Grater Bangalore: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್
ಈ ಹಿಂದೆ ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೆ ಮರಳಿ ಕಳಿಸಿ, ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ರಾಜ್ಯ ಸರ್ಕಾರ ಸ್ಪಷ್ಟನೆಗಳೊಂದಿಗೆ ಮರಳಿ ಕಳಿಸಿತ್ತು. ನಿನ್ನೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಗೆಜೆಟ್ ಮೂಲಕ ಪ್ರಕಟಿಸಲಿದೆ.


ಬೆಂಗಳೂರು: ರಾಜ್ಯ ಸರ್ಕಾರದ (Karnataka State) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಎಂದು ಬಿಂಬಿತವಾಗಿದ್ದ ಗ್ರೇಟರ್ ಬೆಂಗಳೂರು (Grater Bangalore) ಆಡಳಿತ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thavar Chand Gehlot) ಅನುಮೋದನೆ ನೀಡಿದ್ದಾರೆ. ಈ ಹಿಂದೆ ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೆ ಮರಳಿ ಕಳಿಸಿ, ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ರಾಜ್ಯ ಸರ್ಕಾರ ಸ್ಪಷ್ಟನೆಗಳೊಂದಿಗೆ ಮರಳಿ ಕಳಿಸಿತ್ತು. ನಿನ್ನೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಗೆಜೆಟ್ ಮೂಲಕ ಪ್ರಕಟಿಸಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಏನಾಗಲಿದೆ?
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಲಿದೆ. ಈ ಜಿಬಿಎಗೆ ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆಯ ಅಧಿಕಾರ ಇರಲಿದೆ. ಸುಮಾರು 1400 ಚದರ ಕಿಲೋ ಮೀಟರ್ GBA ವ್ಯಾಪ್ತಿಗೆ ಬರಲಿದೆ. 1ರಿಂದ 10 ಕಾರ್ಪೊರೇಷನ್‌ಗಳು GBA ವ್ಯಾಪ್ತಿಗೆ ಬರಲಿವೆ. 1-10 ಕಾರ್ಪೊರೇಷನ್‌ಗಳು 950 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಲಿವೆ. ಸದ್ಯ ಇರುವ 708 ಚದರ ಕಿಲೋ ಮೀಟರ್ ಬಿಬಿಎಂಪಿ ರದ್ದಾಗಲಿದೆ. ಈ ಕರಡು ಮಸೂದೆ ಸುಮಾರು 400 ವಾರ್ಡ್‌ಗಳ ರಚನೆಗೆ ಪ್ರಸ್ತಾಪಿಸಿದೆ.
ಬಿಡಿಎ ಅಧಿಕಾರ ಹೋಗುತ್ತೆ
ಈ ಕರಡು ಮಸೂದೆಯಂತೆ ಬಿಡಿಎ ಅದರ ಯೋಜನೆ ರೂಪಿಸುವ ಅಧಿಕಾರ ಕಳೆದುಕೊಳ್ಳಲಿದೆ. ಆದರೆ ಬೃಹತ್ ಮೂಲಸೌಕರ್ಯ ಯೋಜನೆಗಳ ಕಾಮಗಾರಿಯನ್ನ ಕೈಗೊಳ್ಳಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. 5-10 ಕಾರ್ಪೋರೇಷನ್ ಇದ್ದು, ಒಂದೊಂದು ಕಾರ್ಪೋರೇಷನ್‌ಗೆ ಒಬ್ಬ ಆಯುಕ್ತ ಇರುತ್ತಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿವೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಸೇರಿದಂತೆ ಇನ್ನಷ್ಟು ಬಿಬಿಎಂಪಿ ಆಗಿ ವಿಂಗಡಣೆಯಾಗಲಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿ ಎಲ್ಲಿಯವರೆಗೆ?
ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಕನಕಪುರ, ಆನೇಕಲ್, ಬೆಂಗಳೂರು ಗ್ರಾಮಾಂತರ ಪ್ರದೇಶವು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಲಿದೆ.
ಇನ್ನಷ್ಟು ವಿಶೇಷತೆಗಳು
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಗಿಂತ ಕೆಳಗೆ ಇರದಂತಹ ಅಧಿಕಾರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ನೇಮಿಸಬೇಕು
ಮುಖ್ಯ ಆಯುಕ್ತರು ಸರ್ಕಾರದ ಇಚ್ಛೆಗೆ ಒಳಪಟ್ಟು ಮೂರು ವರ್ಷಗಳ ಅವಧಿಗೆ ಅಧಿಕಾರದಲ್ಲಿರುತ್ತಾರೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪರಿಣಾಮಕಾರಿ ಆಡಳಿತಕ್ಕೆ ಅಗತ್ಯವಿರುವಂತೆ ಸರ್ಕಾರವು ಅವರನ್ನು ವರ್ಗಾಯಿಸಬಹುದು.
ಮುಖ್ಯ ಆಯುಕ್ತರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ
ಈ ಕಾಯ್ದೆಯಿಂದ ಅಥವಾ ಅದರ ಅಡಿಯಲ್ಲಿ ಅಥವಾ ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿನಿಂದ ನಿರ್ದಿಷ್ಟವಾಗಿ ನೀಡಲಾದ ಅಥವಾ ವಿಧಿಸಲಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ.
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಒಪ್ಪಿಗೆ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ಇನ್ನೊಂದು ವರ್ಷ ನಡೆಯುವುದು ಅನುಮಾನವೇ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ಆಗಿಲ್ಲ. ಹೀಗಾಗಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳಿಂದ ಪಾಲಿಕೆ ಕಾರ್ಯ ನಿರ್ವಹಿಸುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ.
ಈ ಹಿಂದೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಪ್ರಯತ್ನಿಸಿದ್ದರು. ಆದರೆ ಕೇಂದ್ರ ಸರಕಾರ ಒಪ್ಪಿರಲಿಲ್ಲ. ಇದೀಗ ರಾಮನಗರವನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸುವ ಮೂಲಕ ಡಿಕೆಶಿ ಇನ್ನೊಂದು ದಾಳ ಉರುಳಿಸಿದ್ದಾರೆ. ಬಿಬಿಎಂಪಿ ವಿಭಜನೆ ಬಳಿಕ ರಾಮನಗರ, ಕನಕಪುರ ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಗೆ ಬರಲಿದೆ.
ಇದನ್ನೂ ಓದಿ: Accident Case: ಅಪಘಾತದಲ್ಲಿ ಬಾಲಕನ ಸಾವಿಗೆ ಕಾರಣನಾದ ಬಿಬಿಎಂಪಿ ಲಾರಿ ಚಾಲಕ ಆಸ್ಪತ್ರೆಯಲ್ಲಿ ಸಾವು