ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Padayatra reached 4th day: ರಾಯಚೂರು ಗಡಿ ದಾಟಿ ಕೊಪ್ಪಳಕ್ಕೆ ಆಗಮಿಸಿದ ಬಿಜೆಪಿ ಪಾದಯಾತ್ರೆ: ಜನ ಸಾಗರದ ನಡುವೆ ಕಾಲ್ನಡಿಗೆ ಬಿರುಸು

ಶ್ರೀ ಕೃಷ್ಣಾಜನ್ಮಾಷ್ಟಮಿ ಅಂಗವಾಗಿ ಗೋ ಪೂಜೆ, ಶ್ರೀ ಕೃಷ್ಣನಿಗೆ ಮಹಾ ಮಂಗಳಾರತಿ ನೆರವೇರಿಸ ಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಂಗವಿಕಲರ, ವಯೋ ವೃದ್ಧರ ವೇತನವನ್ನು ಆರು ತಿಂಗಳಿನಿಂದ ಕೊಟ್ಟಿಲ್ಲ. ರಾಜ್ಯದ ಜನತೆ ಸರಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ. ಜನರ ಸಂಕಷ್ಟ ಪರಿಹಾರಕ್ಕಾಗಿ ಸರಕಾರದ ಮೇಲೆ ಒತ್ತಡ ಹಾಕುವುದಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ಸಾಗರದ ನಡುವೆ ಕಾಲ್ನಡಿಗೆ ಬಿರುಸು

-

Profile
Ashok Nayak Sep 5, 2026 8:24 AM

ಬಸವರಾಜ ನಾಗಡದಿನ್ನಿ ರಾಯಚೂರು

ರಾಯಚೂರು ಗಡಿ ದಾಟಿ ಕೊಪ್ಪಳಕ್ಕೆ ಆಗಮಿಸಿದ ಬಿಜೆಪಿ ಪಾದಯಾತ್ರೆ

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ನಾಲ್ಕನೇ ದಿನ ರಾಯಚೂರು ಗಡಿ ದಾಟಿ, ಕೊಪ್ಪಳ ಜಿಲ್ಲೆಗೆ ಎಂಟ್ರಿಯಾಗಿದೆ. ನಾಲ್ಕನೇ ದಿನದ ಪಾದಯಾತ್ರೆ ಸಿಂಧನೂರಿನ ಗಾಂಧಿ ವೃತ್ತದಿಂದ ಆರಂಭಗೊಂಡು, 22 ಕಿ.ಮೀ. ಕ್ರಮಿಸಿ ಕೊಪ್ಪಳ ಜಿಲ್ಲೆಯ ಕಾರಟಗಿಗೆ ತಲುಪಿತು. ಅಭೂತಪೂರ್ವ ಜನ ಬೆಂಬಲ ದೊಂದಿಗೆ ಯಶ್ವಸಿಯಾದ ರಾಯಚೂರು ಜಿಲ್ಲೆಯ ಪಾದಯಾತ್ರೆ ಶುಕ್ರವಾರ ಸುಮಾರು 22 ಕಿಮೀ ನಡೆಯಿತು.

ಶ್ರೀ ಕೃಷ್ಣಾಜನ್ಮಾಷ್ಟಮಿ ಅಂಗವಾಗಿ ಗೋ ಪೂಜೆ, ಶ್ರೀ ಕೃಷ್ಣನಿಗೆ ಮಹಾ ಮಂಗಳಾರತಿ ನೆರವೇರಿಸ ಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಂಗವಿಕಲರ, ವಯೋವೃದ್ಧರ ವೇತನವನ್ನು ಆರು ತಿಂಗಳಿನಿಂದ ಕೊಟ್ಟಿಲ್ಲ. ರಾಜ್ಯದ ಜನತೆ ಸರಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ. ಜನರ ಸಂಕಷ್ಟ ಪರಿಹಾರಕ್ಕಾಗಿ ಸರಕಾರದ ಮೇಲೆ ಒತ್ತಡ ಹಾಕುವುದಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆಯುದ್ದಕ್ಕೂ ಸರಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಧಿಕ್ಕಾರ, ಆಕ್ರೋಶದ ಘೋಷಣೆ ಮೊಳಗಿದವು. ಸರಕಾರ ರೈತ, ದಲಿತ, ಯುವಕರ ವಿರೋಧಿ ಎಂಬ ಆಕ್ರೋಶ ವ್ಯಕ್ತವಾಯಿತು. ಪಾದಯಾತ್ರೆಯ ಮಧ್ಯೆ ಅಕ್ಕ ಮಹಾದೇವಿ ಪ್ರತಿಮೆಗೆ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. ಭಾವಸಾರ ಕ್ಷತ್ರೀಯ ಸಮಾಜದಿಂದ ಶಿವಾಜಿ ಭಾವಚಿತ್ರ ನೀಡಿ ಹಾರ ಹಾಕಿ ವಿಜಯೇಂದ್ರರನ್ನು ಗೌರವಿಸಿದರು.

ಇದನ್ನೂ ಓದಿ: Padayatra completes 3rd Day: ನೇಗಿಲು ಹೊತ್ತ ರೈತ ನಾಯಕ, ಗದ್ದೆಯಲ್ಲಿ ನಾಟಿ ಮಾಡಿದ ಕಾಯಕ

ವಿಜಯೇಂದ್ರ ಅಭಿಮಾನಿ ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ನ ಹನುಮಂತರಾವ್ ಎಂಬ ರೈತ ಮೇಕ್ ಇಂಡಿಯಾದ ಭತ್ತ ಕಟಾವ್ ಯಂತ್ರ ಉತ್ಪಾದನೆ ಮಾಡುತ್ತಿದ್ದು, ಮೊದಲ ಯಂತ್ರದ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಿಸಿಲಿನ ತಾಪ ತಾಳಲಾರದೆ ಪಾದಯಾತ್ರೆ ನಡುವೆ ಹೊಸಳ್ಳಿ ಕ್ಯಾಂಪ್‌ನಲ್ಲಿ ಎಳನೀರು ಸೇವಿಸಿದ ವಿಜಯೇಂದ್ರ ಶ್ರೀಪುರಂ ಜಂಕ್ಷನ್ ಮತ್ತು ಗೊರೆಬಾಳ ಕ್ಯಾಂಪ್‌ಗೆ ಪಾದಯಾತ್ರೆ ಆಗಮಿ ಸುತ್ತಿದ್ದಂತೆ ಹೂಮಳೆ ಸುರಿಸಿ, ಪಟಾಕಿ ಹೊಡೆದು, ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ವಿಜಯೇಂದ್ರರನ್ನು ಸ್ವಾಗತಿಸಲಾಯಿತು.

ಹಂಚಿನಾಳ ಕ್ಯಾಂಪ್‌ನಲ್ಲಿ ಊಟದ ವಿರಾಮದ ನಂತರ ವಿಜಯೇಂದ್ರ ಅವರು ವರ್ತಕರೊಂದಿಗೆ ಸಂವಾದ ನಡೆಸಿದರು. ಸಿಂಧನೂರು ತಾಲೂಕಿನಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಯಾವುದೇ ಹೊಸ ವಾಣಿಜ್ಯ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿಲ್ಲ.

ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿಂದಾಗಿ ಈ ಭಾಗದ ರೈತರು ಮತ್ತು ಸಣ್ಣ ವರ್ತಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂಬಂಧ ಸಿಂಧನೂರಿನ ವರ್ತಕ ಬಂಧು ಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ತಕ್ಷಣವೇ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದರೂ, ಪ್ರಯೋಜನವಾಗಿಲ್ಲ. ದಯವಿಟ್ಟು ತಮ್ಮ ಸಮಸ್ಯೆ ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ವರ್ತಕರ ಸಂಘದಿಂದ ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಕಾರ್ಯಕರ್ತರ ಜಯಘೋಷ ಗಳಿಂದ ಕಳೆಗಟ್ಟಿದ ನಾಲ್ಕನೇ ದಿನದ ಪಾದಯಾತ್ರೆ ಯಶಸ್ವಿ ಯಾಗಿ ಸಾಗುತ್ತಿದ್ದು, ಪಾದಯಾತ್ರೆಯಲ್ಲಿ ಲೋಕಸಭಾ ಸದಸ್ಯ ಗೊವೀಂದ ಕಾರಜೋಳ ಮಾತನಾಡಿ, ನಾಗರಿಕರ ಸಮಸ್ಯೆ ಆಲಿಸದ, ಅಭಿವೃದ್ಧಿ ಮರೆತ ಅನಾಗರಿಕ ಸರಕಾರವಾಗಿದೆ. ಸರಕಾರದ ಖಜಾನೆ ರಾಜ್ಯ ಖಾಲಿಯಾಗಿದ್ದು, ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ.

ಸರಕಾರದ ದುರಾಡಳಿತದಿಂದ ರೋಸಿ ಹೋಗಿರುವ ರಾಜ್ಯದ ಜನತೆ ನಾಳೆಯೇ ಚುನಾವಣೆ ನಡೆದರೆ, ಎನ್ ಡಿಎ ಸರಕಾರ ಅಧಿಕಾರಕೆ ಬರುವುದು ನಿಶ್ಚಿತ. ಭೀಕರ ಬರಗಾಲದಿಂದ ರೈತರು ಬಿತ್ತನೆ ಮಾಡಿದ ಬೀಜ ಮತ್ತು ರಸಗೊಬ್ಬರಕ್ಕಾಗಿ ಮಾಡಿದ ಸಾಲ ಮರು ಪಾವತಿಸಲಾಗದಂತ ದಯನೀಯ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು. ಪಾದಯಾತ್ರೆಯಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕರಾದ ಡಾ.ಶಿವರಾಜ ಪಾಟೀಲ, ಸುನೀಲ್ ಕುಮಾರ್, ಹರೀಶ ಪೂಂಜ, ಬಿ ಪಿ ಹರೀಶ, ಮಾಜಿ ಸಚಿವ ರಾದ ಶ್ರೀರಾಮುಲು, ರಾಜೂಗೌಡ, ಮುಖಂಡರಾದ ಕೆ.ಕರಿಯಪ್ಪ, ಎಂ ದೊಡ್ಡ ಬಸವರಾಜ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕಮಲ ಯಾತ್ರೆ

ಬಿರು ಬಿಸಿಲನು ಲೆಕ್ಕಿಸದೆ 22 ಕಿ.ಮೀ ನಡೆದು ಕಾರಟಗಿ ತಲುಪಿದ ಪಾದಯಾತ್ರೆ

ಕೃಷ್ಣಾಷ್ಟಮಿ ನಿಮಿತ್ತ ಗೋ ಪೂಜೆ, ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿದ ವಿಜಯೇಂದ್ರ

ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಸದಸ್ಯರು ಪಾದಯಾತ್ರೆಯಲ್ಲಿ ಭಾಗಿ

ವಿಜಯೇಂದ್ರ ಅವರಿಗೆ ಹಾರ ಹಾಕಿ ಆಶೀರ್ವದಿಸಿದ 70ರ ವೃದ್ಧೆ

ಅಕ್ಕ ಮಹಾದೇವಿ, ಶಿವಾಜಿ, ಈಶ್ವರ ಲಿಂಗಕ್ಕೆ ಹಾರ ಹಾಕಿ ನಮಿಸಿದ ವಿಜಯೇಂದ್ರ

image

ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕಳೆದ ಆರು ತಿಂಗಳಿಂದ ವೃದ್ಯಾಪ್ಯ ವೇತನ ಅಂಗವಿಕಲರ ಮಾಶಾಸನ ಕೂಡ ಕೊಟ್ಟಿಲ್ಲ. ರಾಜ್ಯ ಸರಕಾರದ ವಿರುದ್ದ ರಾಜ್ಯದ ಜನತೆ ಬೇಸತ್ತಿದ್ದಾರೆ. ಗ್ಯಾರಂಟಿ ಭ್ರಮೆಯಲ್ಲಿ ತೇಲುತ್ತಿರುವ ರಾಜ್ಯ ಸರಕಾರದ ವಿರುದ್ಧ ಬಡವರು ಶಾಪ ಹಾಕುತ್ತಿದ್ದಾರೆ. ಹಿಡಿ ಶಾಪ ಹಾಕುತ್ತಿರುವುದೇ ಸತ್ಯ ಸಂಗತಿಯಾಗಿದೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ