ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranabaali OTT release: ಒಟಿಟಿಗೆ ಬಂದೇ ಬಿಡ್ತು ‘ರಣಬಾಲಿ’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

Ranabaali OTT release: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಆ್ಯಕ್ಷನ್ ಸಿನಿಮಾ ‘ರಣಬಾಲಿ’ (Ranabaali OTT release) ಇದೀಗ ಒಟಿಟಿ ಅಂಗಳಕ್ಕೆ ಬರಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಾಲ್ಕು ವಾರಗಳ ಬಳಿಕ ಡಿಜಿಟಲ್ ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಕುರಿತು ನೆಟ್‌ಫ್ಲಿಕ್ಸ್ (Netflix) ಸೋಮವಾರ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್ 13ರಿಂದ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಒಟಿಟಿಗೆ ಬಂದೇ ಬಿಡ್ತು ‘ರಣಬಾಲಿ’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

ರಣಬಾಲಿ ಸಿನಿಮಾ -

Yashaswi Devadiga
Yashaswi Devadiga Nov 9, 2026 8:53 PM

ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಆ್ಯಕ್ಷನ್ ಸಿನಿಮಾ ‘ರಣಬಾಲಿ’ (Ranabaali OTT release) ಇದೀಗ ಒಟಿಟಿ ಅಂಗಳಕ್ಕೆ ಬರಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಾಲ್ಕು ವಾರಗಳ ಬಳಿಕ ಡಿಜಿಟಲ್ ವೇದಿಕೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಕುರಿತು ನೆಟ್‌ಫ್ಲಿಕ್ಸ್ (Netflix) ಸೋಮವಾರ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್ 13ರಿಂದ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ ರಣಬಾಲಿ!

ನೆಟ್‌ಫ್ಲಿಕ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಒಟಿಟಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ವಿಶೇಷವೆಂದರೆ, ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ‘ರಣಬಾಲಿ’ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Bigg Boss Kannada 13: ‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್‌ ಮಾಡಿದ ಕಿಚ್ಚ!

'ಸಿಂಗನಮಲ ಬೊಬ್ಬಿಲಿ ರಣಬಾಲಿ ಬರುತ್ತಿದ್ದಾನೆ. ನವೆಂಬರ್ 13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ' ಎಂಬ ಅರ್ಥದ ಪೋಸ್ಟ್ ಮೂಲಕ ಚಿತ್ರತಂಡ ಹಾಗೂ ಒಟಿಟಿ ಸಂಸ್ಥೆ ಸಿನಿಮಾ ಬಿಡುಗಡೆಯನ್ನು ಘೋಷಿಸಿವೆ.ಅಕ್ಟೋಬರ್ 16, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ನವೆಂಬರ್ 13ರಂದು ಒಟಿಟಿಗೆ ಬರಲಿದೆ.

1876ರ ಭೀಕರ ಬರಗಾಲದ ಹಿನ್ನೆಲೆಯ ಕಥೆ!

‘ರಣಬಾಲಿ’ ಸಿನಿಮಾವನ್ನು ರಾಹುಲ್ ಸಂಕೃತ್ಯನ್ ನಿರ್ದೇಶನ ಮಾಡಿದ್ದಾರೆ. 1876ರಿಂದ 1878ರವರೆಗೆ ನಡೆದ ಮಹಾ ಮದ್ರಾಸ್ ಬರಗಾಲದ ಘಟನೆಗಳಿಂದ ಪ್ರೇರಣೆ ಪಡೆದು ಈ ಐತಿಹಾಸಿಕ ಆ್ಯಕ್ಷನ್ ಡ್ರಾಮಾವನ್ನು ರೂಪಿಸಲಾಗಿದೆ.19ನೇ ಶತಮಾನದ ಭಾರತದಲ್ಲಿ ನಡೆಯುವ ಕಥೆ ಬ್ರಿಟಿಷರ ವಸಾಹತುಶಾಹಿ ಆಡಳಿತದ ಕ್ರೌರ್ಯ, ದೌರ್ಜನ್ಯ ಮತ್ತು ಲಕ್ಷಾಂತರ ಭಾರತೀಯರ ಸಾವಿಗೆ ಕಾರಣವಾದ ದುರಂತಗಳ ಸುತ್ತ ಸಾಗುತ್ತದೆ.

ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಿಂಗನಮಲ ಬೊಬ್ಬಿಲಿ ರಣಬಾಲಿ ಎಂಬ ಬಂಡಾಯಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡುವ ಧೀರನಾಗಿ ವಿಜಯ್ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಜಯಮ್ಮ ಪಾತ್ರದಲ್ಲಿ, ಅಂದರೆ ರಣಬಾಲಿಯ ಪತ್ನಿಯಾಗಿ ಅಭಿನಯಿಸಿದ್ದಾರೆ.ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಅವರು ಬ್ರಿಟಿಷ್ ಅಧಿಕಾರಿ ಸರ್ ಥಿಯೋಡರ್ ಹೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇವರ ಜೊತೆಗೆ ಈಶ್ವರಿ ರಾವ್, ಲಾಲ್, ವಿನೋದ್ ಸಾಗರ್, ಮಧು ನಂದನ್ ಮತ್ತು ಕಿಶೋರ್ ಕುಮಾರ್ ಪೊಲಿಮೇರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಟಿ-ಸೀರೀಸ್ ಫಿಲ್ಮ್ಸ್ ಅರ್ಪಿಸಿದೆ. ಅಜಯ್-ಅತುಲ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಹಿಂದೆ 2018ರಲ್ಲಿ ಬಿಡುಗಡೆಯಾಗಿದ್ದ ‘ಟ್ಯಾಕ್ಸಿವಾಲಾ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ರಾಹುಲ್ ಸಂಕೃತ್ಯನ್ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಈ ಜೋಡಿ ‘ರಣಬಾಲಿ’ ಮೂಲಕ ಒಂದಾಗಿದೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಮಂಜ ಎಂಟ್ರಿ ಕೊಟ್ಟಿದ್ದು ಹೇಗಿತ್ತು? ಸ್ಪರ್ಧಿಗಳು ಶಾಕ್‌

ಬಾಕ್ಸ್ ಆಫೀಸ್‌ನಲ್ಲಿ ಹೇಗಿತ್ತು ಚಿತ್ರದ ಗಳಿಕೆ?

ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ‘ರಣಬಾಲಿ’ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. Sacnilk ವರದಿಯ ಪ್ರಕಾರ, ಸಿನಿಮಾ ಭಾರತದಲ್ಲಿ ಸುಮಾರು 58.95 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ.ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 12.35 ಕೋಟಿ ರೂಪಾಯಿ ಗಳಿಸಿದ್ದು, ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ 80.79 ಕೋಟಿ ರೂಪಾಯಿ ಎಂದು ವರದಿಯಾಗಿದೆ.