ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harassment Case: ಮಹಿಳಾ ಪಿಎಸ್ಐಯಿಂದ ಕಿರುಕುಳ; ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನ

ಮಹಿಳಾ ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಮದ್ಯದಲ್ಲಿ ಡೊಮ್ಯಾಕ್ಸ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಯುವಕನಿಗೆ ಕೊಳ್ಳೇಗಾಲ ಠಾಣೆಯ ಪಿಎಸ್ಐ ಸುಮಾರು ಒಂದು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಮಹಿಳಾ ಪಿಎಸ್ಐಯಿಂದ ಯುವಕನಿಗೆ ಬೆದರಿಕೆ

Vishakha Bhat Vishakha Bhat Apr 29, 2025 9:51 AM

ಚಾಮರಾಜನಗರ: ಮಹಿಳಾ ಪಿಎಸ್ಐ ಕಿರುಕುಳಕ್ಕೆ (Harassment Case) ಬೇಸತ್ತು ಯುವಕನೊಬ್ಬ ಮದ್ಯದಲ್ಲಿ ಡೊಮ್ಯಾಕ್ಸ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಯುವಕನಿಗೆ ಕೊಳ್ಳೇಗಾಲ ಠಾಣೆಯ ಪಿಎಸ್ಐ ಸುಮಾರು ಒಂದು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ದೇ ಪದೇ ಠಾಣೆಗೆ ಕರೆಸುವುದು ಪಿಎಸ್ಐ ವರ್ಷ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಿವಾಸಿ ದುಷ್ಯಂತ ಎನ್ನುವ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಿನ್ನೆಯೂ ಕೂಡ ದುಷ್ಯಂತ ಮನೆಗೆ ಹೋಗಿ ಪಿಎಸ್ಐ ವರ್ಷ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂತ್ರಸ್ತನ ಮನೆ ಬಳಿ ತೆರಳಿದ್ದ ಪಿಎಸ್‌ಐ ವರ್ಷ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಣ ನೀಡದಿದ್ದರೆ ರೌಡಿ ಓಪನ್ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. , ಈ ಹಿಂದೆ ಯುವಕರ ಜೊತೆಗೆ ದೃಶ್ಯಂತ ಗಲಾಟೆ ಮಾಡಿಕೊಂಡಿದ್ದ. ಇದನ್ನೇ ಅಸ್ತ್ರ ಮಾಡಿಕೊಂಡು ದುಷ್ಯಂತಗೆ ನಿರಂತರವಾಗಿ ಪಿಎಸ್ಐ ವರ್ಷ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಮದ್ಯದ ಜೊತೆಗೆ ಡೊಮ್ಯಾಕ್ಸ್ ಕುಡಿದು ದುಷ್ಯಂತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ದುಷ್ಯಂತನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದುಷ್ಯಂತ ಆತ್ಮಹತ್ಯೆಗೆ ಯತ್ನ ಹಿನ್ನೆಲೆಯಲ್ಲಿ ಪಿಎಸ್ಐ ವರ್ಷ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಏಪ್ರಿಲ್ 8 ರಂದು ಕುಡಿದ ಮತ್ತಿನಲ್ಲಿ ದುಷ್ಯಂತ ಬಾರ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದ. ಬಿಲ್ ವಿಚಾರಕ್ಕೆ ಕ್ಯಾಶಿಯರ್ ಮತ್ತು ದುಶ್ಯಂತ ನಡುವೆ ಗಲಾಟೆ ಆಗಿತ್ತು. ರಾಜಿ ಸಂಧಾನ ಕೂಡ ಆಗಿ ಯಾವುದೇ ದೂರು ದಾಖಲು ಆಗಿರಲಿಲ್ಲ. ಈಗ ಈ ವಿಡಿಯೋವನ್ನು ಪಿಎಸ್ಐ ವರ್ಷ ಹರಿಬಿಟ್ಟಿರುವ ಆರೋಪ ಕೇಳಿ ಬಂದಿದೆ. ಸದ್ಯ ಮಹಿಳಾ ಅಧಿಕಾರಿ ಕುರಿತು ಹಿರಿಯ ಅಧಿಕಾರಿಗಳಗೆ ದೂರು ಸಲ್ಲಿಸಲಾಗಿದ್ದು, ದೃಶ್ಯಂತ ಕುಟುಂಬಸ್ಥರು ತಮಗೆ ನ್ಯಾಯ ಕೊಡಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: IAF officer Attacked: ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್‌; ಅಧಿಕಾರಿಯಿಂದಲೂ ನಡೆದಿತ್ತು ಹಲ್ಲೆ! ಇಲ್ಲಿದೆ ವಿಡಿಯೋ

ಪ್ರತ್ಯೇಕ ಘಟನೆಯಲ್ಲಿ ಕೊಲೆ ಪ್ರಕರಣದ ಶಂಕಿತ ಆರೋಪಿಯನ್ನು ಕೊಡಗಿನಲ್ಲಿ ಗೋಣಿಕೊಪ್ಪದಿಂದ ಮಡಿಕೇರಿ ಕರೆದುಕೊಂಡು ಬರುತ್ತಿದ್ದ ಸಂದರ್ಭ ಮೂರ್ನಡುವಿನಲ್ಲಿ ಹಸೈನಾರ್ ಎಂಬುವವರ ಮಗ ಲತೀಫ್ ಎಂಬಾತ ಪೊಲೀಸ್ ವಾಹನಕ್ಕೆ ಸಂಚರಿಸಲು ಅನುವು ಮಾಡಿಕೊಡದೆ ವಾಗ್ವಾವಾದಕ್ಕಿಳಿದು ಮಹಿಳಾ ಪಿ.ಎಸ್.ಐ. ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಸದ್ಯ ಹಲ್ಲೆ ನಡೆಸಿದ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕರು ಪೊಲೀಸರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.