ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಗುರುತಿನ ಚೀಟಿಯಿರುವ ಶಾಲಾ ಮಕ್ಕಳಿಗೆ 10 ದಿನಗಳ ವಿಶೇಷ ರಿಯಾಯಿತಿ ಘೋಷಣೆ

ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳ ಸಮೀಪ ಇಂತಹ ಗೋ ಕಾರ್ಟಿಂಗ್ ಸೌಲಭ್ಯ ಆರಂಭವಾಗಿರುವುದು ಸಂತೋಷ ತಂದಿದೆ. ಈಶಾ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ, ಸಾಹಸ ಕೀಡೆಗಳಲ್ಲಿ ಒಲವಿರುವವರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಕಡಿಮೆ ದರದಲ್ಲಿ 5 ರಿಂದ 7 ರೌಂಡ್‌ಗಳ ಅನುಭವ ಪಡೆಯುವ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ ಎಂದರು

ಈಶಾ ಸಮೀಪ ವಾಯು ವೆಲಾಸಿಟಿ ಅಡ್ವೆಂಚರ್ ಗೋ ಕಾರ್ಟಿಂಗ್ ಶುಭಾರಂಭ

ಬೆಂಗಳೂರಿನಲ್ಲಿ ನೋಡಬಹುದಾದ ಮನರಂಜನಾ ಅಡ್ವೆಂಚರ್ ಕಾರು ರೇಸಿನ ಅನುಭವ ನೀಡುವ ಗೋ ಕಾರ್ಟಿಂಗ್‌ಗೆ ಸೋಮವಾರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಯುವ ಮುಖಂಡ ಗಿರೀಶ್ ಹರಿಸ್ಥಳ  ಚಾಲನೆ ನೀಡಿ ಶುಭ ಕೋರಿದ್ದಾರೆ. -

Profile
Ashok Nayak Apr 20, 2026 9:16 PM

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ನೋಡಬಹುದಾದ ಮನರಂಜನಾ ಅಡ್ವೆಂಚರ್ ಕಾರು ರೇಸಿನ ಅನುಭವ ನೀಡುವ ಗೋ ಕಾರ್ಟಿಂಗ್‌ಗೆ ಸೋಮವಾರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಯುವ ಮುಖಂಡ ಗಿರೀಶ್ ಹರಿಸ್ಥಳ ಚಾಲನೆ ನೀಡಿ ಶುಭ ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಕೇಶವರೆಡ್ಡಿ, ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳ ಸಮೀಪ ಇಂತಹ ಗೋ ಕಾರ್ಟಿಂಗ್ ಸೌಲಭ್ಯ ಆರಂಭವಾಗಿರುವುದು ಸಂತೋಷ ತಂದಿದೆ. ಈಶಾ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ, ಸಾಹಸ ಕೀಡೆಗಳಲ್ಲಿ ಒಲವಿರುವವರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಕಡಿಮೆ ದರದಲ್ಲಿ 5 ರಿಂದ 7 ರೌಂಡ್‌ಗಳ ಅನುಭವ ಪಡೆಯುವ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.

ಇದನ್ನೂ ಓದಿ: Chikkaballapur News: ಬಸವೇಶ್ವರರ ನೇತೃತ್ವದ ವಚನ ಚಳವಳಿ ಕಾಯಕ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾ ಚಳವಳಿಯಾಗಿದೆ : ಜಿಲ್ಲಾಧಿಕಾರಿ ಜಿ ಪ್ರಭು

ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮದ ಸಮೀಪ ಈಶಾ ಫೌಂಡೇಶನ್‌ಗೆ ಹೋಗುವ ದಾರಿಯಲ್ಲಿಯೇ ಸಮೃದ್ಧಿ ರೀಟ್ರೀಟ್ ವಾಯು ವೆಲಾಸಿಟಿ ಗೋ ಕಾರ್ಟಿಂಗ್’(ಮನರಂಜನಾ ಅಡ್ವೆಂಚರ್ ಕಾರು ಆಟ)ದ ತಾಣವಿದ್ದು ಪ್ರವಾಸಿಗಳಿಗೆ, ವೀಕೆಂಡ್ ರಜೆಯ ಮೋಜು ಅನುಭವಿಸುವವರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ ಎಂಬುದು ಈ ಸಂಸ್ಥೆಯ ವ್ಯವಸ್ಥಾಪಕ ರವಿಕುಮಾರ್ ಅವರ ಮಾತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ ಗೋ ಕಾರ್ಟಿಂಗ್ ಮನರಂಜನಾ ಅಡ್ವೆಂಚರ್ ಕಾರು ಆಟ ಇರಲಿಲ್ಲ. ಇದಕ್ಕಾಗಿ ದೂರದ ಪ್ರದೇಶಗಳಿಗೆ ಹೋಗಬೇಕಾಗುತ್ತಿತ್ತು. ನಾನು ಮೂಲತಃ ಗೊಲ್ಲಹಳ್ಳಿ ನಿವಾಸಿಯಾಗಿದ್ದು, ಇಲ್ಲಿಯೇ ಗೋ ಕಾರ್ಟಿಂಗ್ ಆರಂಭಿಸುವುದು ನನ್ನ ಕನಸಾಗಿತ್ತು. ಕಳೆದ ಒಂದು ವರ್ಷದ ಪರಿಶ್ರಮದ ಫಲವಾಗಿ, ಇಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ತಾಂತ್ರಿಕವಾಗಿ ಲೆಕ್ಕ ಹಾಕಿದ ಟ್ರಾಕ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.

cart

ಇದು ಒಂದು ಅಡ್ವೆಂಚರ್ ಗೇಮ್ ಆಗಿದ್ದು, ಎಫ್-1 ರೇಸಿಂಗ್ ಅನುಭವ ನೀಡುವ ರೀತಿಯ ಕಾರು ಗಳನ್ನು ತರಲಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ಜನರು ಬಂದು ಈ ಅನುಭವ ಪಡೆಯಬಹುದು ಎಂದರು. ಇನ್ನೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅನುಭವವಿಲ್ಲದವರೂ ಸಹ ಸುಲಭ ವಾಗಿ ಕಾರ್ ಓಡಿಸಬಹುದಾಗಿದೆ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ವಾಹನ ನಿಲ್ಲಿಸುವ ವ್ಯವಸ್ಥೆಯೂ ಅಳವಡಿಸಲಾಗಿದೆ ಎಂದು ಹೇಳಿದರು.

gokarting

ನಾನು ಕೆ.ವಿ.ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಸಂಸ್ಥೆಯ ಅಧ್ಯಕ್ಷ ನವೀನ್ ಕಿರಣ್ ಅವರು ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿರುವುದು ನನಗೆ ಸಂತೋಷ ತಂದಿದೆ. ವಿದ್ಯಾರ್ಥಿ ದಿನಗಳಲ್ಲಿ ಜಿಲ್ಲೆಗೆ ಏನಾದರೂ ಮಾಡಬೇಕು ಎಂದು ಅವರು ಹೇಳುತ್ತಿದ್ದರು. ಇಂದು ನನ್ನ ಸ್ವಗ್ರಾಮದಲ್ಲೇ ಗೋ ಕಾರ್ಟಿಂಗ್ ಆರಂಭಿಸಿರುವುದು ಸಂತೋಷಕರ. ಅವರು ನನಗೆ ಪ್ರೇರಣೆ ಎಂದು ರವಿಕುಮಾರ್ ಅಭಿಪ್ರಾಯಪಟ್ಟರು.

ಗೋ ಕಾಟಿಂಗ್ ಉದ್ಘಾಟನೆ ಅಂಗವಾಗಿ ವಿಶೇಷ ರಿಯಾಯಿತಿ ಘೋಷಿಸಲಾಗಿದ್ದು ಗುರುತಿನ ಕಾರ್ಡ್ ತಂದರೆ ವಿದ್ಯಾರ್ಥಿಗಳಿಗೆ 5 ಲ್ಯಾಪ್‌ಗಳಿಗೆ 249 ಹಾಗೂ 7 ಲ್ಯಾಪ್‌ಗಳಿಗೆ 299 ದರ ನಿಗದಿ ಪಡಿಸ ಲಾಗಿದೆ. ಸಾರ್ವಜನಿಕರಿಗೆ 5 ಲ್ಯಾಪ್‌ಗಳಿಗೆ 299 ಹಾಗೂ 7 ಲ್ಯಾಪ್‌ಗಳಿಗೆ 349 ದರ ನಿಗದಿಪಡಿಸ ಲಾಗಿದ್ದು, ಈ ರಿಯಾಯಿತಿ ಹತ್ತು ದಿನಗಳವರೆಗೆ ಲಭ್ಯವಿರುತ್ತದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9482482934, 7019486403 ಗೆ ಸಂಪರ್ಕಿಸಬಹುದು ಎಂದು ರವಿಕುಮಾರ್ ತಿಳಿಸಿದ್ದಾರೆ.