Self Harming: ಬೆಂಗಳೂರಲ್ಲಿ ಘೋರ ಘಟನೆ; ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ
Self Harming: ಸೊಸೆ ಜತೆ ಹೊಂದಾಣಿಕೆಯಾಗದ ಕಾರಣ ಬೇರೆ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ, ತಾಯಿ ಕೇಳಿದ್ದರು. ಆದರೆ, ವೃದ್ಧಾಶ್ರಮಕ್ಕೆ ಸೇರಿಸಿದ್ದರಿಂದ ನೊಂದ ವೃದ್ಧ ದಂಪತಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಬೆಂಗಳೂರು: ಮಗ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಬೆಂಗಳೂರಿನ ಜೆ.ಪಿ.ನಗರದ 8ನೇ ಹಂತದಲ್ಲಿ ನಡೆದಿದೆ. ಕೃಷ್ಣಮೂರ್ತಿ(81) ಹಾಗೂ ರಾಧಾ(74) ಮೃತ ದಂಪತಿ. ಸೊಸೆ ಜತೆ ಹೊಂದಾಣಿಕೆಯಾಗದ ಕಾರಣ ಬೇರೆ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ, ತಾಯಿ ಕೇಳಿದ್ದರು. ಆದರೆ, ವೃದ್ಧಾಶ್ರಮಕ್ಕೆ ಸೇರಿಸಿದ್ದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ.
2021ರಲ್ಲಿ ತಂದೆ, ತಾಯಿಯನ್ನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಪುತ್ರ ಸೇರಿಸಿದ್ದ. ಬಳಿಕ 2023ರಲ್ಲಿ ತಂದೆ, ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದ. ವೃದ್ಧಾಶ್ರಮದಿಂದ ವಾಪಸ್ ಬಂದ ನಂತರ ವೃದ್ಧ ದಂಪತಿಗೆ ಮತ್ತೆ ಮನೆಯಲ್ಲಿ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ತಂದೆ, ತಾಯಿಯನ್ನು ಪುತ್ರ ಸೇರಿಸಿದ್ದ. ಇದರಿಂದ ನೊಂದ ವೃದ್ಧ ದಂಪತಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಟಿವಿ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ವಿವಾಹಿತೆಯ ಕೊಂದು ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲೇ ಶವ ಹೂತ ಪ್ರಿಯಕರ
ಮಂಡ್ಯ: ವಿವಾಹಿತೆಯೊಬ್ಬಳನ್ನು ಇನ್ಸ್ಟಾಗ್ರಾಂನಲ್ಲಿ (instagram) ಪರಿಚಯ ಮಾಡಿಕೊಂಡು, ಹತ್ತೇ ದಿನದಲ್ಲಿ ಆಕೆಯ ಜೊತೆ ಚೆನ್ನಾಗಿ ಸುತ್ತಾಡಿ, ಬಳಿಕ ಆಕೆಯನ್ನು ಕೊಂದು (Murder Case) ಅವಳ ಬಳಿ ಇದ್ದ ಚಿನ್ನಾಭರಣ ದೋಚಿ ಶವವನ್ನು ತನ್ನ ಜಮೀನಿನಲ್ಲೇ ಹೂತಿಟ್ಟ ದುರುಳ ಪ್ರಿಯಕರನನ್ನು (lover) ಪೊಲೀಸರು ಬಂಧಿಸಿದ್ದಾರೆ. ಮಂಡ್ಯ (Mandya Crime news) ಜಿಲ್ಲೆಯ ಕೆ.ಆರ್ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿಈ ಕರಾಳ ಘಟನೆ ನಡೆದಿದೆ. ಈ ಕೊಲೆಯಿಂದ ಇಡೀ ಸಕ್ಕರೆ ನಗರಿ ಬೆಚ್ಚಿಬಿದ್ದಿದೆ.
ಕರೋಟಿ ಗ್ರಾಮದ ಪುನೀತ್ ಎಂಬಾತ ಈ ಕೃತ್ಯ ನಡೆಸಿದ ಕಾಮುಕ. ಹಾಸನ (Hassan) ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂಬಾಕೆ ಈ ದುಷ್ಟನ ಕೈಯಿಂದ ಮೃತಳಾದವಳು. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಯ ಕಾಲ್ ರೆಕಾರ್ಡ್ ತೆಗೆಸಿದ ಪೊಲೀಸರಿಗೆ ಈ ಆಸಾಮಿ ಸಿಕ್ಕಿಬಿದಿದ್ದಾನೆ.
ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್ನನ್ನು ಲವ್ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನದಲ್ಲೇ ಪ್ರೀತಿ, ಪ್ರೇಮ ಎಂದು ಈತನ ಬಲೆಗೆ ಬಿದ್ದು ಸುತ್ತಾಡಿದ್ದಾರೆ.
ಅದೇ ರೀತಿ ಕಳೆದ ಭಾನುವಾರ ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯದ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಅಲ್ಲೇ ಪ್ರೀತಿಯನ್ನು ಕೊಲೆ ಮಾಡಿದ ಪುನೀತ್, ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟಿದ್ದಾನೆ.
ಇದನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್ ಸ್ಟೋರಿ