Wrestler Vinesh Phogat: ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿ ಪಟು ವಿನೇಶ್ʼಗೆ ದೆಹಲಿ ಹೈಕೋರ್ಟ್ ಗ್ರೀನ್ ಸಿಗ್ನಲ್
ವಿನೇಶ್ ಫೋಗಟ್ ಅವರ ಸಂಪೂರ್ಣ ಆಯ್ಕೆ ಟ್ರಯಲ್ ಪ್ರಕ್ರಿಯೆಯನ್ನು ವಿಡೀಯೊ ರೆಕಾರ್ಡ್ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಟ್ರಯಲ್ಸ್ ಸಮಯದಲ್ಲಿ ಪಾರದರ್ಶಕತೆ ಯನ್ನು ಕಾಯ್ದುಕೊಳ್ಳಲು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನಿಂದ ತಲಾ ಒಬ್ಬ ಸ್ವತಂತ್ರ ವೀಕ್ಷಕರ ಉಪಸ್ಥಿತಿ ಇರಬೇಕೆಂದು ಆದೇಶಿಸಿದೆ.
-
ದೆಹಲಿ: ಪ್ರಸಕ್ತ ವರ್ಷದ ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿ ಪಟು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಭಾರತೀಯ ಕುಸ್ತಿ ಒಕ್ಕೂಟದ ನಿರ್ಬಂಧಗಳ ವಿರುದ್ಧದ ಅವರ ಸವಾಲಿಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಶನಿವಾರ ಈ ನಿರ್ಧಾರ ಹೊರ ಬಿದ್ದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾ.ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು, ಮಾತೃತ್ವ ರಜೆಯ ನಂತರ ಹಿಂದಿರುಗುವ ಕ್ರೀಡಾಪಟುಗಳಿಗೆ ನ್ಯಾಯಯುತ ಅವಕಾಶಗಳನ್ನು ಒದಗಿಸುವಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಆಯ್ಕೆ ನೀತಿ ವಿಫಲವಾಗಿದೆ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Vinesh Phogat: ಏಷ್ಯನ್ ಕ್ರೀಡಾಕೂಟ; ವಿನೇಶ್‌ಗೆ ಅರ್ಹತೆ ನೀಡದ ಭಾರತೀಯ ಕುಸ್ತಿ ಒಕ್ಕೂಟ
ವಿನೇಶ್ ಫೋಗಟ್ ಅವರ ಸಂಪೂರ್ಣ ಆಯ್ಕೆ ಟ್ರಯಲ್ ಪ್ರಕ್ರಿಯೆಯನ್ನು ವಿಡೀಯೊ ರೆಕಾರ್ಡ್ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಟ್ರಯಲ್ಸ್ ಸಮಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನಿಂದ ತಲಾ ಒಬ್ಬ ಸ್ವತಂತ್ರ ವೀಕ್ಷಕರ ಉಪಸ್ಥಿತಿ ಇರಬೇಕೆಂದು ಆದೇಶಿಸಿದೆ.
ಕ್ರೀಡೆ ಮತ್ತು ನ್ಯಾಯದ ಹಿತದೃಷ್ಟಿಯಿಂದ ವಿನೇಶ್ ಫೋಗಟ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು. ಅವರಿಗೆ ನೀಡಲಾದ ಶೋ-ಕಾಸ್ ನೋಟಿಸ್‌ನಲ್ಲಿ ಎತ್ತಲಾದ ಪ್ರಶ್ನೆಗಳು "ಪೂರ್ವನಿರ್ಧರಿತ" ಮತ್ತು ಈಗಾಗಲೇ ಇತ್ಯರ್ಥಗೊಂಡಿರುವ ವಿಷಯಗಳನ್ನು ಮತ್ತೆ ತೆರೆಯುವಂತೆಯೇ ಕಾಣುತ್ತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಇದನ್ನೂ ಮುನ್ನ, ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲೇಖಿಸಿ, ಮುಂದಿನ ಜೂನ್ 26ರವರೆಗೆ ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿನೇಶ್ ಅನರ್ಹಳು ಎಂದು WFI ಘೋಷಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ, ವಿನೇಶ್ ಪರಿಹಾರ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು.