ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಧಿಕ ಮಾಸದ ಪ್ರಯುಕ್ತ ಜೂನ್ 15ರವರೆಗೆ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ

Bengaluru News: ಬೆಂಗಳೂರು ನಗರದ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತ ಗಿರಿರಾಜಾಚಾರ್ ಮತ್ತು ನೂತನ ವ್ಯವಸ್ಥಾಪಕ ನಂದಕಿಶೋರಾಚಾರ್ ಅವರ ನೇತೃತ್ವದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ

ಬೆಂಗಳೂರಿನ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ. -

Profile
Siddalinga Swamy May 18, 2026 3:46 PM

ಬೆಂಗಳೂರು, ಮೇ 18: ಬೆಂಗಳೂರು ನಗರದ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತ ಗಿರಿರಾಜಾಚಾರ್ ಮತ್ತು ನೂತನ ವ್ಯವಸ್ಥಾಪಕ ನಂದಕಿಶೋರಾಚಾರ್ ಅವರ ನೇತೃತ್ವದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜೆಗಳು, ಹೋಮಗಳು, ಬ್ರಾಹ್ಮಣ ಸುವಾಸಿನಿ ಪೂಜೆ, ಪ್ರತ್ಯಕ್ಷ ಗೋಪೂಜೆ, ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯು ಸಾಮೂಹಿಕ 108 ದಂಪತಿಗಳಿಂದ ಮೇ 31ರಂದು ನೆರವೇರಲಿದೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸೇವೆಯು 108 ದಂಪತಿಗಳಿಂದ ಜೂನ್‌ 13ರಂದು ನೆರವೇರಲಿದೆ ಎಂದು ನಂದಕಿಶೋರ ಆಚಾರ್ಯ ತಿಳಿಸಿದ್ದಾರೆ.‌

ಶ್ರೀಮಠದಲ್ಲಿ ವಿಶೇಷವಾಗಿ ಪ್ರತಿದಿನ ಅಪೂಪ ಸೇವಾ ಮುಂತಾದ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಂದಕಿಶೋರ ಆಚಾರ್ಯ ತಿಳಿಸಿದ್ದಾರೆ.‌ ಶ್ರೀಮಠದಲ್ಲಿ ಅಧಿಕ ಮಾಸದ ಅಂಗವಾಗಿ ಮೇ 17ರಂದು ಭಾನುವಾರದಿಂದ ವಿಶೇಷ ಪೂಜೆಗಳು, ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಜೂನ್‌ 15ರವರೆಗೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಪುರೋಹಿತರಾದ ಇಂದಿರೇಶ ಆಚಾರ್ ಅವರ ಪೌರೋಹಿತ್ಯದಲ್ಲಿ ಶ್ರೀಮಠದಲ್ಲಿ ಗಣ ಹೋಮದೊಂದಿಗೆ ವಿಶೇಷ ಪೂಜೆಗಳು ಪ್ರಾರಂಭವಾಯಿತು. ಅಧಿಕಮಾಸದ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9448847586 / 9141978742 ಗೆ ಸಂಪರ್ಕಿಸಬಹುದಾಗಿದೆ.