ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bagepally News: ಗ್ರಾಮೀಣ ಭಾಗದಲ್ಲಿ ಹೊಸ ಶ್ರೀಮಂತರ ವಿರುದ್ಧ ಹೋರಾಟ ಅಗತ್ಯ: ಡಾ. ಅನಿಲ್ ಆವುಲಪ್ಪ

ಸೆ.26, 27,28ರಂದು ಬಾಗೇಪಲ್ಲಿಯಲ್ಲಿ ರಾಜ್ಯಮಟ್ಟದ 13ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದ್ದು ಇದಕ್ಕೆ ಬೇಕಾದ ಸಂಪನ್ಮೂಲಗಳ ಹೊಂದಾಣಿಕೆ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಜನಪರ ಚಳವಳಿಯ ಸಂಗಾತಿಗಳೊಟ್ಟಿಗೆ  ಸುಧೀರ್ಘ ಸಮಾಲೋಚನೆ ನಡೆಸುವ ಉದ್ದೇಶದಿಂದ ಪೂರ್ವಭಾವಿ ಸಭೆ ಕರೆಯಲಾಗಿದೆ.

ಗ್ರಾಮೀಣ ಭಾಗದಲ್ಲಿ ಹೊಸ ಶ್ರೀಮಂತರ ವಿರುದ್ಧ ಹೋರಾಟ ಅಗತ್ಯ

ಕ್ಯಾಪಿಟಲಿಸಂ ಕಾರಣವಾಗಿ ಗ್ರಾಮೀಣ ಭಾಗದಲ್ಲಿ ಸೃಷ್ಟಿಯಾಗಿರುವ ಹೊಸ ಶ್ರೀಮಂತರ ವಿರುದ್ಧ ಹೋರಾಟ ಅಗತ್ಯ ಎಂದು ಡಿವೈಎಫ್‌ಐ 13ನೇ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಅನಿಲ್ ಆವುಲಪ್ಪ ತಿಳಿಸಿದರು. -

Profile
Ashok Nayak Aug 12, 2026 10:00 PM

ಬಾಗೇಪಲ್ಲಿ: ಕ್ಯಾಪಿಟಲಿಸಂ ಕಾರಣವಾಗಿ ಗ್ರಾಮೀಣ ಭಾಗದಲ್ಲಿ ಸೃಷ್ಟಿಯಾಗಿರುವ ಹೊಸ ಶ್ರೀಮಂತರ ವಿರುದ್ಧ ಹೋರಾಟ ಅಗತ್ಯ ಎಂದು ಡಿವೈಎಫ್‌ಐ 13ನೇ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಅನಿಲ್ ಆವುಲಪ್ಪ ತಿಳಿಸಿದರು.

ನಗರದ ನಂದಿ ರಂಗಮಂದಿರದಲ್ಲಿ ಬುಧವಾರ ನಡೆದ ಡಿವೈಎಫ್‌ಐ 13ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಸೆ.26, 27,28ರಂದು ಬಾಗೇಪಲ್ಲಿಯಲ್ಲಿ ರಾಜ್ಯಮಟ್ಟದ 13ನೇ ರಾಜ್ಯ ಸಮ್ಮೇಳನ ಆಯೋಜಿಸ ಲಾಗಿದ್ದು ಇದಕ್ಕೆ ಬೇಕಾದ ಸಂಪನ್ಮೂಲಗಳ ಹೊಂದಾಣಿಕೆ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಜನಪರ ಚಳವಳಿಯ ಸಂಗಾತಿಗಳೊಟ್ಟಿಗೆ ಸುಧೀರ್ಘ ಸಮಾಲೋಚನೆ ನಡೆಸುವ ಉದ್ದೇಶದಿಂದ ಪೂರ್ವಭಾವಿ ಸಭೆ ಕರೆಯಲಾಗಿದೆ. ಇದರಲ್ಲಿ ರೈತಪರ, ಕನ್ನಡಪರ, ಕಾರ್ಮಿಕಪರ, ದಲಿತಪರ, ಅಸಂಘಟಿತ ಕಾರ್ಮಿಕ ಸಂಘಟನೆಗಳು, ನೀರಾವರಿ ಹೋರಾಟಗಾರರು ಭಾಗವಹಿಸಿರುವುದು ನೋಡಿದರೆ ಸಮಸಮಾಜದ ಆಶಯಗಳು ಇನ್ನೂ ಜೀವಂತವಾಗಿರುವುದು ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: Bagepally News: ಬಾಗೇಪಲ್ಲಿ: ಬಿಜಿಎಸ್ ಶಾಲಾ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ಕಾರ್ಯಕ್ರಮ

ಆಧುನಿಕ ಸಮಾಜದಲ್ಲಿನ ಹಲವು ಮೂಲಭೂತ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ. ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ 100ನೇ ಜನ್ಮದಿನಾ ಚರಣೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕ್ಯೂಬಾದ ಸಾಮಾಜಿಕ ವ್ಯವಸ್ಥೆ ಹಾಗೂ ಅಲ್ಲಿನ ಜನರ ಮಾನವ ಘನತೆಯ ಕುರಿತ ಚರ್ಚೆ ನಡೆಯುತ್ತಿದೆ. ಮಾನವ ಘನತೆಯ ರಕ್ಷಣೆಗೆ ಕ್ಯೂಬಾದ ಸಂವಿಧಾನದಲ್ಲಿ ಹಲವು ಅಂಶಗಳನ್ನು ಅಳವಡಿಸಲು ಫಿಡೆಲ್ ಕ್ಯಾಸ್ಟ್ರೋ ಅವರ ನಾಯಕತ್ವ ಪ್ರಮುಖ ಕಾರಣವಾಗಿತ್ತು ಎಂದರು.

ಯಾರಾದರಾಗಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಧ್ಯಯನ ಮಾಡಿದಾಗ ಅವರಲ್ಲಿ ಸಹಜವಾಗಿ ಸಾಮಾಜಿಕ ಸಾಮರಸ್ಯ ಹಾಗೂ ಸಮಾನತೆಯ ಅಗತ್ಯದ ಅರಿವು ಮೂಡು ತ್ತದೆ. ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ದೇಶದ ಆರ್ಥಿಕತೆ, ಭೂಮಿ, ಕೈಗಾರಿಕೆಗಳು ಹಾಗೂ ವಿಮಾ ಕ್ಷೇತ್ರವಯ ರಾಷ್ಟ್ರೀಯ ಸ್ವತ್ತಾಗಿರಬೇಕು, ಇದರ ಮೇಲೆ ಬಂಡವಾಳಶಾಹಿಗಳ ಹಸ್ತಕ್ಷೇಪ ಇರಬಾರದು ಎಂಬುದನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅವರು ಬಲವಾಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.

12cbpm5k

ಇತ್ತೀಚಿನ ದಿನಗಳಲ್ಲಿ “ಹೋರಾಟಗಳಿಂದ ನಮಗೇನೂ ಸಿಗುವುದಿಲ್ಲ” ಎಂಬ ಮನೋಭಾವ ಜನರಲ್ಲಿ ಬೆಳೆದಿರುವುದು ಆತಂಕಕಾರಿ. ಜನಪರ ಹೋರಾಟಗಳ ಮಹತ್ವವನ್ನು ಅರ್ಥ ಮಾಡಿ ಕೊಳ್ಳುವಂತೆ ಹೊಸ ತಲೆಮಾರಿನಲ್ಲಿ ಅರಿವು ಮೂಡಿಸಬೇಕಾಗಿದೆ. ತಾವು ಬಾಗೇಪಲ್ಲಿ ಚುನಾವಣೆ ಯಲ್ಲಿ ಸ್ಪರ್ಧಿಸಲು ಮುಂದಾದ ಸಂದರ್ಭದಲ್ಲಿ ತಮ್ಮ ಕುರಿತು ಅಪಪ್ರಚಾರ ನಡೆಸಲಾಗಿತ್ತು. ಆದರೆ ಇಂತಹ ಅಪಪ್ರಚಾರಗಳಿಗೆ ಹೆದರದೆ ಜನಪರ ವಿಚಾರಗಳಿಗಾಗಿ ಹೋರಾಟ ಮುಂದುವರಿಸ ಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬರುತ್ತಿರುವ ಹೊಸ ಶ್ರೀಮಂತ ವರ್ಗದ ಅಸಮಾನತೆಗಳ ವಿರುದ್ಧ ಹಾಗೂ ಕೋಮುವಾದದ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ. ಹೊಸ ತಲೆಮಾರಿನ ಯುವ ಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಆಯಾಮಗಳ ಕುರಿತು ಅರಿವು ಮೂಡಿಸಬೇಕು. ವಿಶೇಷವಾಗಿ ಜೆನ್-ಝಡ್ ಯುವಜನರನ್ನು ವೈಚಾರಿಕವಾಗಿ ಬೆಳೆಸುವ ಕೆಲಸ ನಡೆಯಬೇಕು ಎಂದು ಸಲಹೆ ನೀಡಿದರು.

ಯುವಜನರನ್ನು ಜನಪರ ಹೋರಾಟಗಳೊಂದಿಗೆ ಬೆಸೆಯುವ ಮೂಲಕ ಡಿವೈಎಫ್‌ಐ ಸಮ್ಮೇಳನಕ್ಕೆ ಹೊಸ ದಿಕ್ಕು ನೀಡೋಣ. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಡಾ. ಅನಿಲ್ ಆವುಲಪ್ಪ ಕರೆ ನೀಡಿದರು.

*
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ, ಚಿಕ್ಕಬಳ್ಳಾ ಪುರ ಜಿಲ್ಲೆಗೆ ಶಾಶ್ವತ ನೀರಾವರಿ ವ್ಯವಸ್ಥೆ ಬೇಕು ಎಂದು ಹೋರಾಟ ರೂಪಿಸಿದ್ದೇ ಡಿವೈಫ್‌ಐ ಆಗಿದೆ. ಆನಂತರ ಹಲವಾರು ಸಂಘಟನೆಗಳು ಹೋರಾಟ ಮಾಡಿವೆ. ಇಂತಹ  ಜನಪರ ಸಂಘಟನೆಯಾದ ಡಿವೈಎಫ್‌ಐ ರಾಜ್ಯ ಸಮ್ಮೇಳನವು ಬಾಗೇಪಲ್ಲಿಯಲ್ಲಿ ನಡೆಯುತ್ತಿರುವುದು ಸಂತೋಷವಾಗಿದೆ. ಜಿಲ್ಲೆಯ ಆತಿಥ್ಯವನ್ನು ರಾಜ್ಯದ ಉದ್ದಗಲಕ್ಕೂ ಪಸರಿಸುವ ಕಾರಣ,ಕಾರ್ಯಕ್ರಮ ಯಶಸ್ವಿಯಗಲಿ ಎನ್ನುವ ಉದ್ದೇಶದಿಂದ ವೈಯಕ್ತಿಕವಾಗಿ 50 ಸಾವಿರ ದೇಣಿಗೆಯನ್ನು ನೀಡುತ್ತಿರುವುದಾಗಿ ಅವರು ಘೋಷಿಸಿದರು.

ಇದೇ ವೇಳೆ, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ,ಲಕ್ಷ್ಮೀನಾರಾಯಣರೆಡ್ಡಿ, ದಸಂಸ ಮುಖಂಡರದ ಸು.ಧಾ.ವೆಂಕಟೇಶ್, ಕೆ.ಸಿ.ರಾಜಾಕಾಂತ್, ಬಿ.ವಿ.ಆನಂದ್,ವಕೀಲ ಮಟಮಪ್ಪ,ಅಣ್ಣಮ್ಮ, ಆರ್.ವೆಂಕಟರಾಮ್, ಎಂ.ಪಿ ಮುನಿವೆಂಕಟಪ್ಪ, ಮುನಿಕೃಷ್ಣಪ್ಪ, ನಡಿಪನ್ನ, ಕೆ.ಎಸ್.ನಾರಾಯಣ ಸ್ವಾಮಿ, ಗಡ್ಡಂ ವೆಂಕಟೇಶ್, ಕಾಮ್ರೆಡ್ ಲವಿತ್ರ, ಮತ್ತಿತರರು ಮಾತನಾಡಿದರು.