ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏ.5ರಂದು ವಿದ್ಯಾನಿಧಿ ಡಾ.ವಿದ್ಯಾಭೂಷಣ್ ಸಂಗೀತ ಕಛೇರಿ

ಕ್ಯಾನ್ಸರ್, ಡಯಾಲಿಸಸ್ ರೋಗಿಗಳ ನೆರವಿಗಾಗಿ ಏ.5ರಂದು ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಅವರಿಂದ ವಿಶೇಷ ಶಾಸ್ತ್ರೀಯ ಸಂಗೀತ ಕಚೇರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. “ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆ” ಎಂಬ ಅರ್ಥಪೂರ್ಣ ಕಾರ್ಯಕ್ರಮ ಭಾನುವಾರ ಸಂಜೆ 5:30 ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ.

ಏ.5ರಂದು ವಿದ್ಯಾನಿಧಿ ಡಾ.ವಿದ್ಯಾಭೂಷಣ್ ಸಂಗೀತ ಕಛೇರಿ

-

Ashok Nayak
Ashok Nayak Mar 27, 2026 10:54 AM

ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆಯ ಕಾರ್ಯಕ್ರಮ

ಬೆಂಗಳೂರು: ಕ್ಯಾನ್ಸರ್, ಡಯಾಲಿಸಸ್ ರೋಗಿಗಳ ನೆರವಿಗಾಗಿ ಏ.5ರಂದು ಎ.ಡಿ.ಎ. ರಂಗಮಂದಿರ ದಲ್ಲಿ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಅವರಿಂದ ವಿಶೇಷ ಶಾಸ್ತ್ರೀಯ ಸಂಗೀತ ಕಚೇರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. “ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆ” ಎಂಬ ಅರ್ಥಪೂರ್ಣ ಕಾರ್ಯಕ್ರಮ ಭಾನುವಾರ ಸಂಜೆ 5:30 ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: Bangalore News: ಮುಖ್ಯಮಂತ್ರಿ ಪದವಿ ಗುದ್ದಾಟ ವಿಷಯಾಂತರಕ್ಕೆ ಒಳ ಮೀಸಲಾತಿ ಬಳಕೆ: ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಂಕಲ್ಪದಿಂದ ಸಮಾಜಮುಖಿ ಸೇವಾ ಕಾರ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕ್ಯಾನ್ಸರ್ ಮತ್ತು ಡಯಾಲಿಸಿಸ್ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳಿಗೆ ನೆರವು ಒದಗಿಸುವ ಉದ್ದೇಶ ಹೊಂದಿದೆ. ಸಂಗೀತ ಮತ್ತು ಸೇವೆಯನ್ನು ಒಂದಾಗಿಸುವ ಈ ವಿನೂತನ ಪ್ರಯತ್ನವು ಸಮಾಜದ ಸಹಾನುಭೂತಿ ಮತ್ತು ಸಹಕಾರವನ್ನು ಹೆಚ್ಚಿಸಲು ನೆರವಾಗಲಿದೆ. ಸಮಾಜದ ಒಳಿತಿಗಾಗಿ ನಡೆಯುತ್ತಿರುವ ಈ ಸೇವಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾಗೂ ಅಗತ್ಯವಿರುವವರಿಗೆ ನೆರವಾಗಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: +91 99019 01339/ 9739991752 ಸಂಪರ್ಕಿಸಲು ಮನವಿ ಮಾಡಿದೆ.