ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: Gen-Zಗಳಿಗಾಗಿಯೇ ಬೆಂಗಳೂರಿನಲ್ಲಿ ತೆರೆಯಲಾಯ್ತು ಅಂಚೆ ಕಚೇರಿ; ಏನಿದು ಹೊಸ ಥೀಮ್‌?

Generation Z-themed post office: ಬೆಂಗಳೂರಿನಲ್ಲಿ ಕರ್ನಾಟಕದ ಮೊದಲ ಜನರೇಷನ್ ಝಡ್-ಥೀಮ್ ಅಂಚೆ ಕಚೇರಿಯನ್ನು ಇಂಡಿಯಾ ಪೋಸ್ಟ್ ಅನಾವರಣಗೊಳಿಸಿತು. ಇದು ಯುವ ಪೀಳಿಗೆಯನ್ನು ಆಕರ್ಷಿಸುವ ಮತ್ತು ಅಂಚೆ ಸೇವೆಗಳ ಹೊಸ ರೂಪವನ್ನು ಪರಿಚಯಿಸುವ ಪ್ರಯತ್ನವಾಗಿದೆ.

ಬೆಂಗಳೂರಿನ ಜನರೇಷನ್ ಝಡ್-ಥೀಮ್‍ನ ಅಂಚೆ ಕಚೇರಿಯಿದು

ಇದು ಬೆಂಗಳೂರಿನ ಜನರೇಷನ್ ಝಡ್-ಥೀಮ್‍ನ ಅಂಚೆ ಕಚೇರಿ -

Priyanka P
Priyanka P Dec 18, 2025 1:31 PM

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ (Bengaluru) ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕರ್ನಾಟಕದ ಮೊದಲ ಜನರೇಷನ್ ಝಡ್-ಥೀಮ್ ಅಂಚೆ ಕಚೇರಿಯನ್ನು (Generation Z-themed post office) ಇಂಡಿಯಾ ಪೋಸ್ಟ್ ಅನಾವರಣಗೊಳಿಸಿತು. ಇದು ಯುವ ಪೀಳಿಗೆಯನ್ನು ಸೆಳೆಯುವ ಮತ್ತು ಡಿಜಿಟಲ್ ಯುಗದಲ್ಲಿ ಅಂಚೆ ಕಚೇರಿಗಳ ಪಾತ್ರವನ್ನು ಮರುರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಜನರೇಷನ್ ಝಡ್ ಅಂಚೆ ಕಚೇರಿಯು ಯುವಜನರಿಗೆ ಅಂಚೆ ಸೇವೆಗಳನ್ನು ಪಡೆಯುವ ಜೊತೆಗೆ ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವ ಸಾಮಾಜಿಕ ಮತ್ತು ಕ್ರಿಯಾತ್ಮಕ ಸ್ಥಳವಾಗಿ ರೂಪುಗೊಂಡಿದೆ. ಈ ಉಪಕ್ರಮವು ಇಂಡಿಯಾ ಪೋಸ್ಟ್‌ನ ಸಾಂಪ್ರದಾಯಿಕ ಸೇವೆಗಳಿಂದ ಆಧುನಿಕ, ಡಿಜಿಟಲ್-ಚಾಲಿತ ವೇದಿಕೆಗಳಿಗೆ ವಿಶಾಲ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.

Basavaraj Bommai: ರಾಜ್ಯ ಸರ್ಕಾರ 3,000 ರೂ. ಕೊಟ್ಟು ಮೆಕ್ಕೆಜೋಳ ಖರೀದಿಸಲಿ: ಬಸವರಾಜ ಬೊಮ್ಮಾಯಿ

ಈ ಅಂಚೆ ಕಚೇರಿಯಲ್ಲಿ ಬಣ್ಣಬಣ್ಣದ ಒಳಾಂಗಣ ವಿನ್ಯಾಸ, ಸಂಪೂರ್ಣ ವೈ–ಫೈ ಸಂಪರ್ಕ, ಸೆಲ್ಫಿ ಪಾಯಿಂಟ್ ಹಾಗೂ ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ ಅಲಂಕಾರಗಳಿವೆ. ಇದರಿಂದ ಈ ಸ್ಥಳವು ಜನರೇಶನ್ ಝಡ್ ಪೀಳಿಗೆಯ ರುಚಿ ಹಾಗೂ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಅಂಚೆ ಕಚೇರಿಯ ಒಳಾಂಗಣವನ್ನು ಯೋಜನೆ ಮಾಡಿ ವಿನ್ಯಾಸಗೊಳಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಈ ಸೌಲಭ್ಯವು ಅವರ ಪೀಳಿಗೆಯ ಮನೋಭಾವ ಮತ್ತು ಜೀವನಶೈಲಿಗೆ ತಕ್ಕಂತೆ ರೂಪುಗೊಂಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕದ ಮುಖ್ಯ ಅಂಚೆ ಮಹಾನಿರ್ದೇಶಕರಾದ ಕೆ. ಪ್ರಕಾಶ್ ಅವರು, ಬದಲಾಗುತ್ತಿರುವ ವ್ಯವಹಾರ ಮಾದರಿಗಳು ಹಾಗೂ ಗ್ರಾಹಕರ ವರ್ತನೆಗೆ ಹೊಂದಿಕೊಳ್ಳುವಂತೆ ಅಂಚೆ ಇಲಾಖೆ ರಾಷ್ಟ್ರವ್ಯಾಪಿ ಪರಿವರ್ತನೆಗೆ ಒಳಗಾಗುತ್ತಿದೆ ಎಂದು ತಿಳಿಸಿದರು.

ನಾವು ಕೈಗೊಂಡಿರುವ ಪ್ರಯಾಣ ಯಾವ ಮಟ್ಟದಲ್ಲಿದೆ ಎಂಬುದನ್ನು ನೀವು ಊಹಿಸಬಹುದು. ಹೊಸ ವ್ಯವಹಾರಗಳು ಉದಯಿಸುತ್ತಿರುವುದು, ವ್ಯವಹಾರ ನಡೆಸುವ ವಿಧಾನದಲ್ಲಿ ಬದಲಾವಣೆ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಇತ್ಯಾದಿಗಳ ದೃಷ್ಟಿಯಿಂದ ದೇಶದಾದ್ಯಂತ ಭಾರಿ ಪರಿವರ್ತನೆ ನಡೆಯುತ್ತಿದೆ. ಆದ್ದರಿಂದ ಇಂಡಿಯಾ ಪೋಸ್ಟ್ ಕೂಡ ಬದಲಾಗಲೇಬೇಕು. ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಾಯಕತ್ವದಲ್ಲಿ ಈ ರೀತಿಯ ರೂಪಾಂತರಕ್ಕೆ ಚಾಲನೆ ನೀಡಲಾಗಿದೆ ಎಂದು ಪ್ರಕಾಶ್ ಹೇಳಿದರು

ಭಾರತೀಯ ಅಂಚೆ ಇಲಾಖೆಯು ಪತ್ರಗಳು ಮತ್ತು ಮನಿ ಆರ್ಡರ್‌ಗಳಂತಹ ಸಾಂಪ್ರದಾಯಿಕ ಸೇವೆಗಳಿಂದ ಡಿಜಿಟಲ್ ಬ್ಯಾಂಕಿಂಗ್, ಲಾಜಿಸ್ಟಿಕ್ಸ್ ಮತ್ತು ಇ-ಕಾಮರ್ಸ್‌ಗೆ ಪರಿವರ್ತನೆಗೊಂಡಿದೆ ಎಂದು ಅವರು ಹೇಳಿದರು. ನಾವು ಅಂಚೆ ಕಚೇರಿಗಳಿಂದ ಡಿಜಿಟಲ್ ವೇದಿಕೆಗಳತ್ತ, ಮನಿ ಆರ್ಡರ್ ವ್ಯವಸ್ಥೆಯಿಂದ ಡಿಜಿಟಲ್ ಬ್ಯಾಂಕಿಂಗ್ ಕಡೆಗೆ ಹಾಗೂ ಪತ್ರಗಳಿಂದ ಲಾಜಿಸ್ಟಿಕ್ಸ್ ಮತ್ತು ಇ–ಕಾಮರ್ಸ್ ಕಡೆಗೆ ಬದಲಾಗಿದೆ ಎಂದು ಅವರು ಹೇಳಿದರು.

ಜನರೇಷನ್ ಝಡ್ ಪೋಸ್ಟ್ ಆಫೀಸ್ ಪರಿಕಲ್ಪನೆಯ ಹಿಂದಿನ ಉದ್ದೇಶವನ್ನು ವಿವರಿಸಿದ ಪ್ರಕಾಶ್, ವಿದ್ಯಾರ್ಥಿಗಳೇ ಭವಿಷ್ಯದ ಆರ್ಥಿಕ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವ ಶಕ್ತಿಯೆಂದು ಹೇಳಿದರು. ಆದ್ದರಿಂದ ನಾವು ನಡೆಸುತ್ತಿರುವ ರೂಪಾಂತರವನ್ನು ಅವರ ಚಟುವಟಿಕೆಗಳೊಂದಿಗೆ ಹೊಂದಾಣಿಕೆಯಾಗುವಂತೆ ಪ್ರದರ್ಶಿಸಲು ಬಯಸಿದ್ದೇವೆ. ಅವರು ಕೈಗೊಳ್ಳುವ ಕಾರ್ಯಗಳಿಗೆ ಸಹಕಾರ ನೀಡುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿಯೇ ಈ ಜೆನ್‌ Z ಅಂಚೆ ಕಚೇರಿ ಪರಿಕಲ್ಪನೆಯನ್ನು ರೂಪಿಸಿದ್ದೇವೆ. ಇಲ್ಲಿ ಒಳಾಂಗಣ ವಿನ್ಯಾಸ ಸೇರಿದಂತೆ ಎಲ್ಲವನ್ನೂ ವಿದ್ಯಾರ್ಥಿಗಳೇ ತಮ್ಮ ಇಚ್ಛೆಯಂತೆ ವಿನ್ಯಾಸಗೊಳಿಸಿದ್ದಾರೆ. ಉದಾಹರಣೆಗೆ, ನೀವು ಈ ಸುಂದರವಾಗಿ ವಿನ್ಯಾಸಗೊಳಿಸಲಾದ ಒಳಾಂಗಣಗಳನ್ನು ನೋಡಬಹುದು. ನಂತರ ಪುಸ್ತಕದ ಕಪಾಟನ್ನು ಕಾಣಬಹುದು ಎಂದು ಅವರು ಹೇಳಿದರು.

ಈ ಸೌಲಭ್ಯವು ಓದುವ ಪ್ರದೇಶ, ಕೆಫೆ ಶೈಲಿಯ ಆಸನಗಳು ಮತ್ತು ಪ್ರಯೋಗಾಲಯ ಸೇರಿದಂತೆ ಹೆಚ್ಚುವರಿ ಸ್ಥಳಗಳೂ ಇದ್ದು, ದೈಹಿಕ ಚಟುವಟಿಕೆ ಸ್ಥಳಗಳನ್ನು ಒಳಗೊಂಡಿದೆ. ಇದು ಸಾಂಪ್ರದಾಯಿಕ ಅಂಚೆ ಕಚೇರಿಗಿಂತ ಹೆಚ್ಚಿನದಾಗಿದೆ.

ಇಲ್ಲಿ ಜಿಮ್ ಕೂಡ ಇದೆ. ಇತರ ಸೇವೆಗಳು, ದೈಹಿಕ ಚಟುವಟಿಕೆಗಳು, ಚಿಕಿತ್ಸೆಗಳು ಮತ್ತು ಇನ್ನೂ ಅನೇಕ ಸೌಲಭ್ಯಗಳಿವೆ. ಇದು ನೀವು ನೋಡಿರುವ ಹಳೆಯ ಮಾದರಿಯ ಅಂಚೆ ಕಚೇರಿ ಅಲ್ಲ. ಇದು ಒಂದು ರೀತಿಯ ಸಭೆಯ ಸ್ಥಳವಾಗಿದ್ದು, ಹೊಸ ಪೀಳಿಗೆಯನ್ನು ಅಂಚೆ ಸೇವೆಗಳಿಗೆ ಸಂಪರ್ಕಿಸುತ್ತದೆ ಎಂದು ಪ್ರಕಾಶ್ ಹೇಳಿದರು. ಜೊತೆಗೆ, ಈ ಉಪಕ್ರಮವನ್ನು ದೇಶದಾದ್ಯಂತ ವಿವಿಧ ಕ್ಯಾಂಪಸ್‌ಗಳಲ್ಲಿ ಜಾರಿಗೆ ತರುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದರು.