Deepavali: ಮನೆ-ಮನಸ್ಸಲ್ಲೂ ಬೆಳಕು ಹರಡುವ ಸಂಭ್ರಮ-ಸಡಗರದ ದೀಪಾವಳಿ
ಭಾರತದ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳು ಎಷ್ಟು ಶ್ರೇಷ್ಠವಾಗಿವೆ ಎಂಬುದಕ್ಕೆ ದೀಪಾ ವಳಿಯೇ ಸಾಕ್ಷಿ. ಇಂದು ವಿಶ್ವವೇ ಭಾರತದ ಕಡೆ ನೋಡುತ್ತಿದೆ, ಭಾರತದ ದೀಪಾವಳಿಯನ್ನು ಅನುಕರಿಸುತ್ತಿದೆ. ಏಕೆಂದರೆ ಜಗತ್ತಿಗೆ ಬೇಕಾಗಿರುವುದು ಬರೀ ಬೆಳಕಲ್ಲ, ಮನಸ್ಸಿನ ಬೆಳಕು. ಅದನ್ನು ಕೊಡುವುದು ಭಾರತ ಮಾತ್ರ. ದೀಪಾವಳಿ ಎಂದರೆ ಮನೆಯ, ಮನಸ್ಸಿನ ಬೆಳಕು.
-
ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ
ಸಾವಿರಾರು ವರ್ಷಗಳಿಂದ ಮಣ್ಣಿನ ಹಣತೆ ಬಳಸಿ ಸುಸ್ಥಿರ ಜೀವನ ನಡೆಸಿದ್ದಾರೆ. ಪ್ಲಾಸ್ಟಿಕ್ ದೀಪವಲ್ಲ, ಮಣ್ಣಿನ ಹಣತೆಯೇ ನಮ್ಮ ಸಂಸ್ಕೃತಿ. ಸಿಹಿ ಹಂಚಿಕೆ-ಹಂಚಿಕೊಳ್ಳುವ ಸಂಸ್ಕೃತಿ. ಭಾರತದ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳು ಎಷ್ಟು ಶ್ರೇಷ್ಠವಾಗಿವೆ ಎಂಬುದಕ್ಕೆ ದೀಪಾವಳಿಯೇ ಸಾಕ್ಷಿ.
ದೀಪಾವಳಿ ಎಂದರೆ ಕೇವಲ ಹಣತೆ ಹಚ್ಚುವುದಲ್ಲ, ಅದು ಮನೆಯನ್ನು ಬೆಳಗಿಸುವ ಹಬ್ಬ, ಮನಸ್ಸನ್ನು ಬೆಳಗಿಸುವ ಹಬ್ಬ, ಇಡೀ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಹಬ್ಬ. ದೀಪಾವಳಿ ಬಂದರೆ ಸಾಕು, ಬಡವರ ಗುಡಿಸಲಿನಿಂದ ಹಿಡಿದು ಶ್ರೀಮಂತರ ಬಂಗಲೆಯವರೆಗೆ, ಕಾಶ್ಮೀರದ ಹಳ್ಳಿಯಿಂದ ಕನ್ಯಾಕುಮಾರಿಯ ನಗರದವರೆಗೆ, -ಎಲ್ಲೆಡೆ ಒಂದೇ ಬೆಳಕು, ಒಂದೇ ಸಂಭ್ರಮ, ಏಕೆಂದರೆ ದೀಪಾವಳಿ ಕೇವಲ ಒಂದು ಹಬ್ಬವಲ್ಲ, ಅದು ಭಾರತದ ಆತ್ಮ.
ಭಾರತದ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳು ಎಷ್ಟು ಶ್ರೇಷ್ಠವಾಗಿವೆ ಎಂಬುದಕ್ಕೆ ದೀಪಾ ವಳಿಯೇ ಸಾಕ್ಷಿ. ಇಂದು ವಿಶ್ವವೇ ಭಾರತದ ಕಡೆ ನೋಡುತ್ತಿದೆ, ಭಾರತದ ದೀಪಾವಳಿಯನ್ನು ಅನುಕರಿಸುತ್ತಿದೆ. ಏಕೆಂದರೆ ಜಗತ್ತಿಗೆ ಬೇಕಾಗಿರುವುದು ಬರೀ ಬೆಳಕಲ್ಲ, ಮನಸ್ಸಿನ ಬೆಳಕು. ಅದನ್ನು ಕೊಡುವುದು ಭಾರತ ಮಾತ್ರ. ದೀಪಾವಳಿ ಎಂದರೆ ಮನೆಯ, ಮನಸ್ಸಿನ ಬೆಳಕು.
ದೀಪಾವಳಿಗೆ ಒಂದು ತಿಂಗಳ ಮೊದಲೇ ಮನೆಯಲ್ಲಿ ತಯಾರಿ ಆರಂಭವಾಗುತ್ತದೆ. ಇದು ಕೇವಲ ಹಬ್ಬದ ತಯಾರಿಯಲ್ಲ, ಇದು ಒಂದು ಸಂಸ್ಕೃತಿ. ಮನೆ ಸ್ವಚ್ಛತೆ-ಭಾರತೀಯ ವಿಜ್ಞಾನ. ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛ ಮಾಡುತ್ತೇವೆ. ಜಾಲರಿ ತೆಗೆಯುತ್ತೇವೆ, ಬಣ್ಣ ಹಚ್ಚುತ್ತೇವೆ, ಹಳೆಯ ವಸ್ತುಗಳನ್ನು ತೆಗೆದು ಹಾಕುತ್ತೇವೆ. ಇಂದು ಸ್ವಚ್ಛ ಭಾರತ ಅಭಿಯಾನ ಎಂದು ಹೇಳುತ್ತೇವೆ, ಆದರೆ ನಮ್ಮ ಅಜ್ಜಿಯಂದಿರು ಸಾವಿರಾರು ವರ್ಷಗಳಿಂದ ದೀಪಾವಳಿಗಾಗಿ ಮನೆ ಸ್ವಚ್ಛ ಮಾಡುತ್ತಿದ್ದರು.
ಇದನ್ನೂ ಓದಿ: Deepavali Edition released: ವಿಶ್ವವಾಣಿ ದೀಪಾವಳಿ ವಿಶೇಷಾಂಕ ವೀಕ್ಷಿಸಿ ಸಚಿವ ಲಮಾಣಿ ಹರ್ಷ
ಮನೆ ಸ್ವಚ್ಛವಾಗಿದ್ದರೆ ಮನಸ್ಸು ಸ್ವಚ್ಛವಾಗುತ್ತದೆ, ರೋಗಗಳು ಬರುವುದಿಲ್ಲ, ಲಕ್ಷ್ಮೀ ಬರುತ್ತಾಳೆ ಎಂದು ಅವರು ನಂಬಿದ್ದರು. ಇದು ಕೇವಲ ನಂಬಿಕೆಯಲ್ಲ, ವಿeನ. ಸ್ವಚ್ಛ ಮನೆಯಲ್ಲಿ ಸೊಳ್ಳೆ, ಇಲಿ, ರೋಗಾಣುಗಳು ಇರುವುದಿಲ್ಲ. ರಂಗೋಲಿ-ಮಣ್ಣಿನ ಕಲೆ. ಬೆಳಿಗ್ಗೆ ಎದ್ದು ಮನೆಯ ಬಾಗಿಲ ಮುಂದೆ ರಂಗೋಲಿ ಹಾಕುವುದು ಭಾರತದ ಹೆಣ್ಣು ಮಕ್ಕಳ ಕಲೆ. ಅಕ್ಕಿ ಹಿಟ್ಟು, ಕುಂಕುಮ, ಅರಿಶಿನದಿಂದ ಹಾಕುವ ರಂಗೋಲಿ ಕೇವಲ ಅಲಂಕಾರವಲ್ಲ. ಅಕ್ಕಿ ಹಿಟ್ಟಿನ ರಂಗೋಲಿಯನ್ನು ಇರುವೆ, ಪಕ್ಷಿಗಳು ತಿಂದು ಬದುಕುತ್ತವೆ. ಅಂದರೆ ರಂಗೋಲಿಯಲ್ಲೂ ಜೀವದಯೆ ಇದೆ, ಪರಿಸರ ಪ್ರೇಮ ಇದೆ.
ಜಗತ್ತಿನ ಯಾವ ದೇಶದಲ್ಲಿ ಇಂತಹ ಕಲೆ ಇದೆ. ತೋರಣ ಪ್ರಕೃತಿಯ ಸ್ವಾಗತ. ಮಾವಿನ ಎಲೆ, ಹೂವಿನ ತೋರಣ ಕಟ್ಟುವುದು ಎಂದರೆ ಪ್ರಕೃತಿಯನ್ನು ಮನೆಗೆ ಆಹ್ವಾನಿಸುವುದು. ಮಾವಿನ ಎಲೆಯಿಂದ ಗಾಳಿ ಶುದ್ಧವಾಗುತ್ತದೆ, ಹೂವಿನಿಂದ ಮನಸ್ಸು ಸಂತೋಷವಾಗುತ್ತದೆ. ಮಣ್ಣಿನ ಹಣತೆ-ಕುಂಬಾರನ ಬದುಕು. ದೀಪಾವಳಿಯ ಹಣತೆ ಮಣ್ಣಿನದು. ಅದನ್ನು ಮಾಡಿದ ಕುಂಬಾರನಿಗೆ ಬದುಕು. ಒಂದು ಹಣತೆ ಕೊಂಡರೆ ಒಬ್ಬ ಕುಂಬಾರನ ಮನೆ ಬೆಳಗುತ್ತದೆ.
ಸಾವಿರಾರು ವರ್ಷಗಳಿಂದ ಮಣ್ಣಿನ ಹಣತೆ ಬಳಸಿ ಸುಸ್ಥಿರ ಜೀವನ ನಡೆಸಿದ್ದಾರೆ. ಪ್ಲಾಸ್ಟಿಕ್ ದೀಪ ವಲ್ಲ, ಮಣ್ಣಿನ ಹಣತೆಯೇ ನಮ್ಮ ಸಂಸ್ಕೃತಿ. ಸಿಹಿ ಹಂಚಿಕೆ -ಹಂಚಿಕೊಳ್ಳುವ ಸಂಸ್ಕೃತಿ. ದೀಪಾವಳಿ ಯಲ್ಲಿ ಮನೆಯಲ್ಲಿ ಮಾಡಿದ ಹೋಳಿಗೆ, ಕರಿಗಡುಬು, ಚಕ್ಕುಲಿ, ಜಿಲೇಬಿಯನ್ನು ನೆರೆಮನೆಗೆ ಕೊಡುತ್ತೇವೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ, ಜೈನ-ಎಲ್ಲರೂ ಒಬ್ಬರಿಗೊಬ್ಬರು ಸಿಹಿ ಕೊಡುತ್ತಾರೆ. ಇದು ಭಾರತದ ವಸುಧೈವ ಕುಟುಂಬಕಂ ಇಡೀ ಜಗತ್ತೇ ಒಂದು ಕುಟುಂಬ ಎಂಬ ತತ್ವ.
ಜಗತ್ತಿನ ಯಾವ ದೇಶದಲ್ಲಿ ಹಬ್ಬಕ್ಕೆ ನೆರೆಮನೆಗೆ ಸಿಹಿ ಕೊಡುವ ಪದ್ಧತಿ ಇದೆ? ದೀಪಾವಳಿ ಎಂದರೆ ಮನಸ್ಸಿನ ಬೆಳಕು. ಮನೆಯನ್ನು ಬೆಳಗಿಸುವುದು ಸುಲಭ, ಮನಸ್ಸನ್ನು ಬೆಳಗಿಸುವುದು ಕಷ್ಟ. ದೀಪಾವಳಿ ಅದನ್ನೇ ಕಲಿಸುತ್ತದೆ. ಹೊರಗಿನ ದೀಪ ಮಾತ್ರವಲ್ಲ, ಒಳಗಿನ ದೀಪ ನಾವು ಮನೆಯಲ್ಲಿ 100 ದೀಪ ಹಚ್ಚಬಹುದು, ಆದರೆ ಮನಸ್ಸಿನಲ್ಲಿ ದ್ವೇಷದ ಕತ್ತಲು ಇದ್ದರೆ ಆ ದೀಪಕ್ಕೆ ಬೆಲೆಯಿಲ್ಲ.
ದೀಪಾವಳಿ ಹೇಳುತ್ತದೆ-ನಿನ್ನ ಮನಸ್ಸಿನ ಅಹಂಕಾರ, ದ್ವೇಷ, ಅಸೂಯೆ, ಕೋಪ ಎಂಬ ಕತ್ತಲನ್ನು ತೆಗೆದು, ಪ್ರೀತಿ, ಕರುಣೆ, ಕ್ಷಮೆ, ಸತ್ಯ ಎಂಬ ಬೆಳಕನ್ನು ಹಚ್ಚು. ಕ್ಷಮೆ ಕೇಳುವ ಸಂಸ್ಕೃತಿ. ದೀಪಾವಳಿ ಯಲ್ಲಿ ಜೈನರು ಮಿಚ್ಛಾಮಿ ದುಕ್ಕಡಂ ಎಂದು ಹೇಳಿ ಎಲ್ಲರಲ್ಲೂ ಕ್ಷಮೆ ಕೇಳುತ್ತಾರೆ. ಹಿಂದುಗಳು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಜಗಳವಾಡಿದ ಅಣ್ಣ-ತಂಗಿ, ಗಂಡ-ಹೆಂಡತಿ ಈ ದಿನ ಒಂದಾಗುತ್ತಾರೆ. ಜಗತ್ತಿನಲ್ಲಿ ಕ್ಷಮೆಗಿಂತ ದೊಡ್ಡ ಬೆಳಕು ಇನ್ನೊಂದಿಲ್ಲ. ಭಾರತ ಇದನ್ನು ಹಬ್ಬದ ಮೂಲಕ ಕಲಿಸುತ್ತದೆ. ಒಂದು ಸಣ್ಣ ಕಥೆ. ಒಬ್ಬ ಮುದುಕನ ಮನೆಯಲ್ಲಿ ದೀಪಾವಳಿಗೆ ದೀಪ ಹಚ್ಚಲು ಎಣ್ಣೆ ಇರಲಿಲ್ಲ.
ನೆರೆಮನೆಯ ಹುಡುಗ ತನ್ನ ಹಣತೆಯಿಂದ ಎಣ್ಣೆ ತಂದು ಕೊಟ್ಟನು. ಮುದುಕ ಕೇಳಿದ ನಿನ್ನ ದೀಪಕ್ಕೆ ಎಣ್ಣೆ ಕಡಿಮೆಯಾಗುವುದಿಲ್ಲವೇ ಹುಡುಗ ಹೇಳಿದ - ಒಂದು ದೀಪದಿಂದ ಸಾವಿರ ದೀಪ ಗಳನ್ನು ಹಚ್ಚಬಹುದು, ಆದರೂ ಆ ದೀಪದ ಬೆಳಕು ಕಡಿಮೆಯಾಗುವುದಿಲ್ಲ. ಹಾಗೆಯೇ ಸಂತೋಷ ವನ್ನು ಹಂಚಿಕೊಂಡರೆ ಕಡಿಮೆಯಾಗುವುದಿಲ್ಲ, ಇದೇ ದೀಪಾವಳಿಯ ತತ್ವ.
ಅರ್ಥಪೂರ್ಣ ಹಬ್ಬದ ಆಚರಣೆ ಮುಖ್ಯ
ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡು ಮದ್ದಿನ ಆರ್ಭಟಕ್ಕೆ ಸೀಮಿತ ವಾಗಬಾರದು. ದೀಪಾವಳಿ ಆಚರಣೆ ಎನ್ನುವುದು ಶ್ರೀಮಂತಿಕೆ ಮತ್ತು ದೊಡ್ಡತನದ ಪ್ರದರ್ಶನಕ್ಕೆ ವೇದಿಕೆ ಯಾಗಬಾರದು. ಶರತ್ ಋತುವಿನ ಮಧ್ಯಭಾಗದಲ್ಲಿ ಬರುವ ದೀಪಾವಳಿ ಸಡಗರ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿರುತ್ತದೆ.
ಮಳೆ ಮುಗಿದು ಮೋಡ ಚದುರಿ ತಿಳಿಯಾಗಿ, ಮುಗಿಲಾಗಿ ಮಾರ್ಪಾಡಾಗಿ ನೆಲ ಹಸಿಯಾಗಿ, ಭೂತಾಯಿ ಹಸಿರಿನಿಂದ ಕಂಗೊಳಿಸಿ ರುತ್ತಾಳೆ-ಇದು ಸಮೃದ್ಧಿಯ ಸಂದೇಶ ಮತ್ತು ಸಂಕೇತ. ಈ ಶುಭಗಳಿಗೆಯಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಊರ ಕೇರಿನ ಜನರೆಲ್ಲಾ ಒಂದಾಗಿ ಜಾತಿ ಮತ ಧರ್ಮದ ಬೇಧವಿಲ್ಲದೇ ವಿಶ್ವ ಭಾತೃತ್ವವನ್ನು ಸಾರುವ ಮಾನವೀಯತೆಯ ಪ್ರತೀಕವಾಗಬೇಕೇ ಹೊರತು, ಒಣ ಪ್ರತಿಷ್ಠೆ ಮತ್ತು ಆಡಂಬರದ ಧ್ಯೋತಕವಾಗಬಾರದು. ಹಾಗಾದಲ್ಲಿ ಮಾತ್ರ ದೀಪಾವಳಿಯ ಆಚರಣೆಗೆ ಹೆಚ್ಚು ಮೌಲ್ಯ ಬಂದೀತು ಮತ್ತು ಹಬ್ಬದ ಆಚರಣೆ ಅರ್ಥಪೂರ್ಣ ವಾಗಬಹುದು.