Amruthadhaare Serial: ಕೇಡಿ ಜೇಡಿಗೆ ಸವಾಲ್! ಭೂಮಿಯ ಮುಂದಿನ ನಡೆಯೇನು?
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕಳೆದೊಂದು ವಾರದಿಂದ ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಜೈದೇವ್ ತನ್ನ ಕುತಂತ್ರದಿಂದ ಅಂತೂ ಮದುವೆವರೆಗೆ ಸುನಿಯನ್ನ ತಂದು ನಿಲ್ಲಿಸಿದ್ದಾನೆ. ಆದರೀಗ ಜೈದೇವ್ ಪ್ಲ್ಯಾನ್ ಉಲ್ಟಾ ಆಗಿದೆ. ಮದುವೆ ಆಗಬಾರದು ಅಂತ ಅದೆಷ್ಟೇ ಪ್ಲ್ಯಾನ್ ಮಾಡಿದ್ದರೂ ಸಕ್ಸೆಸ್ ಆಗಲೇ ಇಲ್ಲ. ಇದೀಗ ಭೂಮಿ , ಜೈದೇವ್ ಮುಂದೆ ಬೆಂಕಿ ಆಗಿದ್ದಾಳೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಕಳೆದೊಂದು ವಾರದಿಂದ ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಜೈದೇವ್ ತನ್ನ ಕುತಂತ್ರದಿಂದ ಅಂತೂ ಮದುವೆವರೆಗೆ ಸುನಿಯನ್ನ (Suni) ತಂದು ನಿಲ್ಲಿಸಿದ್ದಾನೆ. ಆದರೀಗ ಜೈದೇವ್ ಪ್ಲ್ಯಾನ್ ಉಲ್ಟಾ ಆಗಿದೆ. ಮದುವೆ ಆಗಬಾರದು ಅಂತ ಅದೆಷ್ಟೇ ಪ್ಲ್ಯಾನ್ ಮಾಡಿದ್ದರೂ ಸಕ್ಸೆಸ್ ಆಗಲೇ ಇಲ್ಲ. ಇದೀಗ ಭೂಮಿ (Bhoomika), ಜೈದೇವ್ (Jaidev) ಮುಂದೆ ಬೆಂಕಿ ಆಗಿದ್ದಾಳೆ.
ಜೈದೇವ್ ಸಖತ್ ಆವಾಜ್
ಅರಿಶಿಣ ಶಾಸ್ತ್ರದ ವೇಳೆ ಅಪ್ಪು , ಸುನಿ ಬಳಿ ಮೊಬೈಲ್ ಕಸಿದುಕೊಂಡಿದ್ದಾನೆ. ಆಗ ಸುನಿಗೆ ಜೈದೇವ್ ಕಾಲ್ ಮಾಡುತ್ತಾನೆ. ಇದನ್ನು ಅಪ್ಪು ನೋಡಿದ್ದಾನೆ. ಹೀಗಾಗಿ ಅಪ್ಪುಗೆ ಡೌಟ್ ಬಂದಿದೆ. ಈ ವಿಚಾರವನ್ನು ಭೂಮಿಗೆ ಹೇಳುತ್ತಾನೆ. ಭೂಮಿ ನೇರವಾಗಿ ಬಂದಿದ್ದು ಜೈದೇವ್ ಬಳಿ. ಜೈದೇವ್ ಸಖತ್ ಆವಾಜ್ ಕೂಡ ಹಾಕಿದ್ದಾಳೆ.
ಇದನ್ನೂ ಓದಿ: Dhurandhar 2: ಜವಾನ್, ಛಾವಾ, ಸ್ತ್ರೀ 2 ದಾಖಲೆ ಉಡೀಸ್; ʻಧುರಂಧರ್ʼ ಭರ್ಜರಿ ಕಲೆಕ್ಷನ್
ಮಲ್ಲಿ ಜೀವನದಲ್ಲಿ ಆಟ ಆಡಬೇಕು ಅಂದಿಕೊಂಡಿದ್ರಿ ಅಲ್ವಾ? ಆಟ ಆಡ್ತೀರಾ ಆದರೆ ಮಲ್ಲಿ ಜೀವನದಲ್ಲಿ ಅಲ್ಲ. ನೀವೇನು ಮದುವೆ ನಿಲ್ಲಿಸೋದು ನಾನೆ ನಿಲ್ಲಿಸುತ್ತೀನಿ ಅಂತ ಅವಾಜ್ ಹಾಕಿದ್ದಾಳೆ. ಜೈದೇವ್ ಕೂಡ ತಕ್ಷಣ ಸುನಿಗೆ ಕಾಲ್ ಮಾಡಿ, ಅಲ್ಲಿಂದ ಎಸ್ಕೇಪ್ ಆಗಲು ಹೇಳಿದ್ದಾನೆ. ಆದರೆ ಅಷ್ಟೊತ್ತಾಗಲೇ ಭೂಮಿ ಮದುವೆ ಮಂಟಪಕ್ಕೆ ಬಂದು ಸುನಿ ಮುಖಾಮುಖಿ ಆಗಿದ್ದಾಳೆ. ಒಂದು ಕಡೆ ಗೌತಮ್ ಕೂಡ ಸುನಿಗೆ ಮಲ್ಲಿಯನ್ನು ಮದುವೆ ಆಗಲೇ ಬೇಕು ಅಂತ ವಾರ್ನ್ ಮಾಡಿದ್ದರೆ, ಇತ್ತ ಭೂಮಿ ಮದುವೆ ನಿಲ್ಲಿಸಲು ಬಂದಿದ್ದಾಳೆ.
ಇದೀಗ ಭೂಮಿ ಮುಂದಿನ ನಡೆಯೇನು? ಗೌತಮ್ ವಿಚಾರದಂತೆ ಸುನಿಗೆ ಮದುವೆ ಮಾಡಿಸ್ತಾಳಾ? ಅಥವಾ ಈ ವಿಚಾರದಲ್ಲಿ ಗೌತಮ್ ಹಾಗೂ ಭೂಮಿ ನಡುವೆ ಬಿರುಕು ಮೂಡುತ್ತಾ? ಅವೆಲ್ಲವೂ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಗೌತಮ್‌ಗೆ ಗೊತ್ತಾಗಿದ್ದು ಹೇಗೆ?
ಅತ್ತ ಭೂಮಿ ಮದುವೆ ನಿಲ್ಲಿಸಲು ನೋಡಿದ್ರೆ, ಇತ್ತ ಗೌತಮ್, ಮಲ್ಲಿಗೆ ತಾಳಿ ಕಟ್ಟಲೇ ಬೇಕು ಅಂತ ಸುನಿಗೆ ವಾರ್ನ್ ಮಾಡಿದ್ದಾನೆ.
ಜೈದೇವ್ ನೇರವಾಗಿ ಮದುವೆ ನಡೆಯುವ ಜಾಗಕ್ಕೆ ಬಂದಿದ್ದಾನೆ. ಪಾರ್ಥ ಹಾಗೂ ಗೌತಮ್ ಮಾತನಾಡುವಾಗ, ಸುನಿಯನ್ನ ತೋರಿಸಿದ್ದಾನೆ ಗೌತಮ್. ಆಗ ಪಾರ್ಥಗೆ ಶಾಕ್ ಆಗಿದೆ. ಜೈದೇವ್ ಜೊತೆ ಸುನಿ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾನೆ. ಇದಾದ ನಂತರ ಸುನಿಯನ್ನ ಫಾಲೋ ಮಾಡಿದ್ದಾರೆ ಗೌತಮ್ ಹಾಗೂ ಪಾರ್ಥ. ಆಗ ಸುನಿ ಹಾಗೂ ಜೈದೇವ್ ಮಾತನಾಡುತ್ತಿರೋದು ಗೌತಮ್ ನೋಡಿದ್ದಾನೆ. ಜೈದೇವ್ ಹೋದ ಬಳಿಕ ಸುನಿ ಕೂಡ ಗೌತಮ್ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: Amruthadhaare serial: ಜೇಡಿಯಿಂದ ಮಲ್ಲಿ ಬಾಳು ಕಾಪಾಡ್ತಾನಾ ಗೌತಮ್? ಮಕ್ಕಳ ಮಾತಿಗೆ ಓಗೊಡಲೇಬೇಕು ಭೂಮಿ!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.