Shidlaghatta News: ಮಳ್ಳೂರು ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಂಭ್ರಮ
ತಾಲ್ಲೂಕು ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ಬಸ್‌ಸ್ಟ್ಯಾಂಡ್ ಸಮೀಪದ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ ಸಂಭ್ರಮ ದಿಂದ ಆಚರಿಸಲಾಯಿತು. ವಾರ್ಷಿಕ ಮಹೋತ್ಸವದ ಅಂಗವಾಗಿ ಮಾಜಿ ಶಾಸಕ ರಾಜಣ್ಣ ಅವರು ತಮ್ಮ ಕುಟುಂಬ ಸಮೇತ ದೇವಾಲಯಕ್ಕೆ ಆಗಮಿಸಿ ತಮ್ಮ ಮನೆದೇವರಾದ ರಂಗನಾಥ ಸ್ವಾಮಿ ದೇವರಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಕಳಸಗಳನ್ನು ಹೊತ್ತರು.
ಮಳ್ಳೂರು ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯದ ೧೩ನೇ ವರ್ಷದ ವಾರ್ಷಿಕೋತ್ಸವ ಭಕ್ತಿ ಸಂಭ್ರಮದ ಚಿತ್ರ. -
ಶಿಡ್ಲಘಟ್ಟ: ತಾಲ್ಲೂಕು ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದ ಬಸ್‌ಸ್ಟ್ಯಾಂಡ್ ಸಮೀಪದ ರಂಗನಾಥಸ್ವಾಮಿ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ವಾರ್ಷಿಕ ಮಹೋತ್ಸವದ ಅಂಗವಾಗಿ ಮಾಜಿ ಶಾಸಕ ರಾಜಣ್ಣ ಅವರು ತಮ್ಮ ಕುಟುಂಬ ಸಮೇತ ದೇವಾಲಯಕ್ಕೆ ಆಗಮಿಸಿ ತಮ್ಮ ಮನೆದೇವ ರಾದ ರಂಗನಾಥಸ್ವಾಮಿ ದೇವರಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಕಳಸಗಳನ್ನು ಹೊತ್ತರು.
ಇದನ್ನೂ ಓದಿ: Shidlaghatta News: ನಗರಸಭೆ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ತಾವು ಮಾಡಿ ನಗರಾಡಳಿತಕ್ಕೆ ಹಿಡಿ ಶಾಪ ಹಾಕಿದ ಆಟೋ ಚಾಲಕರು
ಈ ಮಹೋತ್ಸವದಲ್ಲಿ ಕೆ.ಮುದುಕದಹಳ್ಳಿ, ಪಿಂಡಿಪಾಪನಹಳ್ಳಿ ಹಾಗೂ ದೊಡ್ಡದಾಸೇನ ಹಳ್ಳಿ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮನೆದೇವರ ವಾರ್ಷಿಕೋತ್ಸವವನ್ನು ಭಕ್ತಿ ಹಾಗೂ ಸಡಗರದಿಂದ ಆಚರಿಸಿದರು. ರಂಗನಾಥಸ್ವಾಮಿ, ಶ್ರೀದೇವಿ ಮತ್ತು ಭೂದೇವಿ ದೇವರುಗಳ ಪ್ರತಿಮೆಯನ್ನು ದೇವಸ್ಥಾನದ ಸುತ್ತ ತಂಬಿಟ್ಟಿನ ದೀಪಗಳು ಮತ್ತು ಕಳಸಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ನಂತರ ಕಳಸದ ನೀರಿನಿಂದ ದೇವಸ್ಥಾನದ ಶಿಖರದ ಚಿನ್ನದ ಕಳಸಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ಹೋಮ, ನೈವೇದ್ಯ, ತೀರ್ಥಪ್ರಸಾದ ವಿತರಣೆ ಹಾಗೂ ಹೂವಿನ ಮತ್ತು ದೀಪಾಲಂಕಾರ, ಸಂಗೀತ ಮೇಳಗಳೊಂದಿಗೆ ವಾರ್ಷಿಕ ಮಹೋತ್ಸವ ಅದ್ದೂರಿ ಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಅರ್ಚಕರಾದ ಎಂ.ಎಸ್. ಗೋಪಿನಾಥ್ ಸೇರಿದಂತೆ ವಿವಿಧ ಗ್ರಾಮಗಳ ಭಕ್ತಾದಿಗಳು ಉಪಸ್ಥಿತರಿದ್ದರು.