲಾಗಿತ್ತಾದರೂ, ಬೆಳಗ್ಗೆ 9ರಿಂದ ರಾತ್ರಿ 7 ರವರೆಗೆ ಕೆಲಸ ಮಾಡಬೇಕಿತ್ತು ಎಂದಿದ್ದಾರೆ.

ವಿಡಿಯೊ ನೋಡಿ:

ಚಿರಾಗ್ ಮದನ್‌ ಐಐಟಿ ದೆಹಲಿಯಲ್ಲಿ ಪದವಿ ಮುಗಿಸಿ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆದರೆ 17 ಲಕ್ಷ ರುಪಾಯಿ ಪ್ಯಾಕೇಜ್‌ನಿಂದ ಹೊರನಡೆದು ಸಂಬಳಕ್ಕಿಂತ ಮಾನಸಿಕ ಆರೋಗ್ಯವನ್ನು ಆಯ್ಕೆ ಮಾಡಿಕೊಂಡರು. ಅನಾರೋಗ್ಯದ ಕಾರಣಕ್ಕೆ ರಜೆ ಕೇಳಿದರೂ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ನೀಡಿ ರಜೆ ಪಡೆಯುವುದು ಒಂದು ಸಾಹಸವಾಗಿತ್ತು ಎಂದಿದ್ದಾರೆ.

ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ

ಇಂಟರ್‌ನೆಟ್‌ ಬಳಕೆದಾರರು ಈ ಯುವಕನ ಬೆಂಬಲಕ್ಕೆ ನಿಂತಿದ್ದಾರೆ. ಬಳಕೆದಾರರೊಬ್ಬರು, ʼʼನಾನು 23ನೇ ವಯಸ್ಸಿನಲ್ಲಿ ಆಕ್ಸಿಸ್ ಬ್ಯಾಂಕ್ ಕೆಲಸವನ್ನು ಬಿಟ್ಟಿದ್ದೇನೆ. ಈಗ ನಾನು SBI ಕಾರ್ಡ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆʼʼ ಎಂದು ಅನುಭವ ಶೇರ್ ಮಾಡಿದ್ದಾರೆ. ಮತ್ತೊಬ್ಬರು ʼʼಕೆಲಸಕ್ಕೆ ಸಂಬಳ ಮುಖ್ಯವಾದರೂ ಮಾನಸಿಕ ನೆಮ್ಮದಿಯೂ ಅಷ್ಟೇ ಮುಖ್ಯʼʼ ಎಂದು ಬರೆದಿದ್ದಾರೆ‌.