ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿ ಸರ್ಕಾರದ ಯಡವಟ್ಟಿನ ಕಾರಣಕ್ಕೆ ಆರ್ಥಿಕ ಇಲಾಖೆಯಿಂದ ಪತ್ರ: ಸಿಎಂ ಡಿ.ಕೆ. ಶಿವಕುಮಾರ್

CM DK Shivakumar: 30 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್‌, ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟ ಕೆಲಸಗಳು ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ನಾನು ಅದರ ಬಗ್ಗೆ ಆಲೋಚನೆ ಮಾಡುವೆ. ಗುತ್ತಿಗೆದಾರರು ಉಳಿಯಬೇಕು. ಹೀಗಾಗಿ ಸಧ್ಯದಲ್ಲೇ ಆಲೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯಿಂದ ಪತ್ರ: ಡಿಕೆಶಿ

ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Sep 30, 2026 7:34 PM

ಚಾಮರಾಜನಗರ, ಸೆ. 30: ಯಡಿಯೂರಪ್ಪ ಬಜೆಟ್ ಮೀರಿ ಯೋಜನೆಗಳ ಕಾಮಗಾರಿ ಪ್ರಾರಂಭಿಸಿದ್ದರು. ಬಿಜೆಪಿ ಸರ್ಕಾರಗಳ ಇಂತಹ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೆ ಪತ್ರ ಬರೆದಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ (CM DK Shivakumar) ತಿಳಿಸಿದರು. ಚಾಮರಾಜನಗರ ಜಿಲ್ಲೆಯ ಹನೂರಿನ ಕೆಎಚ್‌ಬಿ ಹೆಲಿಪ್ಯಾಡ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು.

30 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಕೇಳಿದಾಗ, ʼಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟ ಕೆಲಸಗಳು ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ನಾನು ಅದರ ಬಗ್ಗೆ ಆಲೋಚನೆ ಮಾಡುವೆ. ಗುತ್ತಿಗೆದಾರರು ಉಳಿಯಬೇಕು. ಹೀಗಾಗಿ ಸಧ್ಯದಲ್ಲೇ ಆಲೋಚನೆ ಮಾಡುತ್ತೇನೆʼ ಎಂದರು.

ಈಗಲೂ ಪರ್ಸೆಂಟೇಜ್ ಕಮಿಷನ್ ನೀಡಬೇಕು ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆರೋಪ ಮಾಡಿರುವ ಬಗ್ಗೆ ಕೇಳಿದಾಗ, ಅವರು ಅಫಿಡವಿಟ್ ಸಲ್ಲಿಸಲಿ. ಈ ಬಗ್ಗೆ ತನಿಖೆ ಮಾಡಿಸಲಾಗುವುದು ಎಂದು ಹೇಳಿದರು.

ಸಚಿವ ಸಂಪುಟ ಅನುಮತಿ ಪಡೆದು ಟೆಂಡರ್

490 ಕೋಟಿ ರೂಪಾಯಿ ಮೊತ್ತದ ನೀರಾವರಿ ಯೋಜನೆ ಶಂಕುಸ್ಥಾಪನೆ ಯಾವಾಗ ಎಂದು ಕೇಳಿದಾಗ, ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಅನೇಕ ಸಮಿತಿಗಳಿದ್ದು, ಅಲ್ಲೂ ಚರ್ಚೆಯಾಗಬೇಕು. ನಂತರ ಮಂಡಳಿಗಳಲ್ಲಿ ಅನುಮತಿ ಪಡೆದು, ಸಚಿವ ಸಂಪುಟ ಅನುಮತಿ ಪಡೆದು ಟೆಂಡರ್ ಕರೆಯಬೇಕು. ಆ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಆದ ಪ್ರಕ್ರಿಯೆಗಳಿವೆ ಎಂದು ವಿವರಿಸಿದರು.

ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ರದ್ದು ಮಾಡಬೇಕು ಎಂದು ಬಿ.ಆರ್. ಪಾಟೀಲ್, ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಈ ವಿಚಾರ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಮರುಪರಿಶೀಲನೆ ಅರ್ಜಿ ವಿತರಣೆ ಮಾಡಿಲ್ಲ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರುಪರಿಶೀಲನೆ ವೇಳೆ ಜಾತಿ ಪ್ರಮಾಣಪತ್ರ ಕೇಳುತ್ತಿರುವ ಬಗ್ಗೆ ಕೇಳಿದಾಗ, ʼಹೊರ ರಾಜ್ಯದವರು ಇಲ್ಲಿ ಯೋಜನೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಹೊಸ ಅರ್ಜಿ ಸಿದ್ಧಪಡಿಸಿದ್ದೇವೆ. ಯಾರು ನಮ್ಮ ಮತದಾರರು, ಅರ್ಹರಿದ್ದಾರೆ ಅವರನ್ನು ಪರಿಗಣಿಸಲಾಗುವುದು. ಇನ್ನು ನಾವು ಮರುಪರಿಶೀಲನೆ ಅರ್ಜಿ ವಿತರಣೆ ಮಾಡಿಲ್ಲʼ ಎಂದು ಹೇಳಿದರು.

ಚುನಾವಣಾ ಆಯೋಗ ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ

ಸಿಡಬ್ಲ್ಯುಸಿ ಸಭೆಯಲ್ಲಿ ಎಸ್ಐಆರ್ ರದ್ಧತಿಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದಾಗ, ನಮ್ಮ ವಿರೋಧ ಒಂದು ಕಡೆ ಇರಲಿ, ಮೋದಿ ಸರ್ಕಾರ ನಿಯೋಜಿಸಿದ್ದ ಇನ್ನಿಬ್ಬರು ಆಯುಕ್ತರು ಕೆಲವು ನಿರ್ಧಾರಗಳ ಬಗ್ಗೆ ಅಪಸ್ವರ ಎತ್ತಿದ್ದರಲ್ಲ. ಆಯೋಗ ಪ್ರಜಾಸತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ತಪ್ಪುಗಳು ಆಗಿವೆ ಎಂಬುದು ಗೊತ್ತಾಗಿದೆ. ಜನರ ಭಾವನೆ, ಬಡವರು, ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವ ಕೆಲಸವಾಗುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.

ಚಾಮರಾಜನಗರ ನನಗೆ ಪ್ರಿಯಾವಾದ ಸ್ಥಳ

ಚಾಮರಾಜನಗರ ನನ್ನ ಪ್ರಿಯಾವಾದ ಸ್ಥಳ. ನನ್ನ ಕ್ಷೇತ್ರ ಇದರ ಜತೆ ಗಡಿ ಹಂಚಿಕೊಂಡಿದೆ. ಇದು ಹಸಿರಿನ ತಪ್ಪಲು, ಇಲ್ಲಿನ ಜನ ಶ್ರಮಜೀವಿಗಳು. ಕೃಷಿಯೇ ಅವರ ಬದುಕು. ಎಲ್ಲಾ ವರ್ಗದ ಜನರಿಗೆ ಆಶ್ರಯ ನೀಡಿರುವ ಪುಣ್ಯಭೂಮಿ. ಮಲೆ ಮಾದೇಶ್ವರನ ಇತಿಹಾಸದ ಭೂಮಿ. ನನ್ನ ಕ್ಷೇತ್ರದ ಮೂಲಕ ಸಾವಿರಾರು ಜನ ಪಾದಯಾತ್ರೆ ಮೂಲಕ ಕಾವೇರಿ ನದಿ ದಾಟಿ ಭಕ್ತಿಯಿಂದ ಈ ಧಾರ್ಮಿಕ ಕೇಂದ್ರಕ್ಕೆ ಬರುತ್ತಾರೆʼ ಎಂದರು.

ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಸಿದ್ದಾಪ್ಪಾಜಿ ದೇವಾಲಯಗಳಿವೆ. ನಾನು ಸಿದ್ದಪ್ಪಾಜಿ ದೇವಾಲಯಕ್ಕೆ ನಡೆದುಕೊಂಡು ಬಂದಿರುವೆ. ಪ್ರತಿ ವರ್ಷ ಸಂಕ್ರಾಂತಿ ಬಳಿಕ ಸಿದ್ದಪ್ಪಾಜಿಗೆ ಪೂಜೆ ಮಾಡುವುದು ನಮ್ಮ ಕುಟುಂಬದ ಪದ್ಧತಿ ಇದೆ. ಅಲ್ಲಿ ನಮ್ಮ ಆಸ್ತಿ ಇದ್ದು, ಅಲ್ಲಿ ಸಮುದಾಯ ಭವನ ಮಾಡುವ ಆಲೋಚನೆ ಇದೆ. ಇದು ಹಿಂದುಳಿದ ವರ್ಗದ ಪ್ರದೇಶ ಎಂಬ ಭಾವನೆ ಇದೆ. ಹೀಗಾಗಿ ಸಿದ್ದರಾಮಯ್ಯ ಅವರ ನಮ್ಮ ಸರ್ಕಾರ ಮಲೆ ಮಾದೇಶ್ವರನ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮಾಡಿ ಅನೇಕ ಘೋಷಣೆ ಮಾಡಲಾಗಿತ್ತು. ನೀರಾವರಿ ಅಭಿವೃದ್ಧಿಗೂ ಈ ವರ್ಷ ಎಲ್ಲಾ ಕ್ಷೇತ್ರಗಳಲ್ಲೂ ಕಾಮಗಾರಿ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕೆಲಸ ಆರಂಭಿಸಲು ಬಂದಿದ್ದೇನೆʼ ಎಂದು ಹೇಳಿದರು.

ನನ್ನ ಆಸ್ತಿ ಬಗ್ಗೆ ಕೇಳಲು ಕುಮಾರಸ್ವಾಮಿ ಐಟಿ ಅಧಿಕಾರಿಯೇ?: ಗೊಡ್ಡು ಬೆದರಿಕೆಗೆಲ್ಲಾ ಹೆದರಲ್ಲ ಎಂದ ಸಿಎಂ ಡಿಕೆಶಿ

ಶಿಕಾರಿಪುರದಿಂದ ಕಾಂಗ್ರೆಸ್ ಪಕ್ಷದ ಯಾತ್ರೆ ಬಗ್ಗೆ ಕೇಳಿದಾಗ, ಹರಿಪ್ರಸಾದ್ ಪಕ್ಷದ ಸಂಘಟನೆಗೆ ಈ ಯಾತ್ರೆ ಮಾಡುತ್ತಿದ್ದಾರೆ. ಭಾರತ ಜೋಡೋ ಅದು ರಾಹುಲ್ ಗಾಂಧಿ ಅವರದ್ದು. ಅದರ ನೆನಪಿನಲ್ಲಿ ನಮ್ಮ ಅಧ್ಯಕ್ಷರು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.