ಡಾ.ರಾಜ್ಕುಮಾರ್ ಸಂಬಂಧಿ ಮನೆಯಲ್ಲಿ ನಿಗೂಢ ಸ್ಫೋಟ; ಐವರು ಯುವಕರು ವಶಕ್ಕೆ
ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಘಟನೆ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ರಾತ್ರಿ 10.30ರ ವೇಳೆಯಲ್ಲಿ ಭಾರೀ ಶಬ್ಧ ಕೇಳಿಬಂತು. ಒಳಗಿನಿಂದ ಬಂದು ನೋಡುವಷ್ಟರಲ್ಲಿ ಮನೆ ತುಂಬಾ ಹೊಗೆ ತುಂಬಿಕೊಂಡಿತ್ತು. ಮನೆಯ ಕಿಟಿಕಿಗಾಜುಗಳೆಲ್ಲಾ ಪುಡಿಪುಡಿಯಾಗಿದ್ದವು. ಈ ಹಿನ್ನೆಲೆ ಪೊಲೀಸರಿಗೆ ದೂರು ನೀಡಲಾಗಿತ್ತು.
-
ಚಾಮರಾಜನಗರ: ವರನಟ ಡಾ.ರಾಜ್ಕುಮಾರ್ (Dr. Rajkumar) ಅವರ ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನು ತಾಳವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳಮ್ಮ ಎಂಬವರ ಮನೆ ಮುಂದೆ ಸ್ಫೋಟ ಸಂಭವಿಸಿದೆ. ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಘಟನೆ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ರಾತ್ರಿ 10.30ರ ವೇಳೆಯಲ್ಲಿ ಭಾರೀ ಶಬ್ಧ ಕೇಳಿಬಂತು. ಒಳಗಿನಿಂದ ಬಂದು ನೋಡುವಷ್ಟರಲ್ಲಿ ಮನೆ ತುಂಬಾ ಹೊಗೆ ತುಂಬಿಕೊಂಡಿತ್ತು. ಮನೆಯ ಕಿಟಿಕಿಗಾಜುಗಳೆಲ್ಲಾ ಪುಡಿಪುಡಿಯಾಗಿದ್ದವು. ಮನೆಯಿಂದ ಹೊರ ಬಂದು ನೋಡಿದಾಗ ಐವರು ಯುವಕರು ನಿಂತಿದ್ದರು. ಅವರ ವಿರುದ್ಧ ಪೊಲೀಸರಿಗೆ ತಿಳಿಸಿದ್ದೇವೆ. ಯುವಕರನ್ನು ತಾಳವಾಡಿ ಪೊಲೀಸರು (Talavady Police) ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವರು ಪಲ್ಸರ್ ಬೈಕ್ನಲ್ಲಿ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಪ್ರಾಣಕ್ಕೆ ಹಾನಿ ಮಾಡುವ ಉದ್ದೇಶದಿಂದಲೇ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊರಗೆ ನಿಂತಿದ್ದ ಯುವಕರ ವಿಡಿಯೋ ಮಾಡಿರುವ ಮನೆಯವರು, ತಾಳವಾಡಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರನ್ನಾಧರಿಸಿ ಐವರು ಯುವಕರನ್ನು ವಶಕ್ಕೆ ಪಡೆದು ತಾಳವಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.