ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ನ್ಯೂಸ್ ಕೊಟ್ಟ ಸಿಎಂ; ಅನಧಿಕೃತ ಮನೆಗಳ ಸಕ್ರಮಕ್ಕೆ ಅವಕಾಶ ಸೇರಿ ಹಲವು ಮಹತ್ವದ ಘೋಷಣೆ
ಭೂಸ್ವಾಧೀನಕ್ಕೊಳಪಟ್ಟ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಮೀನಿನಲ್ಲಿನ ಅನಧಿಕೃತ ಕಟ್ಟಡಗಳನ್ನು ಸರ್ಕಾರದ ಸುಗ್ರೀವಾಜ್ಞೆ ದಿನಾಂಕದಿಂದ 12 ವರ್ಷಗಳ ಹಿಂದೆ ವಾಸಯೋಗ್ಯ ಮನೆಗಳನ್ನು ನಿರ್ಮಿಸಿದ್ದಲ್ಲಿ ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಅವರು (DK Shivakumar) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತಂತೆ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ವಿವಿಧ ಯೋಜನೆ / ಕಾರ್ಯಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಬಿಡಿಎ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸಿಎಂ ಮಾಹಿತಿ ನೀಡಿದ್ದಾರೆ.
1.ನಿಯಮ 38 (ಡಿ) ಅನುಷ್ಠಾನ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಲಂ 38(ಡಿ) ಅನ್ನು ಅನಧಿಕೃತ ನಿವೇಶನ (ಕಟ್ಟಡದೊಂದಿಗೆ) ಹಂಚಿಕೆ ನಿಯಮಗಳು, 2020, ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ:52/ಶಾಸನ:2016 ದಿನಾಂಕ 28.05.2020ರಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಲಂ 38(ಡಿ) ಸೇರ್ಪಡೆಗೊಳಿಸಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಅದರಂತೆ ಪ್ರಾಧಿಕಾರದ ಅಂತಿಮ ಅಧಿಸೂಚನೆ ಒಳಪಟ್ಟು, ಐ-ತೀರ್ಪು ಅನುಮೋದನೆಗೊಂಡು. ಭೂಸ್ವಾಧೀನಕ್ಕೊಳಪಟ್ಟ ಪ್ರಾಧಿಕಾರದ ಜಮೀನಿನಲ್ಲಿನ ಅನಧಿಕೃತ ಕಟ್ಟಡಗಳನ್ನು ಸರ್ಕಾರದ ಸುಗ್ರೀವಾಜ್ಞೆ ದಿನಾಂಕದಿಂದ 12 ವರ್ಷಗಳ ಹಿಂದೆ (ದಿನಾಂಕ 10.07.2008ರ ಪೂರ್ವದಲ್ಲಿ) ವಾಸಯೋಗ್ಯ ಮನೆಗಳನ್ನು ನಿರ್ಮಿಸಿದ್ದಲ್ಲಿ ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಸರ್ಕಾರದ ಅಧಿಸೂಚನೆಯಂತೆ ಮರುಮಂಜೂರಾತಿದಾರರಿಂದ ಆಯಾ ಕಾಲಕ್ಕೆ ತಕ್ಕಂತೆ ಕಂದಾಯ ಇಲಾಖೆ, ಕರ್ನಾಟಕ ಸರ್ಕಾರವು ವಿಧಿಸಬಹುದಾದ ಮಾರುಕಟ್ಟೆ ಮಾರ್ಗಸೂಚಿ ದರದ ಮೌಲ್ಯವು ಈ ಕೆಳಕಂಡಂತೆ ಪಾವತಿಸಿಕೊಳ್ಳಬೇಕಾಗಿರುತ್ತದೆ.

- ಮೂಲೆ ನಿವೇಶನಗಳಲ್ಲಿನ ಕಟ್ಟಡಗಳಾಗಿದ್ದಲ್ಲಿ ಮೇಲ್ಕಂಡ ಮಾರ್ಗಸೂಚಿ ದರದ ಎರಡರಷ್ಟು ಮೌಲ್ಯ ಪಾವತಿಸಿಕೊಳ್ಳಬೇಕಾಗಿರುತ್ತದೆ.
- ಉದ್ಯಾನವನ / ಆಟದ ಮೈದಾನ / ಮುಕ್ತ ಸ್ಥಳ, ನಾಗರಿಕ ಸೌಕರ್ಯಗಳಿಗೆ ಮೀಸಲಾದ ಜಾಗ, ರಸ್ತೆ ಅಥವಾ ಪ್ರಸ್ತಾವಿತ ರಿಂಗ್ರಸ್ತೆಯ ಜೋಡಣೆಗೆ ಅಡ್ಡಿಯಾಗುವ ಜಾಗರಾಷ್ಟ್ರೀಯ ಹೆದ್ದಾರಿ / ಬೈಪಾಸ್ ರಸ್ತೆ / ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಯೋಜನೆಗಳಿಗೆ ಸಂಬಂಧಿಸಿದ ಜಾಗ, ಮಳೆ ನೀರು ಚರಂಡಿ / ಕೆರೆ ಪ್ರದೇಶ / ನದಿ ಪಾತ್ರ, ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗ ನ್ಯಾಯಾಲಯದ ಮಧ್ಯಂತರ ಆದೇಶದಿಂದ ವಿವಾದಿತ ಅಥವಾ ಅಡಚಣೆಯಾದ ಸ್ವಾಧೀನ ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
- ಅಧಿಸೂಚಿತ ಜಾಗದಲ್ಲಿ ಕಟ್ಟಡ/ಮನೆ ನಿರ್ಮಿಸಿಕೊಂಡು ವಾಸವಿರುವವರಿಗೆ- ಅವಧಿಯೊಳಗೆ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು.
- ಈ ಅವಕಾಶವು ಕಾಯ್ದೆಯಲ್ಲಿ ನಿಗದಿಪಡಿಸಿರುವ ಅರ್ಹತಾ ಷರತ್ತುಗಳನ್ನು ಪೂರೈಸುವವರಿಗೆ ಮಾತ್ರ ಅನ್ವಯಿಸುತ್ತದೆ.
- ಈ ಸೌಲಭ್ಯವನ್ನು ಪ್ರಾಧಿಕಾರದ ಭೂಮಿಗಳಲ್ಲಿನ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2026ರ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳೊಳಗಾಗಿ ಈ ಪ್ರಕರಣದಡಿಯಲ್ಲಿ ಪಡೆಯದಿದ್ದಲ್ಲಿ, ಪ್ರಾಧಿಕಾರವು ಅಂಥ ತೆರವುಮಾಡಲು ಕ್ರಮವಹಿಸಲಾಗುವುದು.
- ಕಲಂ 38(ಡಿ) ಈಗಾಗಲೇ ಜಾರಿಗೆ ಬಂದಿದ್ದು, ಅರ್ಜಿ ಸ್ವೀಕಾರ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.12.2026. ಮುಂದಿನ ದಿನಗಳಲ್ಲಿ ಆನ್ ಲೈನ್ ಮೂಲಕವೇ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ನಿಗದಿತ ಅರ್ಜಿ ನಮೂನೆಯೊಂದಿಗೆ ಈ ಕೆಳಕಂಡ ದಾಖಲಾತಿಗಳನ್ನು ಸಲ್ಲಿಸಬೇಕಾಗಿರುತ್ತದೆ

- ಪ್ರೋತ್ಸಾಹದಾಯಕ ನಿವೇಶನಗಳು (Incentive Sites)
ಸರ್ಕಾರದ ಆದೇಶ ಸಂಖ್ಯೆ: ನಅಇ 175 ಎಂಎನ್ಎಕ್ಸ್ 2020 (ಇ), ಬೆಂಗಳೂರು, ದಿನಾಂಕ: 24.08.2026ರನ್ವಯ, ನಾಡಪ್ರಭು ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿ ಸ್ವಇಚ್ಛೆಯಿಂದ ಭೂಸ್ವಾಧೀನವನ್ನು ಒಪ್ಪಿಕೊಂಡು ನಗದು ಪರಿಹಾರ ಪಡೆದಿರುವ ಭೂಮಾಲೀಕರಿಗೆ ವಿಶೇಷ ಪ್ರೋತ್ಸಾಹದಾಯಕ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
ಆದರೆ, Right to Fair Compensation and Transparency in Land Acquisition, Rehabilitation and Resettlement Act, 2013 ರನ್ವಯ Incentive Scheme for Voluntary Surrender of Land Rules, 1989 ನ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು, ಸರ್ಕಾರದ ಆದೇಶ ಸಂಖ್ಯೆ: ನಅಇ 53 ಬೆಂಭೂಸ್ವಾ 2011, ದಿನಾಂಕ: 11.08.2011ರಲ್ಲಿ ಕಲ್ಪಿಸಲಾಗಿದ್ದ ಅವಕಾಶದಂತೆ ಈ ಪ್ರೋತ್ಸಾಹದಾಯಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
- ಅಂಚಿನ ಜಾಗ ಹಂಚಿಕೆ (Marginal Land Allotment)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಅಂಚಿನ ಜಾಗಗಳು (Marginal Land) ಲಭ್ಯವಿದ್ದಲ್ಲಿ, ಅಂಚಿನ ಜಾಗದ ಬಗ್ಗೆ ಹಂಚಿಕೆದಾರರಿಗೆ ಆಸಕ್ತಿಯಿದ್ದಲ್ಲಿ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪ್ರಕಟಣೆಯನ್ನು ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗೆ ನಿವೇಶನದ ದಾಖಲಾತಿಗಳೊಂದಿಗೆ ಅಂಚಿನ ಜಾಗದ ಹಂಚಿಕೆಯ ಬಗ್ಗೆ ಅರ್ಜಿಯನ್ನು ಸಲ್ಲಿಸುವುದು. ಅರ್ಜಿಯನ್ನು ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಪರಿಶೀಲಿಸಿ ಅಂಚಿನ ಜಾಗವನ್ನು ಹಂಚಿಕೆ ಮಾಡಲು ಪ್ರಾಧಿಕಾರದಿಂದ ಕ್ರಮವಹಿಸಲಾಗುವುದು.
ಪ್ರಾಧಿಕಾರದಿಂದ ಹಂಚಿಕೆಯಾಗುವ ಎಲ್ಲಾ ಹಳೆಯ ಬಡಾವಣೆಯ (ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳನ್ನು ಹೊರತುಪಡಿಸಿ) ನಿವೇಶನಗಳು ಅಂದರೆ ಸಾಮಾನ್ಯ ಹಂಚಿಕೆ (General Allotment) ರೆವಿನ್ಯೂ ನಿವೇಶನಕ್ಕೆ ಬದಲಿ ನಿವೇಶನ ಮತ್ತು ವಿಶೇಷ ಪ್ರೋತ್ಸಾಹ ಯೋಜನೆಯಡಿ ಹಂಚಿಕೆಯಾಗುವ ವಿವಿಧ ಅಳತೆಗಳ ನಿವೇಶನಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡುವ ದಿನಾಂಕದಲ್ಲಿನ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರವನ್ನು ವಿಧಿಸಲು;
ಜಮೀನು ಕಳೆದುಕೊಂಡಿರುವ ಭೂಮಾಲೀಕರಿಗೆ ಪರಿಹಾರವಾಗಿ 60:40 ರ ಅನುಪಾತದಲ್ಲಿ ಅಭಿವೃದ್ಧಿ ಹೊಂದಿದ ನಿವೇಶನಗಳನ್ನು ನೀಡುವಾಗ, 600 ಚ.ಅಡಿ ಮಿತಿಗೊಳಿಸಿ ಹಂಚಿಕೆ ಮಾಡುವ ಅಂಚಿನ ಜಾಗಕ್ಕೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡುವ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ (Guideline) ದರಗಳನ್ನು ವಿಧಿಸುವುದು.
ಜಮೀನು ಕಳೆದುಕೊಂಡಿರುವ ಭೂಮಾಲೀಕರಿಗೆ ಹಂಚಿಕೆ ಮಾಡಲಾಗುವ ನಿವೇಶನಗಳ ಒಟ್ಟು ವಿಸ್ತೀರ್ಣವು ಅರ್ಹತೆಗಿಂತ ಕಡಿಮೆ ಇದ್ದಲ್ಲಿ ಅಥವಾ ಹೆಚ್ಚು ವಿಸ್ತೀರ್ಣ ಪಡೆಯಲು ಭೂಮಾಲೀಕರು ನಿರಾಕರಿಸಿದ್ದಲ್ಲಿ, ಅಂತಹ ವಿಸ್ತೀರ್ಣಕ್ಕೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರಕ್ಕೆ ಸಮಾನವಾದ ನಗದು ಪರಿಹಾರವನ್ನು ನೀಡುವುದು.
ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಮೂಲ ನಿವೇಶನದ ಪಕ್ಕದ ಮತ್ತು ಹಿಂಬದಿಯಲ್ಲಿರುವ ಅಂಚಿನ ಜಾಗಕ್ಕೆ (ಮೂಲೆ ನಿವೇಶನಗಳಿಗೆ ಹೊಂದಿಕೊಂಡಂತಿರುವ ಅಂಚಿನ ಜಾಗ ಹೊರತುಪಡಿಸಿ) ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡುವ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರಗಳನ್ನು ವಿಧಿಸುವುದು.
ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಮೂಲ ನಿವೇಶನದ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗಿ ಹೆಚ್ಚುವರಿಯಾಗಿ ನೀಡುವ ಜಾಗಕ್ಕೆ (ಮೂಲ ನಿವೇಶನಗಳಿಗೆ ಹೊಂದಿಕೊಂಡಂತಿರುವ ಅಂಚಿನ ಜಾಗ ಹೊರತುಪಡಿಸಿ) ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡುವ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರಗಳನ್ನು ವಿಧಿಸುವುದು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೊಳಚೆ ಪ್ರದೇಶದ ನಿವೇಶನಗಳಿಗೆ ವಿಧಿಸುತ್ತಿರುವ ಪ್ರತಿ ಚ.ಮೀ.ಗೆ 200/-ರೂಗಳ ಬದಲಾಗಿ, ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡುವ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರದ ಪ್ರತಿ ಚ.ಮೀ.ಗೆ ಶೇ. 20 ರಂತೆ ದರ ವಿಧಿಸುವುದು.
4.ಶುದ್ಧ ಕ್ರಯಪತ್ರ ಮೇಳ (Absolute Sale Deed Mela)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡಿ, ಗುತ್ತಿಗೆ ಅವಧಿಯು ಮುಕ್ತಾಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಬಿಡಿಎ ಹಂಚಿಕೆ ಮಾಡುವ ನಿವೇಶನಗಳ ಹತ್ತು ವರ್ಷದ ಗುತ್ತಿಗೆ ಅವಧಿಯಿರುತ್ತದೆ. ಈ ಅವಧಿಯು ಪೂರ್ಣಗೊಂಡ ಬಳಿಕ ನಾಗರಿಕರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ಸದರಿ ನಿವೇಶನಕ್ಕೆ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನಾನಾ ಕಾರಣಗಳಿಂದ ಸುಮಾರು 20 ಸಾವಿರ ಹಂಚಿಕೆದಾರರು ಗುತ್ತಿಗೆ ಅವಧಿ ಪೂರ್ಣಗೊಂಡರೂ ಶುದ್ಧ ಕ್ರಯಪತ್ರವನ್ನು ಮಾಡಿಸಿಕೊಂಡಿರುವುದಿಲ್ಲ.
ʼಬೆಲೆ ಬರೆʼಗೆ ವಿರೋಧ: ನ.11ರಂದು ಬಿಜೆಪಿ ಪ್ರತಿಭಟನೆ
ಹಂಚಿಕೆದಾರರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳವನ್ನು ಆಯೋಜಿಸುತ್ತಿದ್ದು, ನಿವೇಶನದ ದಾಖಲಾತಿಗಳೊಂದಿಗೆ ದಿನಾಂಕ 17.12.2026ರೊಳಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ಅರ್ಜಿಯನ್ನು ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಕ್ರಮವಹಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.