ಬೆಂಗಳೂರಿನಲ್ಲಿ ಶ್ರೀ ಅರವಿಂದ ವಾರ್ಷಿಕ ಇತಿಹಾಸ ಪ್ರಬಂಧ ಸ್ಪರ್ಧೆ 2024–25ರ ವಿಜೇತರಿಗೆ ಗೌರವ
ಯುವ ಜನರಲ್ಲಿ ಭಾರತೀಯ ಇತಿಹಾಸವನ್ನು ಜನಪ್ರಿಯಗೊಳಿಸುವ ಗುರಿಯನ್ನು ಹೊಂದಿರುವ ಇಂತಹ ಪ್ರಯತ್ನಗಳನ್ನು ಬೆಂಬಲಿಸುವುದು ಯಾವಾಗಲೂ ಗೌರವವಾಗಿದೆ. ಶ್ರೀ ಅರಬಿಂದೋ ಪ್ರಬಂಧ ಸ್ಪರ್ಧೆಗೆ ದೇಶದ ಮೂಲೆ ಮೂಲೆಗಳಿಂದ ಬರುತ್ತಿರುವ ಅಗಾಧ ಪ್ರತಿಕ್ರಿಯೆಯು, ನಮ್ಮ ನಾಗರಿ ಕತೆಯ ಬೇರುಗಳ ಬಗ್ಗೆ ಯುವ ಭಾರತೀಯರಲ್ಲಿ ಬೆಳೆಯುತ್ತಿರುವ ಕುತೂಹಲ ಮತ್ತು ಹೆಮ್ಮೆಯ ಪ್ರಬಲ ಪ್ರತಿ ಬಿಂಬವಾಗಿದೆ.


ಬೆಂಗಳೂರು: ಶ್ರೀ ಅರವಿಂದ ವಾರ್ಷಿಕ ಇತಿಹಾಸ ಪ್ರಬಂಧ ಸ್ಪರ್ಧೆ 2024–25 ನಡೆದ ಬಹುಮಾನ ವಿತರಣೆ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು. ಇತಿಹಾಸಕಾರ ಹಾಗೂ ಲೇಖಕರಾದ ಡಾ ವಿಕ್ರಮ್ ಸಂಪತ್ ಅವರ ಇಂಡಿಯನ್ ಹಿಸ್ಟಾರಿಕಲ್ ಅಂಡ್ ಕಲ್ಚರಲ್ ರಿಸರ್ಚ್ ಫೌಂಡೇಶನ್ (FIHCR) ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. FIHCRನ ಯುವ ವಿಭಾಗದ ಅಡಿಯಲ್ಲಿ ಆಯೋಜಿಸಲಾದ ಈ ಸ್ಪರ್ಧೆಗೆ ದೇಶದಾದ್ಯಂತದ 6 ರಿಂದ 9ನೇ ತರಗತಿಯವರೆಗಿನ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರ ಪ್ರಬಂಧಗಳು ಮರೆಯಾದ ನಾಯಕರು, ಪ್ರಸಿದ್ಧಿಯ ಹೊರಗಿನ ಸ್ಮಾರಕಗಳು ಮತ್ತು ಇತಿಹಾಸದ ಅಧ್ಯಯನಕ್ಕೆ ಹೊಸದಾದ ದೃಷ್ಟಿಕೋನಗಳನ್ನು ಹೊಂದಿದ್ದವು—ಇದು ಭಾರತೀಯ ಇತಿಹಾಸದ ಕುರಿತಾಗಿ ಯುವಕರಲ್ಲಿ ಉಂಟಾಗಿರುವ ಆಸಕ್ತಿಯ ಸ್ಪಷ್ಟ ಸೂಚನೆಯಾಗಿತ್ತು.
ಅಶ್ವಿನ್ ಸಾಂಗ್ಹಿ ಮತ್ತು ಅಮಿಷ್ ತ್ರಿಪಾಠಿ ಅವರ ನೇತೃತ್ವದ ಮಂಡಳಿ ಪ್ರಬಂಧಗಳನ್ನು ಪರಿಶೀಲಿಸಿ ಉತ್ತಮವಾದ ಸಂಶೋಧನೆ, ನವೀನತೆ ಮತ್ತು ಸ್ಪಷ್ಟ ಬರವಣಿಗೆ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಿತು.
ಇದನ್ನೂ ಓದಿ: Grater Bangalore: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್
ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವೀ ಸೂರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೌರವಾತಿಥಿಗಳಾಗಿ ಓಲಾ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮೀ ಅಗರ ವಾಲ್ ಮತ್ತು ಮುಖ್ಯಸ್ಥ ಶ್ರೀ ದೇವೇಶ್ ವರ್ಮಾ ಉಪಸ್ಥಿತರಿದ್ದರು. ಡಾ. ವಿಕ್ರಮ್ ಸಂಪತ್ ಅವರು ಸಮಾರಂಭವನ್ನು ನಿರ್ವಹಿಸಿದರು ಮತ್ತು ಇತಿಹಾಸದ ಚರ್ಚೆಯಲ್ಲಿ ಯುವಕರು ಭಾಗವಹಿಸು ವಂತೆ ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ" ವಿಕ್ರಮ್ ಸಂಪತ್ ಸರ್ ಮತ್ತು ಓಲಾ ಫೌಂಡೇಶನ್ ತಂಡದವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಮತ್ತು FIHCR ಮೂಲಕ ಅವರು ಮಾಡುತ್ತಿರುವ ಸ್ಮರಣೀಯ ಕಾರ್ಯಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಯುವ ಜನರಲ್ಲಿ ಭಾರತೀಯ ಇತಿಹಾಸವನ್ನು ಜನಪ್ರಿಯಗೊಳಿಸುವ ಗುರಿಯನ್ನು ಹೊಂದಿರುವ ಇಂತಹ ಪ್ರಯತ್ನಗಳನ್ನು ಬೆಂಬಲಿಸುವುದು ಯಾವಾಗಲೂ ಗೌರವವಾಗಿದೆ. ಶ್ರೀ ಅರಬಿಂದೋ ಪ್ರಬಂಧ ಸ್ಪರ್ಧೆಗೆ ದೇಶದ ಮೂಲೆ ಮೂಲೆಗಳಿಂದ ಬರುತ್ತಿರುವ ಅಗಾಧ ಪ್ರತಿಕ್ರಿಯೆಯು, ನಮ್ಮ ನಾಗರಿ ಕತೆಯ ಬೇರುಗಳ ಬಗ್ಗೆ ಯುವ ಭಾರತೀಯರಲ್ಲಿ ಬೆಳೆಯುತ್ತಿರುವ ಕುತೂಹಲ ಮತ್ತು ಹೆಮ್ಮೆಯ ಪ್ರಬಲ ಪ್ರತಿಬಿಂಬವಾಗಿದೆ.

ಅಲ್ಲೂರಿ ಸೀತಾರಾಮ ರಾಜು ಬಗ್ಗೆ ಉತ್ತರದ ವಿದ್ಯಾರ್ಥಿಯೊಬ್ಬ ಬರೆಯುವುದರಿಂದ ಹಿಡಿದು ಉತ್ತರದ ಸ್ಮಾರಕದ ಬಗ್ಗೆ ದಕ್ಷಿಣದ ವಿದ್ಯಾರ್ಥಿ ಬರೆಯುವವರೆಗೆ ವಿಷಯಗಳ ಆಯ್ಕೆಯಲ್ಲಿನ ವೈವಿಧ್ಯತೆಯು ಯುವ ಪೀಳಿಗೆಯಿಂದ ಭಾರತದ ಸಾಂಸ್ಕೃತಿಕ ಏಕತೆಯನ್ನು ಹೇಗೆ ಮರು ಶೋಧಿಸ ಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಶ್ರೀ ಅರಬಿಂದೋ ಅವರಂತಹ ಮಹಾನ್ ಮನಸ್ಸುಗಳ ಕೃತಿಗಳನ್ನು ಓದಲು ನಾನು ಪ್ರತಿಯೊಬ್ಬ ಯುವ ಭಾರತೀಯನನ್ನು ಒತ್ತಾಯಿಸು ತ್ತೇನೆ, ಏಕೆಂದರೆ ಅವರ ಮೂಲಕವೇ ನಾವು ಭಾರತೀಯರಾಗಿರುವುದು ಎಂದರೆ ಏನು ಎಂದು ನಿಜವಾಗಿಯೂ ಅರ್ಥಮಾಡಿಕೊಳ್ಳುತ್ತೇವೆ." ಎಂದರು.
ವಿಜೇತರು:
ನಾಲ್ಕು ತರಗತಿಗಳಲ್ಲಿ ಎಂಟು ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಪಡೆದರು. ಜೊತೆಗೆ, ಹನ್ನೆರಡು ವಿದ್ಯಾರ್ಥಿಗಳು ಸಂಶೋಧನೆ ಮತ್ತು ನವೀನತೆಗೆ ನೀಡಲಾದ ವಿಶೇಷ ಪ್ರಶಸ್ತಿಗಳನ್ನು ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನಗಳು, ಪ್ರಮಾಣಪತ್ರ ಗಳು ಹಾಗೂ ಟ್ರೋಫಿಗಳನ್ನು ಪ್ರದಾನಿಸಲಾಯಿತು.
ಸಂಕಲನ:
ಟಾಪ್ 100 ಪ್ರಬಂಧಗಳನ್ನು ಮುದ್ರಿತ ಹಾಗೂ ಡಿಜಿಟಲ್ ಆವೃತ್ತಿಗಳಲ್ಲಿ ಶೀಘ್ರದಲ್ಲೇ ಪ್ರಕಟಿಸ ಲಾಗುವುದು.