Congress District President K.N. Keshava Reddy: ಮತಗಳ್ಳತನ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ
ಭಾರತ ವಿಶ್ವದಲ್ಲಿಯೇ ಅತ್ಯಂತ ಸಮರ್ಥ ಹಾಗೂ ಗಟ್ಟಿತಳಹದಿಯ ಮೇಲೆ ನಿಂತಿರುವ ಯಶಸ್ವೀ ಪ್ರಜಾ ಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಜನರ ಮತದಾನದ ಹಕ್ಕಿನಿಂದ ಆರಿಸಿ ಬರುತ್ತಾರೆ. ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನಡೆಸುತ್ತಾ ಬಂದಿದೆ. ಇದೊಂದು ಸ್ವತಂತ್ರ ಆಯೋಗ ವಾಗಿದ್ದರೂ ಕೇಂದ್ರಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮತಗಳ್ಳತನ ತಡೆಯುವಲ್ಲಿ ವಿಫಲ ವಾಗುತ್ತಿರುವುದು ಆತಂಕದ ಸಂಗತಿಯಾಗಿದೆ

ಚಿಕ್ಕಬಳ್ಳಾಪುರದಲ್ಲಿ ನಡೆದ ವೋಟ್‌ಚೋರಿ ಬೆಂಬಲಿಸಿ ನಡೆದ ಸಹಿಸಂಗ್ರಹ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಚಾಲನೆ ನೀಡಿ ಮಾತನಾಡಿದರು. -

ಚಿಕ್ಕಬಳ್ಳಾಪುರ : ಬಿಜೆಪಿ ಮತ್ತು ಅದರ ಸಂಬಂಧಿತ ಪಕ್ಷಗಳು ಮತಗಳ್ಳತನದ ಮೂಲಕ ಅಧಿಕಾರದ ಗದ್ದುಗೆಗೇರುವ ಅಡ್ಡದಾರಿ ಹಿಡಿದಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ( Congress District President K.N. Kesava Reddy) ತಿಳಿಸಿದರು.
ನಗರದ ಗಾಂಧಿಭವನದ ಎದುರು ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್,ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ವೋಟ್ ಚೋರಿ ವಿರುದ್ಧದ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ವಿಶ್ವದಲ್ಲಿಯೇ ಅತ್ಯಂತ ಸಮರ್ಥ ಹಾಗೂ ಗಟ್ಟಿತಳಹದಿಯ ಮೇಲೆ ನಿಂತಿರುವ ಯಶಸ್ವೀ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಜನರ ಮತದಾನದ ಹಕ್ಕಿನಿಂದ ಆರಿಸಿ ಬರುತ್ತಾರೆ.ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನಡೆಸುತ್ತಾ ಬಂದಿದೆ. ಇದೊಂದು ಸ್ವತಂತ್ರ ಆಯೋಗವಾಗಿದ್ದರೂ ಕೇಂದ್ರಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮತಗಳ್ಳತನ ತಡೆಯು ವಲ್ಲಿ ವಿಫಲವಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು.
ಚುನಾವಣೆಯಲ್ಲಿ ಮತಗಳ್ಳತನದ ಕಾರಣವಾಗಿ ಜನವಿರೋಧಿ ಅಭ್ಯರ್ಥಿಗಳು ಆಯ್ಕೆಯಗುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳು ಮಾಡಲು ಕೇಂದ್ರದ ಬಿಜೆಪಿ ಆಡಳಿತ ಅವಕಾಶ ಮಾಡಿಕೊಡಲು ಮುಂದಾಗಿದೆ ಎಂದು ದೂರಿದರು.
ಕರ್ನಾಟಕದ ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಸೇರಿದಂತೆ ರಾಜ್ಯದ ನಾನಾಕಡೆ ಅಪಾರ ಪ್ರಮಾಣದಲ್ಲಿ ಅರ್ಹ ಮತದಾರರನ್ನು ಕೈಬಿಟ್ಟು, ಅನರ್ಹ ಮತದಾರರನ್ನು ಸೇರಿಸ ಲಾಗಿದೆ. ಇಂತಹ ಕುತಂತ್ರ ಮಾರ್ಗವನ್ನು ಪತ್ತೆಹಚ್ಚಿದ ರಾಹುಲ್‌ಗಾಂಧಿ ಅವರ ದೇಶದಾದ್ಯಂತ ಬಿಜೆಪಿ ಮುಖವಾಡ ಕಳಚಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬೆಂಬಲಿಸಿ ನಾವು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಪಕ್ಷವು ನಮ್ಮ ಸಹಿಸಂಗ್ರಹದ ಮೂಲಕ ಕೇಂದ್ರದ ಬಿಜೆಪಿ ಸರಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ.ಇದನ್ನು ಅರ್ಥ ಮಾಡಿಕೊಂಡು ಪಾರದರ್ಶಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು.ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ರೆಡ್ಡಿ ಮಾತನಾಡಿ ನಮ್ಮ ರಾಷ್ಟಿçÃಯ ನಾಯಕ ರಾಹುಲ್‌ಗಾಂಧಿ ಅವರ ದೂರದೃಷ್ಟಿ, ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಸಂವಿಧಾನದ ಶಕ್ತಿಯ ಮೂಲಕ ದೇಶದ ಜನತೆಗೆ ಮತಗಳ್ಳತನದ ಅಡ್ಡಮಾರ್ಗವನ್ನು ಅನಾವರಣ ಮಾಡಲು ಮುಂದಾಗಿದ್ದಾರೆ.ಇದಕ್ಕೆ ನಮ್ಮ ಸರಕಾರ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಬೆಂಬಲ ನೀಡಿದ್ದಾರೆ.ಪರಿಣಾಮ ನಾವು ವೋಟ್‌ಚೋರಿ ಸಹಿಸಂಗ್ರಹ ನಡೆಸುತ್ತಿದ್ದೇವೆ ಎಂದರು.
ಹಿರಿಯ ಮುಖಂಡ ಕೆ.ಎಂ. ಮುನೇಗೌಡ ಮಾತನಾಡಿ ಮತಗಳ್ಳತನ ಪ್ರಜಾಪ್ರಭುತ್ವ ವಿರೋಧಿ ಕೆಲಸ. ಮತದಾರರಿಗೆ ಮಾಡುವ ದ್ರೋಹ.ಸಂವಿಧಾನದ ಮೌಲ್ಯಗಳಿಗೆ ಮಾಡುವ ಮಹಾ ಮೋಸ.ಕೇಂದ್ರ ಚುನಾವಣೆ ಆಯೋಗ ಇದರ ತಡೆಗೆ ಕ್ಷಿಪ್ರಗತಿಯಲ್ಲಿ ಕ್ರಮವಹಿಸಬೇಕು. ಇಲ್ಲವಾದಲ್ಲಿ ಜನತೆಯ ನಂಬಿಕೆ ಹುಸಿಯಾಗಿ ತಿರುಗಿಬೀಳುವ ಸಂಭವ ಬಂದರೂ ಬರಬಹುದು ಎಂದರು.
ಈ ವೇಳೆ ರಾಜ್ಯ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ರೆಡ್ಡಿ, ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಇಂಟಕ್‌ನ ಉಮೇಶ್,ಯುವ ನಾಯಕ ಬಂಗಾರಿ,ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಹಮೀಮ್,ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಕುಬೇರ್ ಅಚ್ಚು,ಅಡ್ಡಗಲ್ ಶ್ರೀಧರ್, ಮಂಗಳಾ ಪ್ರಕಾಶ್,ಡ್ಯಾನ್ಸ್ ಶ್ರೀನಿವಾಸ್, ನಾರಾಯಣಮ್ಮ,ಮಮತಾ ಮೂರ್ತಿ, ನಾರಾಯಣಸ್ವಾಮಿ, ಕೋನಪ್ಪಲ್ಲಿ ಕೋದಂಡ,ರಾಜಾಕಾAತ್,ಶ್ರೀಧರ್ ಕಿಸಾನ್ ರಾಮಕೃಷ್ಣಪ್ಪ, ತಿಪ್ಪೇನಹಳ್ಳಿ ನಾರಾಯಣ್, ಯಾಸ್ಮೀನ್ ತಾಜ್ ಮತ್ತಿತರರು ಇದ್ದರು.
೧೪ಸಿಬಿಪಿಎಂ7: ಚಿಕ್ಕಬಳ್ಳಾಪುರದಲ್ಲಿ ನಡೆದ ವೋಟ್‌ಚೋರಿ ಬೆಂಬಲಿಸಿ ನಡೆದ ಸಹಿಸಂಗ್ರಹ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಚಾಲನೆ ನೀಡಿ ಮಾತನಾಡಿದರು.