Cannes Fashion 2026: ಕಾನ್ಸ್ನಲ್ಲಿ ಅನಾವರಣಗೊಂಡ ಪ್ರಿಯಾಂಕ ಉಪೇಂದ್ರ ಧರಿಸಿದ 3 ವಿನ್ಯಾಸದ ಗೌನ್ಗಳಿವು
ಕಾನ್ಸ್ನಲ್ಲಿ ತಮ್ಮ ಸಿನಿಮಾದ ಇವೆಂಟ್ನಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರ, ಮೂರು ಬಾರಿ ಮೂರು ವಿಭಿನ್ನ ಶೈಲಿಯ ಗೌನ್ಗಳಲ್ಲಿ ಕಾಣಿಸಿಕೊಂಡರು. ಅವರು ಧರಿಸಿದ್ಧ ಗೌನ್ಗಳ ವಿಶೇಷತೆಯೇನು? ಅವರ ಲುಕ್ ಹೇಗಿತ್ತು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಪ್ರಿಯಾಂಕಾ ಉಪೇಂದ್ರ, ನಟಿ -
ಕಾನ್ಸ್ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಧರಿಸಿದ್ಧ 3 ಶೈಲಿಯ ಗೌನ್ಗಳು, ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ಮೂರು ಶೈಲಿಯ ಗೌನ್ಗಳಲ್ಲಿ ಪ್ರಿಯಾಂಕಾ ಉಪೇಂದ್ರ
ಹೌದು, ಕಾನ್ಸ್ನಲ್ಲಿ ತಮ್ಮ ಸಿನಿಮಾ ಇವೆಂಟ್ನಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರರವರು ಭಿನ್ನ-ವಿಭಿನ್ನ ವಿನ್ಯಾಸದ 3 ಬಗೆಯ ವೆರೈಟಿ ಗೌನ್ಗಳಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡು, ಅಭಿಮಾನಿಗಳ ಗಮನ ಸೆಳೆದರು.
ಹ್ಯಾಂಡ್ ಕ್ರಾಫ್ಟೆಡ್ ಗೌನ್
ಮೊದಲನೇಯ ದಿನ ತಮ್ಮ ಸಿನಿಮಾದ ಪ್ರಿಮಿಯರ್ನಲ್ಲಿ ಪ್ರಿಯಾಂಕಾ ಉಪೇಂದ್ರ ಧರಿಸಿದ್ಧ, ಪರ್ಪಲ್ ಸ್ಟ್ರಾಪ್ ಗೌನ್, ಬೆಂಗಳೂರು ಡಿಸೈನರ್ಸ್ ಬ್ರಾಂಡ್ನದ್ದಾಗಿದ್ದು, ಕಂಪ್ಲೀಟ್ ಹ್ಯಾಂಡ್ ಕ್ರಾಫ್ಟ್ ಡಿಸೈನ್ನಿಂದ ಕೂಡಿತ್ತು. ಬೀಡ್ಸ್ ಹಾಗೂ ಸಿಕ್ವಿನ್ಸ್ ಮಿಕ್ಸ್ ಮ್ಯಾಚ್ ಮಾಡಿ ವಿನ್ಯಾಸಗೊಳಿಸಲಾಗಿತ್ತು.
ಸ್ಯಾಟಿನ್ ರೆಡ್ ಆಫ್ ಶೋಲ್ಡರ್ ಗೌನ್
ನಂತರ ಬೀಚ್ಸೈಡ್ನಲ್ಲಿ ನಡೆದ ಫ್ಯಾಷನ್ ಶೂಟ್ನಲ್ಲಿ, ಪ್ರಿಯಾಂಕಾ ಉಪೇಂದ್ರ, ಸ್ಯಾಟಿನ್ನ ರೆಡ್ ಆಫ್ ಶೋಲ್ಡರ್ ಗೌನ್ನಲ್ಲಿ ಕಾಣಿಸಿಕೊಂಡರು. ಇದು ಅವರ ಎರಡನೇ ಲುಕ್ ಆಗಿತ್ತು.
ಅತ್ಯಾಕರ್ಷಕ ಐವರಿ ಗೋಲ್ಡ್ ಗೌನ್
ಇನ್ನು, ಮೂರನೇ ಬಾರಿಯ ಲುಕ್ನಲ್ಲಿ, ಪ್ರಿಯಾಂಕಾ ಉಪೇಂದ್ರ ಅವರು ಐವರಿ –ಗೋಲ್ಡ್ನ ಫ್ಲೋರಲ್ ಗ್ರ್ಯಾಂಡ್ ಎಂಬ್ರಾಯ್ಡರಿ ವರ್ಕ್ ಇರುವಂತಹ, ರೆಕ್ಕೆಯಂತಹ ಸ್ಲೀವ್ ಹೊಂದಿರುವ ಗ್ರ್ಯಾಂಡ್ ಗೌನ್ನಲ್ಲಿ ಕಾಣಿಸಿಕೊಂಡರು.
ಅಭಿಮಾನಿಗಳನ್ನು ಸೆಳೆದ ಪ್ರಿಯಾಂಕಾ ಉಪೇಂದ್ರ ಗೌನ್ಸ್ ಫ್ಯಾಷನ್
ಒಟ್ಟಾರೆ, ನಟಿ ಪ್ರಿಯಾಂಕಾ ಉಪೇಂದ್ರ ಧರಿಸಿದ 3 ವಿಭಿನ್ನ ಬಗೆಯ ಗೌನ್ಗಳು ಅಭಿಮಾನಿಗಳಿಗೆ ಪ್ರಿಯವಾಗಿವೆ. ಹಾಗಾಗಿ ಪ್ರಿಯಾಂಕಾ ಅವರ ಮೊದಲ ಕಾನ್ಸ್ ಫ್ಯಾಷನ್ ಪಯಣ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.