ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ವ್ಯವಹಾರಗಳಿಗೆ ಜಾಗತಿಕ ಅವಕಾಶ ವಿಸ್ತರಣೆಗೆ ವಾಲ್ ಮಾರ್ಟ್ ನಿಂದ ಗ್ರೋತ್ ಸಮ್ಮಿಟ್ 2026

ವಾಲ್‌ ಮಾರ್ಟ್‌ ವೃದ್ಧಿ ಮೂಲಕ 115000+ ಉದ್ಯಮಿಗಳ ಬೆಳವಣಿಗೆಯನ್ನು ಬೆಂಬಲಿಸಲು ಭಾರತ ದಿಂದ ಈಗಾಗಲೇ ಪಡೆಯಾಗಿರುವ 40 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಧರಿಸಿ, ಭಾರತದ ರಫ್ತು ಪರಿಸರ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಮತ್ತು ಇನ್ನೂ ಹೆಚ್ಚಿನ ವ್ಯವಹಾರಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಾಲ್ ಮಾರ್ಟ್ ನ ನಿರಂತರ ಬದ್ಧತೆಯನ್ನು ಈ ಶೃಂಗಸಭೆಯು ಪ್ರಮುಖವಾಗಿ ಚರ್ಚಿಸಿತು.

ವಾಲ್ ಮಾರ್ಟ್ʼ ನಿಂದ ಗ್ರೋತ್ ಸಮ್ಮಿಟ್ 2026

-

Profile
Ashok Nayak May 7, 2026 5:26 PM

ದೇಶದಲ್ಲಿ ವಾಲ್ ಮಾರ್ಟ್ ವೃದ್ಧಿಯಿಂದ 1,15,000+ ಎಂಎಸ್ಎಂಇಗಳ ಬಲವರ್ಧನೆ

ಬೆಂಗಳೂರು: ವಾಲ್ ಮಾರ್ಟ್ ಇಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ತನ್ನ ಎರಡನೇ ಆವೃತ್ತಿಯ ವಾಲ್ ಮಾರ್ಟ್ ಗ್ರೋತ್ ಸಮ್ಮಿಟ್-ಇಂಡಿಯಾ 2026 ಅನ್ನು ಆಯೋಜಿಸಿತ್ತು. ರಫ್ತು-ಸಿದ್ಧ ವ್ಯವಹಾರಗಳು, ಎಂಎಸ್ಎಂಇಗಳು, ಡಿಜಿಟಲ್ –ಮೊದಲು ಬ್ರ್ಯಾಂಡ್ ಗಳು, ಡಿ2ಸಿ ಮಾರಾ ಟಗಾರರು ಮತ್ತು ಸಪ್ಲೈ ಚೇನ್ ಪಾಲುದಾರರು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಗಳಲ್ಲಿ ತಮ್ಮ ವ್ಯವಹಾರ ಪ್ರಗತಿಯ ಅವಕಾಶಗಳನ್ನು ಹೊಂದುವ ನಿಟ್ಟಿನಲ್ಲಿ ಒಂದು ಉತ್ತಮ ವೇದಿಕೆಯನ್ನು ಈ ಶೃಂಗಸಭೆ ಒದಗಿಸಿತು.

1990 ರಿಂದ ವಾಲ್ ಮಾರ್ಟ್ ಭಾರತದಾದ್ಯಂತ ಆಳವಾದ ಪೂರೈಕೆ ಪಾಲುದಾರಿಕೆಗಳನ್ನು ಹೊಂದಿದ್ದು, ಇದರ ಮೂಲಕ ದೀರ್ಘಾವಧಿಯ ರಫ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಮತ್ತು ದೇಶವು ಪ್ರಮುಖ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಕೊಡುಗೆ ನೀಡುತ್ತದೆ.

ವಾಲ್‌ ಮಾರ್ಟ್‌ ವೃದ್ಧಿ ಮೂಲಕ 115000+ ಉದ್ಯಮಿಗಳ ಬೆಳವಣಿಗೆಯನ್ನು ಬೆಂಬಲಿಸಲು ಭಾರತದಿಂದ ಈಗಾಗಲೇ ಪಡೆಯಾಗಿರುವ 40 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಧರಿಸಿ, ಭಾರತದ ರಫ್ತು ಪರಿಸರ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಮತ್ತು ಇನ್ನೂ ಹೆಚ್ಚಿನ ವ್ಯವಹಾರಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಾಲ್ ಮಾರ್ಟ್ ನ ನಿರಂತರ ಬದ್ಧತೆಯನ್ನು ಈ ಶೃಂಗಸಭೆಯು ಪ್ರಮುಖವಾಗಿ ಚರ್ಚಿಸಿತು.

ಇದನ್ನೂ ಓದಿ: 2nd Ayurveda World Summit: ಡಿ.25ರಿಂದ 28ರವರೆಗೆ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

ಜಾಗತಿಕ ಪೂರೈಕೆ ಜಾಲಗಳಲ್ಲಿ ಭಾರತೀಯ ವ್ಯವಹಾರಗಳ ಹೆಚ್ಚುತ್ತಿರುವ ಪಾತ್ರ ಮತ್ತು ಸ್ಥಳೀಯ ಪಾಲುದಾರಿಕೆಗಳನ್ನು ಆಳಗೊಳಿಸುವ ಮತ್ತು ಸಾಮರ್ಥ್ಯ ನಿರ್ಮಾಣ ಪ್ರಯತ್ನಗಳ ಪ್ರಾಮುಖ್ಯತೆ ಯನ್ನು ವಾಲ್‌ ಮಾರ್ಟ್‌ ಮತ್ತು ಫ್ಲಿಪ್‌ ಕಾರ್ಟ್‌ ನಾಯಕರು ಬಲಪಡಿಸಿದರು. ಶೃಂಗಸಭೆಯು ಜೈಪುರ ಮತ್ತು ಕೊಯಮತ್ತೂರಿನಲ್ಲಿ ಪ್ರಾದೇಶಿಕ ಬೆಳವಣಿಗೆಯ ಶೃಂಗಸಭೆಗೆ ಪೂರಕವಾಗಿದೆ. ಇದನ್ನು ಭಾರತ ಸರ್ಕಾರದ ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಮತ್ತು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (FIEO) ಸಹಯೋಗದೊಂದಿಗೆ ನಡೆಸಲಾಗುತ್ತದೆ. ಇದು ಪ್ರಮುಖ MSME ಕ್ಲಸ್ಟರ್‌ ಗಳಲ್ಲಿ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಮುಂಬರುವ ವರ್ಷದಲ್ಲಿ ಇಂತಹ ಹೆಚ್ಚಿನ ಶೃಂಗಸಭೆಗಳನ್ನು ಆಯೋಜಿಸಲಾಗುತ್ತದೆ.

ಭಾರತದಲ್ಲಿ ಎಂಎಸ್‌ಎಂಇ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲು ಎಂಬ ರೀತಿಯಲ್ಲಿ ವಾಲ್‌ ಮಾರ್ಟ್‌ ವೃದ್ಧಿ ಪೂರೈಕೆದಾರರ ಅಭಿವೃದ್ಧಿ ಕಾರ್ಯಕ್ರಮವು 2019 ರಲ್ಲಿ ಆರಂಭವಾದಾಗಿನಿಂದ ದೇಶಾದ್ಯಂತ 115000 ಕ್ಕೂ ಎಂಎಸ್‌ಎಂಇಗಳಿಗೆ ತರಬೇತಿ ನೀಡಿದ್ದು, ಅವುಗಳನ್ನು ಡಿಜಿಟಲ್‌ ಸಾಮರ್ಥ್ಯಗಳು, ನಿರ್ಣಾಯಕ ವ್ಯವಹಾರ ಕೌಶಲ್ಯಗಳು ಮತ್ತು ಹೊಸ ಮಾರುಕಟ್ಟೆಗಳಿಗೆ ಪ್ರವೇಶ ದೊಂದಿಗೆ  ಸಜ್ಜುಗೊಳಿಸಿದೆ ಎಂದು ಇಂದು ಘೋಷಣೆ ಮಾಡಿದೆ. 2028 ರ ವೇಳೆಗೆ ಒಟ್ಟು 170000 ಎಂಎಸ್‌ಎಂಇಗಳನ್ನು ಬೆಂಬಲಿಸುವ ಯೋಜನೆಗಳೊಂದಿಗೆ, ಹೊಸ ಮಾರುಕಟಟೆಗಳಿಗೆ  ರಫ್ತು ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಎಂಎಸ್‌ಎಂಇಗಳ ಪೈಪ್‌ ಲೈನ್‌ ಅನ್ನು ಬಲಪಡಿಸುವುದನ್ನು ಈ ಕಾರ್ಯಕ್ರಮವು ಮುಂದುವರಿಸಿದೆ.

ಫ್ಲಿಪ್ ಕಾರ್ಟ್ ಗ್ರೂಪ್ ನ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ, ``ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ವಾಣಿಜ್ಯವು ಭಾರತದಾದ್ಯಂತ ಲಕ್ಷಾಂತರ ಸಣ್ಣ ವ್ಯವಹಾರಗಳು, ಉದ್ಯಮಿಗಳು, ಕುಶಲಕರ್ಮಿಗಳು ಸ್ಥಳೀಯ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳನ್ನು ಹೇಗೆ ಅನ್ಲಾಕ್ ಮಾಡಬಹುದು ಎಂಬುದನ್ನು ನಾವು ನೇರವಾಗಿ ನೋಡಿದ್ದೇವೆ. ಫ್ಲಿಪ್ ಕಾರ್ಟ್ ಸಮರ್ಥ್ ಮತ್ತು ವಾಲ್ ಮಾರ್ಟ್ ವೃದ್ಧಿಯಂತಹ ಉಪಕ್ರಮಗಳ ಮೂಲಕ ನಾವು ಸಾಮರ್ಥ್ಯಗಳನ್ನು ನಿರ್ಮಾಣ ಮಾಡಲು, ಮಾರುಕಟ್ಟೆ ಪ್ರವೇಶ ಮಟ್ಟವನ್ನು ಸುಧಾರಣೆ ಮಾಡು ವುದು ಮತ್ತು ವ್ಯವಹಾರಗಳು ದೇಶೀಯವಾಗಿ ಮತ್ತು ಜಾಗತಿಕವಾಗಿ ಬೆಳೆಯಲು ಮಾರ್ಗಗಳನ್ನು ರೂಪಿಸಲು ಸಹಾಯ ಮಾಡುತ್ತಿದ್ದೇವೆ. ಭಾರತಕ್ಕಾಗಿ ಸಮಗ್ರ ಮತ್ತು ಸಬಲೀಕರಣಗೊಳಿಸುವ ವಾಣಿಜ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವತ್ತ ನಮ್ಮ ಗಮನವನ್ನು ಮುಂದು ವರಿಸಿದ್ದೇವೆ’’ ಎಂದು ಹೇಳಿದರು.

ಶೃಂಗಸಭೆಯ ಪ್ರಮುಖ ಅಂಶವೆಂದರೆ ಮೀಸಲಾಗಿರುವ ಸಂಪನ್ಮೂಲ ಕೇಂದ್ರ ಪಾಲ್ಗೊಳ್ಳುವವರು ವಾಲ್ ಮಾರ್ಟ್ ಮಾರುಕಟ್ಟೆಗೆ ಹೇಗೆ ಪ್ರವೇಶಿಸಬೇಕು, ನಿಯಂತ್ರಿತ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುವ ಬಗೆ ಮತ್ತು ಗಡಿಯಾಚೆಗಿನ ಕಾರ್ಯಾಚರಣೆಗಳನ್ನು ಹೇಗೆ ಅಳೆಯಬೇಕು ಎಂಬುದು ಸೇರಿದಂತೆ ಇನ್ನೂ ಅನೇಕ ವಿಚಾರಗಳ ಬಗ್ಗೆ ಈ ಶೃಂಗಸಭೆಯಲ್ಲಿ ನೇರವಾಗಿ ಸೂಕ್ತ ಮಾರ್ಗದರ್ಶನವನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ನೋಂದಾಯಿತ 5,000 ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ದೇಶೀಯ ಮಾರಾಟಗಾರರು ಅಮೆರಿಕಾ ಮತ್ತು ಪ್ರಪಂಚದ ಇತರ ದೇಶಗಳ ಗ್ರಾಹಕರನ್ನು ತಲುಪಲು ವಾಲ್ ಮಾರ್ಟ್ ಮಾರ್ಕೆಟ್ ಪ್ಲೇಸ್ ಗೆ ಪ್ರವೇಶ ಪಡೆಯಲು ತಮ್ಮ ಉತ್ಸುಕತೆಯನ್ನು ತೋರಿಸಿದರು.

ವಾಲ್ ಮಾರ್ಟ್ ಮಾರ್ಕೆಟ್ ಪ್ಲೇಸ್ ನ ಹಿರಿಯ ಉಪಾಧ್ಯಕ್ಷ ಮನೀಶ್ ಜೊನೇಜಾ ಅವರು ಮಾತನಾಡಿ, ``ಭಾರತದ ಜಾಗತಿಕ ವಾಣಿಜ್ಯ ಮಹತ್ವಾಕಾಂಕ್ಷೆಗಳು ವೇಗಗೊಳ್ಳುತ್ತಿವೆ ಮತ್ತು ಭಾರತೀಯ ವ್ಯವಹಾರಗಳು ರಫ್ತಿಗೆ ಸಿದ್ಧವಾಗಲು ಮತ್ತು ಪ್ರಪಂಚದಾದ್ಯಂತ ಇರುವ ಗ್ರಾಹಕರನ್ನು ತಲುಪಲು ಸಹಾಯ ಮಾಡುವ ನಿಟ್ಟಿನಲ್ಲಿ ವಾಲ್ ಮಾರ್ಟ್ ಮಾರ್ಕೆಟ್ ಪ್ಲೇಸ್ ನಲ್ಲಿ DPIIT ಮತ್ತು FIEO ನಂತಹ ವ್ಯವಹಾರಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸಂತೋಷವಾಗುತ್ತದೆ’’ ಎಂದು ಹೇಳಿದರು.