ಯಮುನಾ ನದಿಯ ಮಾಲಿನ್ಯ ತಡೆಗಟ್ಟಲು ಜಿರಳೆ ವೇಷ ಧರಿಸಿ ಬಂದ ವ್ಯಕ್ತಿ; ವಿಡಿಯೊ ವೈರಲ್
man dresses as a cockroach: ವ್ಯಕ್ತಿಯೊಬ್ಬರು ಯಮುನೆಯ ಮಾಲಿನ್ಯದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿರಳೆ ವೇಷಭೂಷಣ ಧರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಈ ರೀತಿ ವಿಲಕ್ಷಣ ವೇಷ ತೊಟ್ಟು ಗಮನಸೆಳೆದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಯಮುನಾ ನದಿಯ ಮಾಲಿನ್ಯ ತಡೆಗಟ್ಟಲು ಜಿರಳೆ ವೇಷ ಧರಿಸಿ ಬಂದ ವ್ಯಕ್ತಿ -
ಲಖನೌ, ಮೇ 23: ದೇಶದಲ್ಲಿ ನದಿಗಳ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಮಥುರಾದಲ್ಲಿ ಯುಮುನಾ ನದಿಯು ದಿನೇ ದಿನೇ ಕಲುಷಿತಗೊಳ್ಳುತ್ತಿರುವುದು (Yamuna pollution) ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಭಾರಿ ಸಮಸ್ಯೆಗಳನ್ನು ಎದುರಿಸಬೇಕಾದಿತು. ಹೀಗಾಗಿ ವ್ಯಕ್ತಿಯೊಬ್ಬರು ಯಮುನೆಯ ಮಾಲಿನ್ಯದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿರಳೆ ವೇಷಭೂಷಣ (man dresses as a cockroach) ಧರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ದೀಪಕ್ ಶರ್ಮಾ ಎಂಬುವವರು ಈ ರೀತಿ ವಿಲಕ್ಷಣ ವೇಷ ತೊಟ್ಟು ಗಮನಸೆಳೆದಿದ್ದಾರೆ. ಸಮಸ್ಯೆಗಳನ್ನು ಈ ಕೂಡಲೇ ಪರಿಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಯಮುನೆಯ ಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಎಚ್ಚರಿಸಿದರು.
ಯಮುನಾ ನದಿಯ ಮಾಲಿನ್ಯ ಮತ್ತು ನಗರ ತುಂಬೆಲ್ಲಾ ಕೊಳಕು ಹರಡಿಕೊಂಡಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸುವಲ್ಲಿ ಅಸಮರ್ಥರಾಗಿದ್ದಾರೆ. ಹೀಗಾಗಿ ಅವರ ಕಣ್ಣು ತೆರೆಸುವ ಸಲುವಾಗಿ ಜಿರಳೆಯಂತೆ ವೇಷ ಧರಿಸಬೇಕಾಯಿತು ಎಂದು ಶರ್ಮಾ ಹೇಳಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಇಲ್ಲಿದೆ ವಿಡಿಯೊ:
मथुरा में ‘कॉकरोच PROTEST’!
— ऋषभ वीरेन्द्र दीक्षित (@RishabhDixit57) May 22, 2026
यमुना नदी में गिरते गंदे नालों के विरोध में एक युवक कॉकरोच की ड्रेस पहनकर सीधे नगर निगम कार्यालय पहुंच गया।
युवक का संदेश साफ था- “जब शहर गंदगी से भर जाएगा, तो कॉकरोच ही राज करेंगे!”#Mathura #YamunaPollution #CockroachMan #ViralVideo #MathuraNews pic.twitter.com/3QGaCP3A8Z
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪನೆಯಾದ ನಂತರ ನಡೆದ ಈ ಘಟನೆಯ ಬಗ್ಗೆ ಪುರಸಭೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಡಂಬನಾತ್ಮಕ ಸಾಮಾಜಿಕ ಮಾಧ್ಯಮ ಖಾತೆಯಾದ ಸಿಜೆಪಿ, ನೀಟ್-ಯುಜಿ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಭಿಯಾನವನ್ನು ಪ್ರಾರಂಭಿಸಿದೆ.
ಬಿಜೆಪಿಯನ್ನೇ ಹಿಂದಿಕ್ಕಿದ ‘ಕಾಕ್ರೋಚ್’ ಪಕ್ಷ! ಸ್ಥಾಪಕನ ಹೆತ್ತವರಿಗೆ ಈಗ ನಿದ್ದೆಯಿಲ್ಲದ ರಾತ್ರಿಗಳು!
ಅಂದಹಾಗೆ, ಮಥುರಾದ ನಾಗರಿಕ ಸಂಸ್ಥೆಯ ಕಚೇರಿಗೆ ಶರ್ಮಾ ಜಿರಳೆ ವೇಷ ಧರಿಸಿ ಆಗಮಿಸಿದರು. ಅವರನ್ನು ವೀಕ್ಷಿಸಲು ಜನಸಮೂಹ ಜಮಾಯಿಸಿತ್ತು. ನೆರೆದಿದ್ದ ಹಲವಾರು ಮಂದಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಣ ಮಾಡಿದರು.
ನಾವು ಬ್ರಜ್ ಪ್ರದೇಶದ ನಿವಾಸಿಗಳು ಯಮುನಾ ನದಿಯ ನೀರನ್ನು ಸೇವಿಸುವ ‘ಆಚಮನ’ ಆಚರಣೆಯನ್ನು ಪಾಲಿಸುತ್ತೇವೆ. ಆದರೆ ಕೆಲವು ವರ್ಷಗಳಿಂದ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ಭರವಸೆ ನೀಡಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮಥುರಾ ಆಗಲಿ ಅಥವಾ ವೃಂದಾವನವಾಗಲಿ, ಕಲುಷಿತ ನೀರು ಮತ್ತು ಅಶುದ್ಧ ಒಳಚರಂಡಿ ನೀರು ಬಹಿರಂಗವಾಗಿ ಯಮುನಾ ನದಿಗೆ ಹರಿಯುತ್ತಿದ್ದರೂ, ಅಧಿಕಾರಿಗಳು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅವರು ಆರೋಪಿಸಿದರು.
ಯಾವುದೇ ನದಿಗೆ ಕೊಳಚೆ ನೀರು ಮತ್ತು ಒಳಚರಂಡಿ ನೀರನ್ನು ನೇರವಾಗಿ ಬಿಡುವುದು ಕ್ರಿಮಿನಲ್ ಕೃತ್ಯ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿದೆ. ಆದರೂ ಕೂಡ ನಿಯಮ ಉಲ್ಲಂಘಿಸಲಾಗುತ್ತಿದೆ. ನಿಯಮಗಳನ್ನು ಎತ್ತಿಹಿಡಿಯುವ ಬದಲು, ಅಧಿಕಾರಿಗಳು ಸ್ವತಃ ಉಲ್ಲಂಘಿಸುತ್ತಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಾರ್ವಜನಿಕರು ಸಹಾಯ ಮಾಡಬೇಕು ಎಂದು ಶರ್ಮಾ ಒತ್ತಾಯಿಸಿದರು.
ಅಂದಹಾಗೆ ವಕೀಲರೊಬ್ಬರಿಗೆ ಹಿರಿಯ (ಸೀನಿಯರ್) ಸ್ಥಾನಮಾನ ನೀಡುವ ಕುರಿತಾದ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಜಿರಳೆಗಳು ಮತ್ತು ಪರಾವಲಂಬಿಗಳು ಎಂಬ ಪದಗಳನ್ನು ಬಳಸಿದ್ದಾರೆನ್ನಲಾಗಿದ್ದು, ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಕಾಕ್ರೋಚ್ ಜನತಾ ಪಕ್ಷ ಸಾಮಾಜಿಕ ಮಾಧ್ಯಮದಲ್ಲಿ ಮುನ್ನೆಲೆಗೆ ಬಂದಿತು.
ಕಾನೂನು ವೃತ್ತಿಗೆ ನಕಲಿ ಮತ್ತು ಬೋಗಸ್ ಪದವಿಗಳ ಮೂಲಕ ಪ್ರವೇಶಿಸುವ ವ್ಯಕ್ತಿಗಳನ್ನು ಉದ್ದೇಶಿಸಿ ತಾವು ಆ ಹೇಳಿಕೆಗಳನ್ನು ನೀಡಿದ್ದೆ, ಅದು ಬಿಟ್ಟು ಬೇರೆ ಯಾವುದೇ ಉದ್ದೇಶವಿರಲಿಲ್ಲ. ತಮ್ಮ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಸಿಜೆಐ ನಂತರ ಸ್ಪಷ್ಟನೆ ನೀಡಿದ್ದರು.