ಮಧ್ಯಪ್ರಾಚ್ಯದಲ್ಲಿ ಯುದ್ಧ: ವಿಶ್ವಶಾಂತಿಗಾಗಿ ವಿಶ್ವ ನವಕರ ಮಹಾಮಂತ್ರ ದಿನ ಆಚರಣೆ
ಜಗತ್ತಿನಲ್ಲಿ ಯುದ್ಧ ಕೊನೆಗೊಂಡು ಶಾಂತಿ ನೆಲೆಸುವುದು ಮನುಕುಲಕ್ಕೆ ಅತ್ಯಂತ ಅಗತ್ಯವಾಗಿದೆ. ಜಗತ್ತಿನ ಒಳಿತಿಗೆ ಮಾಡುತ್ತಿರುವ ಈ ಸೇವೆ ಅತ್ಯಂತ ಶ್ಲಾಘನೀಯ. ಶಾಂತಿ, ಪ್ರೀತಿ, ಸಹೋದರತ್ವದಿಂದ ಬಾಳಬೇಕು. ಹಿಂಸೆಯಿಂದ ದೂರ ಇರಬೇಕು. ಹಿಂಸೆ ಹಾನಿಕಾರಕ. ಇಡೀ ವಿಶ್ವದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಚಿಂತನೆಯಿಂದ ದೇಶದಲ್ಲಿ ಗಮನಾರ್ಹ ಬದಲಾವಣೆ ತರಬಹುದು
-
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜೈನ ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆ (ಜಿತೋ)ಯಿಂದ ವಿಶ್ವಶಾಂತಿಗಾಗಿ ಭವ್ಯ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ವಿಶ್ವ ನವಕರ ಮಹಾಮಂತ್ರ ದಿನವನ್ನು ಅಚರಿಸಲಾಯಿತು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಪ್ರಖ್ಯಾತ ಧಾರ್ಮಿಕ ಜೈನ ಸಂತರ ಸಮ್ಮುಖದಲ್ಲಿ ವಿಶ್ವದಲ್ಲಿ ಯುದ್ಧ, ಸಂಘರ್ಷ ಕೊನೆಗೊಳ್ಳಲಿ ಎಂದು ಸಾಮೂಹಿಕ ವಾಗಿ ಮಂತ್ರ ಪಠಿಸಿದರು.
ಈ ವಿಶಿಷ್ಟ ಮತ್ತು ದೈವಿಕ ಕಾರ್ಯಕ್ರಮವು ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕೆ ಸಮರ್ಪಿತವಾಗಿದೆ. ಇದು ವಿಶ್ವ ನವಕರ ದಿನದ ಅತಿದೊಡ್ಡ ಆಚರಣೆಗಳಲ್ಲಿ ಒಂದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿದ ದಿನೇಶ್ ಗುಂಡೂರಾವ್(Dinesh Gundu Rao, Minister of Health and Family Welfare) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜಗತ್ತಿನಲ್ಲಿ ಯುದ್ಧ ಕೊನೆಗೊಂಡು ಶಾಂತಿ ನೆಲೆಸುವುದು ಮನುಕುಲಕ್ಕೆ ಅತ್ಯಂತ ಅಗತ್ಯವಾಗಿದೆ. ಜಗತ್ತಿನ ಒಳಿತಿಗೆ ಮಾಡುತ್ತಿರುವ ಈ ಸೇವೆ ಅತ್ಯಂತ ಶ್ಲಾಘನೀಯ. ಶಾಂತಿ, ಪ್ರೀತಿ, ಸಹೋದರತ್ವ ದಿಂದ ಬಾಳಬೇಕು. ಹಿಂಸೆಯಿಂದ ದೂರ ಇರಬೇಕು. ಹಿಂಸೆ ಹಾನಿಕಾರಕ. ಇಡೀ ವಿಶ್ವದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಚಿಂತನೆಯಿಂದ ದೇಶದಲ್ಲಿ ಗಮನಾರ್ಹ ಬದಲಾವಣೆ ತರಬಹುದು ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ(Union Home Minister Amit Shah) ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಭಾಗವಹಿಸಿ ಭಾಷಣ ಮಾಡಿದರು.
ಪವಿತ್ರ ನವಕರ ಮಹಾಮಂತ್ರವನ್ನು 108 ದೇಶಗಳಲ್ಲಿ ಮತ್ತು ಭಾರತದಾದ್ಯಂತ 5,000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಕಾಲದಲ್ಲಿ ಪಠಿಸಲಾಯಿತು. ಇದು ಪ್ರಪಂಚದಾದ್ಯಂತ ಶಾಂತಿ ಮತ್ತು ಸಕಾರಾ ತ್ಮಕತೆಯ ಪ್ರಬಲ ಅಲೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನ 56 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶಾಂತಿ ಮಂತ್ರ ಪಠಿಸಲಾಯಿತು. ಎಲ್ಲಾ ಕೇಂದ್ರಗಳಲ್ಲಿ ಸಹಸ್ರಾರು ಜನರ ಭಾಗ ವಹಿಸಿದ್ದರು.
ಆಚಾರ್ಯ ಚಂದ್ರೇಶ್ ಸೂರಿಶ್ವರ್ಜಿ ಮಾ.ಸಾ., ಲೋಕೇಶ್ ಮುನಿ ಜಿ ಮಾ.ಸಾ., ಮಲಯಪ್ರಭ ಸಾಗರ್ಜಿ ಮಾ.ಸಾ. ಅವರ ಸಮ್ಮುಖದಲ್ಲಿ ಭಕ್ತಿ, ಭಾವದಿಂದ ಕಾರ್ಯಕ್ರಮ ನೆರವೇರಿತು.
ಹೈಕೋರ್ಟ್ ನ್ಯಾಯಾಧೀಶರಾದ ಎಂ.ಐ. ಅರುಣ್. ಲೋಕಾಯುಕ್ತ ನ್ಯಾಯಾಧೀಶರಾದ ಸುಭಾ ವೀರ್. ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪದ್ಮಿನಿ ಪ್ರಸಾದ್. ಹಿರಿಯ ನ್ಯಾಯವಾದಿ ಪಿ.ಪಿ. ಹೆಗಡೆ, ಜಿತೋ ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷರಾದ ವಿಮಲ್ ಕಟಾರಿಯಾ, ಬೆಂಗ ಳೂರು ದಕ್ಷಿಣ ಅಧ್ಯಕ್ಷರಾದ ರಂಜಿತ್ ಸೋಲಂಕಿ, ಉತ್ತರ ಚಾಪ್ಟರ್ ಕಾರ್ಯದರ್ಶಿ ವಿಜಯ್ ಸಿಂಗ್‌ವಿ ಹಾಗೂ ದಕ್ಷಿಣ ಚಾಪ್ಟರ್ ಕಾರ್ಯದರ್ಶಿ ನಿತಿನ್ ಲೂಣಿಯಾ, ಮಹೇಂದ್ರ ರಾಂಕಾ ಮಹಾ ವೀರ ದಾಂತೇವಾಡಿಯಾ, ಪವೀಣ್ ಕುಮಾರ್ ಚೌಹಾನ್ ಮತ್ತು ಸುನಿಲ್ ಲೋಧಾ ಮತ್ತಿತರ ಪಾಲ್ಗೊಂಡರು.