ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಬೇಡ್ಕರ್ ಹಿಂದೂ ಧರ್ಮ ತೊರೆದು ಮರಳಿ ಮನೆಗೆ ಬಂದ ದಿನವೇ ಧಮ್ಮ ದೀಕ್ಷಾ ದಿನವಾಗಿದೆ: ಕುಂದಾಣದ ಜ್ಞಾನಲೋಕಾ ಬಂತೇಜಿ

ಸುಧಾರಣೆ ಮಾಡಲು ಶ್ರಮಿಸಿದ್ದರು.ಇದು ಅಸಾಧ್ಯ ಎಂದು ಕಂಡಾಗ ಹಿಂದುವಾಗಿ ಹುಟ್ಟಿದ್ದೇನೆ ಹಿಂದುವಾಗಿ ಸಾಯಲಾರೆ ಎನ್ನುವ ಹೇಳಿಕೆ ನೀಡಿ ನೈಜ ಮಾನವ ಧರ್ಮವಾದ ಬೌದ್ಧಧರ್ಮಕ್ಕೆ ಮರಳುತ್ತಾರೆ.ಬಾಬಾ ಸಾಹೇಬರ ಈ ನಡೆ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದ್ದ ಲ್ಲದೆ, ಬಿಡುಗಡೆಯ ಸಾಧನವಾಗಿ ಕಂಡಿದೆ.ಪರಿಣಾಮ ದೇಶದ ಉದ್ದಗಲಕ್ಕೂ ಇಂದು ಬೌದ್ಧ ವಿಹಾರಗಳು ತಲೆಯೆತ್ತಲು, ಉಪಾಸಕರಾಗಿ ಬುದ್ಧನ ಮಾರ್ಗವನ್ನು ಅನುಸರಿಸಲು ಕಾರಣವಾಗಿದೆ

ಧರ್ಮ ತೊರೆದು ಮರಳಿ ಮನೆಗೆ ಬಂದ ದಿನವೇ ಧಮ್ಮ ದೀಕ್ಷಾ ದಿನವಾಗಿದೆ

-

Ashok Nayak Ashok Nayak Oct 15, 2025 12:23 AM

ಚಿಕ್ಕಬಳ್ಳಾಪುರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಶೋಕ ವಿಜಯ ದಶಮಿಯಂದು ೧೪ ಅಕ್ಟೋಬರ್ ೧೯೫೬ರಂದು ನಾಗಪುರದ ದೀಕ್ಷಾ ಭೂಮಿಯಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ದಿನವನ್ನು ಭಾರತೀಯರು ಧಮ್ಮ ದೀಕ್ಷಾದಿನವಾಗಿ ಆಚರಿಸುತ್ತಾ ಬಂದಿದ್ದಾರೆ.ಇದು ಒಂದು ರೀತಿಯಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಪಯಣವಾಗಿದೆ ಎಂದು ಕುಂದಾಣ ಬುದ್ಧವಿಹಾರದ ಜ್ಞಾನಲೋಕಾ ಬಂತೇಜಿ ತಿಳಿಸಿದರು.

ನಗರದ ಬುದ್ಧ ವೃತ್ತದಲ್ಲಿ ಭಗವಾನ್ ಬುದ್ಧ ಸಮಿತಿ,ಜನಪದವಾಗಲಿ ಸಂವಿಧಾನ,ಅಭಿಯಾನ ಒಕ್ಕೂಟದ ಸಹಯೋಗದಲ್ಲಿ ನಡೆದ ೬೯ನೇ ಧಮ್ಮ ದೀಕ್ಷಾ ದಿನದಲ್ಲಿ ಭಾಗವಹಿಸಿ ಅವರು ಮಾತ ನಾಡಿದರು.

ಭಾರತದ ಇತಿಹಾಸವನ್ನು ತಲಸ್ಪರ್ಷಿಯಾಗಿ ಅಧ್ಯಯನ ಮಾಡಿದ್ದ ಜ್ಞಾನಸೂರ್ಯ ಬಾಬಾ ಸಾಹೇಬ ಅಂಬೇಡ್ಕರ್ ಅವರು ಇಲ್ಲಿನ ಕಂದಾಚಾರ, ಅಸಮಾನತೆ, ಜಾತಿಯತೆ,ಮೇಲುಕೀಳು ಭಾವನೆಯಿಂದ ಬೇಸತ್ತಿದ್ದರು. ಹುಟ್ಟಿನಿಂದಲೇ ಜಾತೀಯಯ ಕಳಂಕ ಅಂಟಿಸುವ ಇಲ್ಲಿನ ಸನಾತನಿಗಳ ನಡೆಯಿಂದ ಕುಪಿತರಾಗಿದ್ದರು.

ಇದನ್ನೂ ಓದಿ: Chidambaram Bhat: ಡಿಜಿಟಲ್‌ ವಾಚ್‌ನಿಂದ ಎಐ ತಂತ್ರಜ್ಞಾನದವರೆಗೆ; ಇದು ಚಿದಂಬರಂ ಭಟ್‌ ಯಶಸ್ಸಿನ ಪಯಣ

ಸುಧಾರಣೆ ಮಾಡಲು ಶ್ರಮಿಸಿದ್ದರು.ಇದು ಅಸಾಧ್ಯ ಎಂದು ಕಂಡಾಗ ಹಿಂದುವಾಗಿ ಹುಟ್ಟಿದ್ದೇನೆ ಹಿಂದುವಾಗಿ ಸಾಯಲಾರೆ ಎನ್ನುವ ಹೇಳಿಕೆ ನೀಡಿ ನೈಜ ಮಾನವ ಧರ್ಮವಾದ ಬೌದ್ಧಧರ್ಮಕ್ಕೆ ಮರಳುತ್ತಾರೆ.ಬಾಬಾ ಸಾಹೇಬರ ಈ ನಡೆ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದ್ದ ಲ್ಲದೆ, ಬಿಡುಗಡೆಯ ಸಾಧನವಾಗಿ ಕಂಡಿದೆ.ಪರಿಣಾಮ ದೇಶದ ಉದ್ದಗಲಕ್ಕೂ ಇಂದು ಬೌದ್ಧ ವಿಹಾರಗಳು ತಲೆಯೆತ್ತಲು, ಉಪಾಸಕರಾಗಿ ಬುದ್ಧನ ಮಾರ್ಗವನ್ನು ಅನುಸರಿಸಲು ಕಾರಣವಾಗಿದೆ ಎಂದರು.

ದೀಕ್ಷೆ ಎಂದರೆ ಅಧಿಕೃತವಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುವ ಒಂದು ಪ್ರಕ್ರಿಯೆಯಾಗಿದೆ. ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮ ಅಂಬೇಡ್ಕರ್ ಮೂಲಕ ಪುನರುತ್ಥಾನಗೊಂಡಿದೆ. ದೇವನಹಳ್ಳಿಯ ಕುಂದಾಣ ಎಂಬುದರ ನಿಜನಾಮ ಭಗವಾನ್ ಬುದ್ಧರಿಂದ ದೀಕ್ಷೆ ಪಡೆದ ಕೊಣ್ಣಣ್ಣೇ ಬಂತೇಜಿ ಇದ್ದ ಸ್ಥಳವಾಗಿದ್ದು, ಇದನ್ನು ಈಗ ಕುಂದಾಣ ಎಂದು ಕರೆಯುತ್ತಿದ್ದಾರೆ. ಬುದ್ಧರು ಬೋಧಿಸಿದ ಪಂಚಶೀಲಗಳ ಪಾಲನೆಯಿಂದ ಜೀವನದಲ್ಲಿ ಉನ್ನತಿಯನ್ನು ಪಡೆಯ ಬಹುದು ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೌದ್ಧಧರ್ಮದ ಉಪಾಸಕರು ನಗರದ ಸೆಂಟ್ ಜಾನ್ ಶಾಲೆಯ ಆವರಣದಿಂದ,ಜ್ಞಾನಲೋಕ ಬಂತೇಜಿ ನೇತೃತ್ವದಲ್ಲಿ ಬುದ್ಧವೃತ್ತದವರೆಗೆ ಮೋಂಬತ್ತಿ ಬೆಳಕಿನಲ್ಲಿ ವಿಶ್ವಶಾಂತಿ ಆಶಯವನ್ನು ಮನದಲ್ಲಿ ಪಠಿಸುತ್ತಾ ಬೋದಿಸತ್ವರ ಧ್ಯಾನದಲ್ಲಿ ಮೆರವಣಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ಜ್ಞಾನಲೋಕ ಬಂತೇಜಿ, ಕುಂದಾಣದ ಬುದ್ಧವಿಹಾರ ನಾಗಸೇನಾದ ಉಪಾಸಕ ಸಿದ್ಧಾರ್ಥ, ಬೌದ್ಧಬಿಕ್ಕು ಬಿ.ಹೆಚ್.ನರಸಿಂಹಪ್ಪ, ಯುವ ವಕೀಲ ಉದ್ಯಮಿ ಸಂದೀಪ ಚಕ್ರವರ್ತಿ, ನಗರಸಭೆ ಉಪಾಧ್ಯಕ್ಷ ಗ್ಯಾಸ್ ನಾಗರಾಜ್, ನಗರಸಭೆ ಸದಸ್ಯೆ ಅಣ್ಣೆಮ್ಮ,ಬೌದ್ಧ ಉಪಾಸಕ ಜಿ.ಸಿ.ವೆಂಕಟರೋಣಪ್ಪ, ಶಿಕ್ಷಕ ಕೆ.ಜಿ.ಶ್ರೀನಿವಾಸ್, ಗಾಯಕ ವೆಂಕಟರಾಮ್, ಪ್ರಾಧ್ಯಾಪಕ ಡಾ.ಶಂಕರ್, ವಕೀಲ ನಾಗೇಶ್, ರಾಮಕೃಷ್ಣ ಮತ್ತಿತರರು ಇದ್ದರು.