ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಲದ ಬಡ್ಡಿ ಪಾವತಿಸದ್ದಕ್ಕೆ ಯುವತಿಯನ್ನು ವಿವಸ್ತ್ರಗೊಳಿಸಿ ವಿಡಿಯೊ ರೆಕಾರ್ಡ್ ಮಾಡಿದ ಕಿಡಿಗೇಡಿಗಳು; ಬೆಂಗಳೂರಿನಲ್ಲೊಂದು ರಾಜ್ಯವೇ ತಲೆತಗ್ಗಿಸುವ ಘಟನೆ

Woman Assaulted: ಸಾಲದ ಬಡ್ಡಿ ಪಾವತಿಸದ ಕಾರಣ ಯುವತಿಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆ ಎರಡು ವರ್ಷಗಳ ಹಿಂದೆ ರೇಷ್ಮಾ ಅವರಿಂದ 1 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಕಳೆದ ಆರು ತಿಂಗಳಿನಿಂದ ಬಡ್ಡಿ ಪಾವತಿಸಿರಲಿಲ್ಲ ಎನ್ನಲಾಗಿದೆ.

ಸಾಲದ ಬಡ್ಡಿ ಪಾವತಿಸದ್ದಕ್ಕೆ ಯುವತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ

ಸಾಂದರ್ಭಿಕ ಚಿತ್ರ -

Priyanka P
Priyanka P Sep 5, 2026 2:30 PM

ಬೆಂಗಳೂರು, ಸೆ. 5: ಸಾಲದ ಬಡ್ಡಿ ಪಾವತಿಸದ ಕಾರಣ ಯುವತಿಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬೆಂಗಳೂರಿನಲ್ಲಿ (Bengaluru) ಬಂಧಿಸಲಾಗಿದೆ. ಆರೋಪಿಗಳು ಈ ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ (crime news). ಆರೋಪಿಗಳನ್ನು ನಜ್ರತ್, ರೇಷ್ಮಾ, ಸುಹೇಲ್ ಮತ್ತು ಸೈಫ್ ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ಎರಡು ವರ್ಷಗಳ ಹಿಂದೆ ರೇಷ್ಮಾ ಅವರಿಂದ 1 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಕಳೆದ ಆರು ತಿಂಗಳಿನಿಂದ ಬಡ್ಡಿ ಪಾವತಿಸಿರಲಿಲ್ಲ. ಸಂತ್ರಸ್ತೆ ರೇಷ್ಮಾ ಮೂಲಕ ಪರಿಚಿತಳಾದ ನಜ್ರತ್ ಅವರಿಂದ 50,000 ರೂಪಾಯಿ ಸಾಲ ಪಡೆದು ಪ್ರತಿ ವಾರ 5,000 ರೂಪಾಯಿ ಪಾವತಿಸುತ್ತಿದ್ದರು. ಆದರೆ, ಆರ್ಥಿಕ ತೊಂದರೆಯಿಂದಾಗಿ ಸುಮಾರು ನಾಲ್ಕು ವಾರಗಳವರೆಗೆ ಪಾವತಿ ಮಾಡಲು ಸಾಧ್ಯವಾಗಲಿಲ್ಲ.

ನಂತರ ಕಿರುಕುಳಕ್ಕೆ ಹೆದರಿ ರೇಷ್ಮಾ ಅವರ ಸಂಖ್ಯೆಯನ್ನು ಬ್ಲಾಕ್ ಮಾಡಿ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾಗಿ ಮಹಿಳೆ ಹೇಳಿದ್ದಾಳೆ. ಈ ಸಮಯದಲ್ಲಿ, ಯುವತಿಗೆ ಕರೆ ಮಾಡಿದ್ದ ನಜ್ರತ್ ಕೆಲಸ ಮತ್ತು ಹಣದ ಭರವಸೆ ನೀಡಿದ್ದಾರೆ. ಹೀಗಾಗಿ ನಜ್ರತ್ ಮನೆಗೆ ಹೋದಾಗ, ಸುಹೈಲ್ ಎಂಬಾತ ಸಂತ್ರಸ್ತೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಮೂವರು ಮಹಿಳೆಯರು ಸೇರಿ ನಾಲ್ವರು ಬಂಧನ

ತನ್ನನ್ನು ಬಲವಂತವಾಗಿ ಆಟೋರಿಕ್ಷಾಗೆ ಹತ್ತಿಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ರೇಷ್ಮಾ ಮತ್ತು ನಜ್ರತ್ ಆಕೆಯ ಪಕ್ಕದಲ್ಲಿ ಕುಳಿತಿದ್ದರು. ಸುಹೇಲ್ ಮತ್ತು ಇತರ ಇಬ್ಬರು ಅವರೊಂದಿಗೆ ಇದ್ದರು. ಅವರು ಯುವತಿಯನ್ನು ಬೆಂಗಳೂರಿನ ಹೊರವಲಯದಲ್ಲಿರುವ ಕುಂಬಳಗೋಡು ಬಳಿಯ ಮನೆಗೆ ಕರೆದೊಯ್ದು ಅಲ್ಲಿ ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಯುವತಿ ಮನೆಗೆ ಬಾರದೇ ಇದ್ದಿದ್ರಿಂದ ಆತಂಕಗೊಂಡ ಸಂತ್ರಸ್ತೆಯ ತಾಯಿ ನಾಪತ್ತೆ ದೂರು ದಾಖಲಿಸಿದ್ದರು. ಅದರ ನಂತರ ಪೊಲೀಸರು ಸಂತ್ರಸ್ತೆಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಯುವಕನ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಚಾಮರಾಜನಗರ: ಪ್ರೀತಿ ಹೆಸರಿನಲ್ಲಿ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ವರ್ಷಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಮೈಸೂರಿನಲ್ಲಿ ಬಿ.ಇ ವ್ಯಾಸಂಗ ಮಾಡುತ್ತಿದ್ದಳು.

ಕೆಲ ದಿನಗಳಿಂದ ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಯುವಕನ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನೆ ಬಳಿಕ ವರ್ಷಾಳ ತಾಯಿ ನಾಗರತ್ನಮ್ಮ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಕೇಸ್‌ ದಾಖಲಿಸಿಕೊಂಡಿರುವ ಯಳಂದೂರು ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.